
Actor Darshan and Renukaswamy Murder Case- Vijayalakshmi Met Gaurav Shetty in Mangaluru: ಕನ್ನಡದ ನಟ ದರ್ಶನ್ ಅವರು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ತನಿಖೆ ಎದುರಿಸುತ್ತಿರುವುದು ಗೊತ್ತೇ ಇದೆ. ದರ್ಶನ್ ಜೊತೆಗಾರರೇ ಮಾಫಿ ಸಾಕ್ಷಿಯಾಗಿ ಬದಲಾಗುತ್ತಿರುವ ಬೆಳವಣಿಗೆ ನಡೆಯುತ್ತಿದ್ದು, ಎಲ್ಲವೂ ದರ್ಶನ್ ಕೇಸ್ ದಿನೇದಿನೇ ಕಗ್ಗಂಟಾಗುತ್ತಿರುವ ಸೂಚನೆ ನೀಡುತ್ತಿವೆ. ಈ ಬೆನ್ನಲ್ಲೇ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪುನೀತ್, ಸುಹಾಸ್ ಮತ್ತು ಗೌರವ್ ಶೆಟ್ಟಿ ಜೊತೆ ಇದೀಗ ಮಂಗಳೂರಿನಲ್ಲಿ ಕಕಾಣಿಸಿಕೊಂಡಿದ್ದಾರೆ.
ನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಿ ಉದ್ಯಮಿ ಗೌರವ್ ಶೆಟ್ಟಿ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿಯಾಗಿರುವ ಚಿತ್ರದುರ್ಗದ ಬಾಲಾಜಿ ಬಾರ್ ಕ್ಯಾಷಿಯರ್ ಸಂದೀಪ್ ಎಂಬುವವರಿಗೆ ದರ್ಶನ್ ಅಭಿಮಾನಿ ಪುನೀತ್ ಮತ್ತು ಗ್ಯಾಂಗ್ ಜೀವ ಬೆದರಿಕೆ ಹಾಕಿ, ಕಿಡ್ನಾಪ್ ಮಾಡಲು ಯತ್ನಿಸಿತ್ತು.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಗೌರವ್ ಶೆಟ್ಟಿ ಲಿಂಕ್ ಸಿಕ್ಕಿತ್ತು. ಇದೀಗ ಅದೇ ಗೌರವ್ ಶೆಟ್ಟಿ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮಂಗಳೂರು ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರು ಏರ್‌ಪೋರ್ಟ್‌ನಲ್ಲಿ ಸ್ವತಃ ಗೌರವ್ ಶೆಟ್ಟಿ ವಿಜಯಲಕ್ಷ್ಮಿ ಅವರನ್ನ ವೆಲ್ಕಮ್ ಮಾಡಿದ್ದಾನೆ.
ಇತ್ತೀಚೆಗೆ ಆಗಿರೋದೇನು?
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಸತತ ಹಿನ್ನಡೆ ಆಗ್ತಿದೆ. ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಬದುಕುತ್ತಿರುವ ದರ್ಶನ್, ಕಾನೂನು ಹೋರಾಟದಲ್ಲಿ ಮತ್ತೆ ಮತ್ತೆ ಫೇಲ್ ಆಗುತ್ತಿದ್ದಾರೆ. ಇದರ ಮಧ್ಯೆ ಅವರ ಗ್ಯಾಂಗ್‌ನಲ್ಲಿರುವ ಕೆಲವು ಸದಸ್ಯರು ದರ್ಶನ್ ವಿರುದ್ಧವೇ ಸಾಕ್ಷ್ಯ ಹೇಳಲು ತಿರುಗಿಬಿದ್ದಿದ್ದಾರೆ. ಇದು ದರ್ಶನ್‌ಗೆ ದೊಡ್ಡ ಆಘಾತ ತಂದಿದೆ.
ಜೊತೆಗೆ ದರ್ಶನ್ ಅವರು ಜೈಲಿನಲ್ಲಿ ಕೆಲವು ವ್ಯವಸ್ಥೆಗಳನ್ನ ಕೇಳಿದ್ದರು. ಜೈಲಿನ ಕಠಿಣ ನಿಯಮಗಳ ಪ್ರಕಾರ ಅದೂ ಕೂಡ ಅವರಿಗೆ ಸಿಕ್ಕಿಲ್ಲ. ಇದರ ಮಧ್ಯೆ ಸೊಳ್ಳೆ ಕಾಟದಿಂದ ನಿದ್ದೆ ಕೂಡ ಬರುತ್ತಿಲ್ಲ. ಇದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂಬ ವರದಿಗಳಿವೆ. ಇತ್ತೀಚೆಗೆ ಕುಟುಂಬಸ್ಥರು ಭೇಟಿ ಹಿನ್ನೆಲೆಯಲ್ಲಿ ನಟ ದರ್ಶನ್ ಕೊಂಚ ಸಮಾಧಾನಗೊಂಡಿದ್ದರು ಎಂಬ ಮಾಹಿತಿಯಿದೆ.
ಆದರೆ, ಇದೀಗ ಮಂಗಳೂರು ಏರ್ಪೋರ್ಟ್‌ನಲ್ಲಿ ವಿಜಯಲಕ್ಷ್ಮಿ ಅವರು ಗೌರವ ಶೆಟ್ಟಿ ಈಗ ಕಾಣಿಸಿಕೊಂಡಿರುವುದು ಹೊಸ ಬೆಳವಣಿಗೆ ಎಂಬಂತೆ ನೋಡಲಾಗುತ್ತಿದೆ. ಸದ್ಯಕ್ಕೆ ನಟ ದರ್ಶನ್ ಕೇಸ್ ತನಿಖೆ ಪ್ರಗತಿಯಲ್ಲಿದ್ದು, ಮುಂದೆ ಏನೆಲ್ಲಾ ಬೆಳವಣಿಗೆ ನಡೆಯಲಿದೆ, ದರ್ಶನ್ ಅವರಿಗೆ ಶಿಕ್ಷೆಯಾಗುತ್ತಾ, ಅಥವಾ ಬಿಡುಗಡೆ ಆಗುತ್ತಾ ಎಂಬ ಪ್ರಶ್ನೆಗೆ ಕಾಲವೇ ಉತ್ತರ ಕೊಡಬೇಕು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.