ಎಲ್ಲಾನೂ ಅಮ್ಮನಿಗೇ ಮೊದ್ಲು ಗೊತ್ತಾಗೋದು ಮಕ್ಕಳ ಬಗ್ಗೆ.. ಚಂದನ್ ಶೆಟ್ಟಿ ಹೀಗ್ ಅಂದಿದ್ಯಾಕೆ?

ಒಂದು ಸಂದರ್ಶನದಲ್ಲಿ ಚಂದನ್ ಶೆಟ್ಟಿಯವರಿಗೆ 'ನಿಮ್ಮ ಅಮ್ಮನಿಗೆ ನಿಮ್ಮ ವಿಚ್ಛೇದನದ ಬಗ್ಗೆ ಗೊತ್ತಾದಾಗ ಏನು ಅಂದ್ರು?' ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಚಂದನ್ ಶೆಟ್ಟಿ 'ಅಮ್ಮನಿಗೆ ಡಿವೋರ್ಸ್ ವಿಷಯ ಗೊತ್ತಾಗಿದ್ದು ಮೊದಲಲ್ಲ..

Chandan Shetty talk on mother and his divorce matter

ಚಂದನ್ ಶೆಟ್ಟಿ ಡಿವೋರ್ಸ್ ಸಂಗತಿ ಇಡೀ ಜಗತ್ತಿಗೇ ಗೊತ್ತು ಎನ್ನಬಹುದು. ಅದು ಅವರ ವೈಯಕ್ತಿಕ ಜೀವನದ ಘಟನೆ ಆಗಿದ್ದರೂ, ಅವರು ಸೆಲೆಬ್ರೆಟಿ ಅನ್ನೋ ಕಾರಣಕ್ಕೆ ಅದನ್ನು ಪ್ರಶ್ನಿಸುವ ಅಧಿಕಾರವನ್ನು ಎಲ್ಲರೂ ಸ್ವಯಂ ಆಗಿ ತೆಗೆದುಕೊಂಡುಬಿಟ್ಟಿದ್ದಾರೆ. ಅವರು ಮನೆಯಿಂದ ಹೊರಗೆ ಹೋದರೆ ಸಾಕು, ಅವರ ಡಿವೋರ್ಸ್, ಮತ್ತೆ ಮದುವೆ ಆಗೋದು ಯಾವಾಗ? ಈ ಬಗ್ಗೆಯೇ ಪ್ರಶ್ನೆಗಳು ತೂರಿ ಬರುತ್ತವೆ. ಅದಕ್ಕೆ ಅವರು ಕೆಲವೊಮ್ಮೆ ಉತ್ತರಿಸುತ್ತಾರೆ. ಇಲ್ಲೊಂದು ಪ್ರಶ್ನೆಗೆ ಅವರೇನು ಉತ್ತರ ಕೊಟ್ಟಿದ್ದಾರೆ ನೋಡಿ.. 

ಹೌದು, ಒಂದು ಸಂದರ್ಶನದಲ್ಲಿ ಚಂದನ್ ಶೆಟ್ಟಿಯವರಿಗೆ 'ನಿಮ್ಮ ಅಮ್ಮನಿಗೆ ನಿಮ್ಮ ವಿಚ್ಛೇದನದ ಬಗ್ಗೆ ಗೊತ್ತಾದಾಗ ಏನು ಅಂದ್ರು?' ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಚಂದನ್ ಶೆಟ್ಟಿ 'ಅಮ್ಮನಿಗೆ ಡಿವೋರ್ಸ್ ವಿಷಯ ಗೊತ್ತಾಗಿದ್ದು ಮೊದಲಲ್ಲ, ನಮ್ಮ ನಡುವೆ ಸಾಮರಸ್ಯದ ಕೊರತೆ ಇದೆ ಎಂಬುದು ಮೊದಲೇ ಗೊತ್ತಾಗಿದೆ. ಅಮ್ಮ ಅಂದ್ರೆನೇ ಹಾಗೆ, ಅವರಿಗೆ ಮಕ್ಕಳ ಬಗ್ಗೆ, ಮಕ್ಕಳ ಮನಸ್ಸಿನಲ್ಲಿ ಇರೋದ್ರ ಬಗ್ಗೆ ಹೇಳದಿದ್ದರೂ ಗೊತ್ತಾಗುತ್ತೆ, ಅದೇ ಅಮ್ಮಂದಿರ ಸ್ಪೆಷಾಲಿಟಿ ಎನ್ನಬಹುದೇನೋ!

Latest Videos

ಚಂದನ್ ಶೆಟ್ಟಿ ಎರಡನೇ ಮದ್ವೆಗೆ ರೆಡಿ?... ಹುಡ್ಗಿ ಹೀಗಿರ್ಬೇಕಂತೆ ನೋಡ್ರೀ..!

ನಾನು ಹೇಳದಿದ್ದರೂ ಅಮ್ಮನಿಗೆ ನಮ್ಮಿಬ್ಬರ ನಡುವೆ ಹೊಂದಾಣಿಕೆ ಆಗುತ್ತಿಲ್ಲ ಎಂಬ ಸೂಕ್ಷ್ಮ ವಿಷಯ ಗಮನಕ್ಕೆ ಬಂದಿದೆ. ನಮ್ಮಿಬ್ಬರ ನಡುವೆ ಹೊಂದಾಣಿಕೆ ಮೂಡಿಸಲ ಅಮ್ಮ ಕೂಡ ಆದಷ್ಟೂ ಪ್ರಯತ್ನ ಪಟ್ಟಿದ್ದಾರೆ. ಆದರೆ, ಅದು ಸಾಧ್ಯವೇ ಇಲ್ಲ ಅಂದಾಗ, ಇಬ್ಬರೂ ದೂರವಾದರೇ ಲೈಫ್ ಚೆನ್ನಾಗಿ ಇರುತ್ತೆ ಅಂತಾದರೆ ಹಾಗಾದ್ರೂ ಆಗ್ಲಿ ಎಂದು ಅಮ್ಮನೇ ಹೇಳಿದ್ದಾರೆ. ಆದ್ದರಿಂದ ಅಮ್ಮನಿಗೆ ಡಿವೋರ್ಸ್ ಆದ್ಮೇಲೆ ಗೊತ್ತಾಗಿದ್ದಲ್ಲ, ಡಿವೋರ್ಸ್ ಆಗೋದು ಕೂಡ ಅವರಿಗೆ ಗೊತ್ತಾಗಿದೆ' ಎಂದಿದ್ದಾರೆ ಚಂದನ್ ಶೆಟ್ಟಿ. 

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರಿಬ್ಬರೂ ಬಿಗ್ ಬಾಸ್ ಕನ್ನಡ ಶೋ ಮೂಲಕ ಪರಿಚಯವಾಗಿ ಲವ್ ಮಾಡಿ ಮದುವೆ ಆಗಿದ್ರು. ಆದರೆ ಲವ್ ಮಾಡುವಾಗ ಇದ್ದ ಹೊಂದಾಣಿಕೆ ಮದುವೆ ಆದ್ಮೆಲೆ ಯಾಕೋ ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಇಬ್ಬರೂ ಪರಸ್ಪರ ಮಾತನಾಡಿಕೊಂಡು ಒಪ್ಪಿಗೆ ಮೇರೆಗೆ ವಿಚ್ಚೇದನ ತೆಗೆದುಕೊಂಡಿದ್ದಾರೆ. ಅವರಿಬ್ಬರ ಮದುವೆ ಹಾಗೂ ಡಿವೋರ್ಸ್ ಎರಡೂ ಘಟನೆಗಳು ಸಕತ್ ಸುದ್ದಿ ಆಗಿವೆ. ಈಗ ಡಿವೋರ್ಸ್ ಅಗಿದ್ದರೂ ಕೂಡ ಅವರಿಬ್ಬರ ಮರುಮದುವೆ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಲೇ ಇರುತ್ತವೆ. 

ಫ್ಯಾನ್ಸ್‌ಗೂ 'ದರ್ಶನ' ನೀಡಲಿಲ್ಲ, ಧನ್ವೀರ್ ಜೊತೆ ನಿಲ್ಲಲ್ಲಿಲ್ಲ: ದರ್ಶನ್ ಈ ನಡೆ ರಹಸ್ಯ ಬಯಲು..!

ಅದರಲ್ಲೂ ಮುಖ್ಯವಾಗಿ, ಚಂದನ್ಗ ಶೆಟ್ಟಿ ಅವರು ಎಲ್ಲೇ ಹೋಗಲಿ, ಅವರಿಗೆ ಮರುಮದುವೆ ಯಾವಾಗ ಎಂಬ ಪ್ರಶ್ನೆ ತೂರಿಕೊಂಡು ಬರುತ್ತಲೇ ಇರುತ್ತವೆ. ಅದಕ್ಕೆ ಅವರು ಅವರದೇ ಆದ ರೀತಿಯಲ್ಲಿ ಸ್ಪಷ್ಟೀಕರಣ ಕೊಡುತ್ತಲೇ ಇರುತ್ತಾರೆ. ಆದರೂ ಮತ್ತೆಮತ್ತೆ ಅದೇ ಪ್ರಶ್ನೆ ಬರುತ್ತಿರಲು, ಅವರು ಅದಕ್ಕೆ 'ನಾನೀಗ ಕೆಲಸದ ಬಗ್ಗೆಯೇ ಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದೇನೆ. ಎರಡನೇ ಮದುವೆ ಬಗ್ಗೆ ಸದ್ಯಕ್ಕೆ ಯೋಚನೆ ಮಾಡುತ್ತಿಲ್ಲ. ಅದೇನಿದ್ದರೂ ಅಂತಹ ಹುಡುಗಿ ಸಿಕ್ಕರೆ ನೋಡ್ತೀನಿ' ಎಂದಿದ್ದಾರೆ.

vuukle one pixel image
click me!