ದರ್ಶನ್ ತೂಗುದೀಪ ಆಪ್ತ ಧನ್ವೀರ್ ಗೌಡ ಸಂದರ್ಶನವೊಂದರಲ್ಲಿ ಮಾತನಾಡುತ್ತ ನಟ ಧನ್ವೀರ್ ಗೌಡ ಅವರು ನಟ ದರ್ಶನ್ ಸದ್ಯದ ಪರಿಸ್ಥಿತಿ ಹಾಗೂ ಜೀವನದ ದೃಷ್ಟಿಕೋನದ ಬಗ್ಗೆ ಮಾತನ್ನಾಡಿದ್ದಾರೆ. ತುಂಬಾ ಕುತೂಹಲಕರ ವಿಷಯವನ್ನೂ ಸಹ ಧನ್ವೀರ್ ಗೌಡ..
ನಟ ದರ್ಶನ್ ತೂಗುದೀಪ ಆಪ್ತ ಧನ್ವೀರ್ ಗೌಡ ಅವರು ಸದ್ಯ ತಮ್ಮ 'ವಾಮನ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತ ನಟ ಧನ್ವೀರ್ ಗೌಡ ಅವರು ನಟ ದರ್ಶನ್ ಸದ್ಯದ ಪರಿಸ್ಥಿತಿ ಹಾಗೂ ಜೀವನದ ದೃಷ್ಟಿಕೋನದ ಬಗ್ಗೆ ಮಾತನ್ನಾಡಿದ್ದಾರೆ. ತುಂಬಾ ಕುತೂಹಲಕರ ವಿಷಯವನ್ನೂ ಸಹ ಧನ್ವೀರ್ ಗೌಡ ಹೇಳಿದ್ದಾರೆ. ಹಾಗಿದ್ದರೆ ನಟ ದರ್ಶನ್ ತೂಗುದೀಪ ಬಗ್ಗೆ ಧನ್ವೀರ್ ಗೌಡ ಅದೇನು ಹೇಳಿದ್ದಾರೆ ನೋಡಿ..
'ಈಗ ನಟ ದರ್ಶನ್ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರಿಗೆ ಈಗ ಲೈಫಲ್ಲಿ ಎಲ್ಲಾನೂ ಗೊತ್ತಾಗಿದೆ. ಯಾರನ್ನು ಎಲ್ಲಿ ಇಟ್ಟಿರಬೇಕು, ಯಾರನ್ನು ಎಷ್ಟು ನಂಬಬೇಕು, ಯಾರು ತಮ್ಮಿಂದ ಉಪಯೋಗ ಪಡೆದುಕೊಂಡು ದೂರ ಆಗ್ತಾರೆ, ಯಾರು ಯಾವತ್ತೂ ಹತ್ತಿರ ಇರ್ತಾರೆ, ಎಲ್ಲವನ್ನೂ ಈಗ ನಟ ದರ್ಶನ್ ಅವರು ಅರಿತಿದ್ದಾರೆ. ಹಾಗಾಗಿಯೇ ಅವರು ಈಗ ವಿಭಿನ್ನವಾಗಿ ಇದ್ದಾರೆ. ಯಾರ ಜೊತೆ ಎಷ್ಟರಬೇಕೋ ಅಷ್ಟು ಮಾತ್ರ ಮಾತುಕತೆ ಆಡ್ತಾರೆ, ಹೋಗ್ತಾರೆ ಹಾಗೂ ಬರ್ತಾರೆ.
ಫ್ಯಾನ್ಸ್‌ಗೂ 'ದರ್ಶನ' ನೀಡಲಿಲ್ಲ, ಧನ್ವೀರ್ ಜೊತೆ ನಿಲ್ಲಲ್ಲಿಲ್ಲ: ದರ್ಶನ್ ಈ ನಡೆ ರಹಸ್ಯ ಬಯಲು..!
ನಟ ದರ್ಶನ್ ಅವರೀಗ ಸಂಪೂರ್ಣವಾಗಿ ಬೇರೆಯದೇ ವ್ಯಕ್ತಿ ಆಗಿದ್ದಾರೆ. ಕಾರಣ, ಕಷ್ಟಕಾಲದಲ್ಲಿ ಆಗಿದ್ದು ಯಾರು, ಕೈ ಕೊಟ್ಟಿದ್ದು ಯಾರು ಎಲ್ಲವೂ ಅವರಿಗೀಗ ಅರ್ಥವಾಗಿದೆ. ಸದ್ಯ ಅವರ ಆರೋಗ್ಯ ಕೂಡ ಸರಿ ಇಲ್ಲ. ಹೀಗಾಗಿ ಅವರೀಗ ಆರೋಗ್ಯ ಹಾಗೂ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೊರಗಡೆ ಕಾರ್ಯಕ್ರಮಗಳಿಗೆ ಹೋಗುವುದು ಸದ್ಯಕ್ಕೆ ಅವರ ಆದ್ಯತೆ ಅಲ್ಲ' ಎಂದಿದ್ದಾರೆ ನಟ ಧನ್ವೀರ್ ಗೌಡ.
ಹೌದು, ನಟ ದರ್ಶನ್ ಅವರಿಗೆ ಈಗ ಅನಾರೋಗ್ಯದ ನಿಮಿತ್ತ ಬೇಲ್ ಕೊಡಲಾಗಿದೆ. ಹಾಗೇ ಪೆಂಡಿಂಗ್ ಇರುವ ಶೂಟಿಂಗ್ ಹಾಗೂ ಡಬ್ಬಿಂಗ್ ಮಾಡಲು, ದೇಶದಲ್ಲಿ ಓಡಾಡಲು ಹೀಗೆ ಕೆಲವು ಕೆಲಸಗಳಿಗೆ ಷರತ್ತುಬದ್ಧ ಪರ್ಮಿಷನ್ ನೀಡಲಾಗಿದೆ. ಆದರೆ, ನಟ ದರ್ಶನ್ ಅವರು ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಹೋಗಲು ಕೆಲವು ಸಮಸ್ಯೆಗಳಿವೆ. ಕಾರಣ, ಅಲ್ಲೇನೋ ಪ್ರಶ್ನೆ ಕೇಳಿದರೆ ನಟ ದರ್ಶನ್ ಅಲ್ಲಿ ಏನೇನೋ ಮನಸ್ಸಿಗೆ ಬಂದ ಉತ್ತರ ಕೊಟ್ಟರೆ ಅವರು ಮತ್ತೆ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.
ಎಲ್ಲಾನೂ ಅಮ್ಮನಿಗೇ ಮೊದ್ಲು ಗೊತ್ತಾಗೋದು ಮಕ್ಕಳ ಬಗ್ಗೆ.. ಚಂದನ್ ಶೆಟ್ಟಿ ಹೀಗ್ ಅಂದಿದ್ಯಾಕೆ?
ಸೋ, ನಟ ದರ್ಶನ್ ಸದ್ಯ ಸಾರ್ವಜನಿಕವಾಗಿ ಈ ಎಲ್ಲ ಕಾರಣಗಳಿಂದ ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ, ಅವರಿಗೆ ಜೀವನ ಹೊಸ ಪಾಠವನ್ನು ಕಲಿಸಿದೆ. ಅದರಂತೆ ಅವರ ನಡೆ ಈಗ ಬದಲಾಗಿದೆ. ಹಾಗೂ, ಮಂದೆ ಕೂಡ ಸಂಪೂರ್ಣ ಬದಲಾಗಲಿದೆ ಎಂಬ ಸೂಚನೆ ನೀಡಿದ್ದಾರೆ ದರ್ಶನ್ ಆಪ್ತ ಧನ್ವೀರ್ ಎನ್ನಬಹುದೇನೋ! ನೀವೇನಂತೀರಾ..?