ಉಡುಪಿ ಮೂಲದ ನಟಿ ಶಂಕರಮಂಚಿ ಜಾನಕಿಗೆ 'ಸಾಹುಕಾರ್ ಜಾನಕಿ' ಹೆಸರು ಬಂದಿದ್ದು ಹೇಗೆ? ಈ ಸ್ಟೋರಿ ನೋಡಿ..

Published : Aug 21, 2026, 04:44 PM IST
Sowcar Janaki Death

ಸಾರಾಂಶ

ಇಂದು, ಅಂದರೆ 21 ಆಗಸ್ಟ್ 2026ರ 'ವರಮಹಾಲಕ್ಷ್ಮೀ' ಹಬ್ಬದ ದಿನವೇ ನಟಿ ಸಾಹುಕಾರ್ ಜಾನಕಿ ನಿಧನರಾಗಿದ್ದಾರೆ. ತಮ್ಮ 95ನೇ ವಯಸ್ಸಿನಲ್ಲಿ ಹಿರಿಯ ನಟಿ‌ ಸಾಹುಕಾರ್ ಜಾನಕಿ‌ ನಿಧನರಾಗಿದ್ದು, ವಯೋಸಹಜ ಖಾಯಿಲೆಯಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು.

Sowcar Janaki Death-Shankaramanchi Janaki-Udupi born actress-Sowcar movie 1950-Nandamuri Taraka Rama Rao-Sowcar Janaki and NTR Movies: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಖ್ಯಾತ ನಟಿ ಸಾಹುಕಾರ್ ಜಾನಕಿ ನಿಧನ:

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಖ್ಯಾತ ನಟಿ ಸಾಹುಕಾರ್ ಜಾನಕಿ ಅವರು ಇಂದು, ಅಂದರೆ 21 ಆಗಸ್ಟ್ 2026ರಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿದ್ದು, ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ನಟಿ ಸಾಹುಕಾರ್ ಜಾನಕಿಯವರು ಇನ್ನಿಲ್ಲ ಎಂಬ ಸುದ್ದಿ ಸಿನಿರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಈ ಹಿರಿಯ ನಟಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಉಡುಪಿ ಮೂಲದ ನಟಿ ಶಂಕರಮಂಚಿ ಜಾನಕಿ

ಉಡುಪಿ ಮೂಲದ ನಟಿ ಶಂಕರಮಂಚಿ ಜಾನಕಿಗೆ 1950 ರಲ್ಲಿ ನಂದಮೂರಿ ತಾರಕ್ ರಾಮರಾವ್ ಜೊತೆ 'ಸಾಹುಕಾರ್' ಸಿನಿಮಾದಲ್ಲಿ ನಟಿಸಿದ ಬಳಿಕ 'ಸಾಹುಕಾರ್ ಜಾನಕಿ' ಎಂಬ ಹೆಸರು ಬಂತು. ರಂಗಭೂಮಿ ಹಿನ್ನೆಲೆಯಿಂದ ನಟನಾಕ್ಷೇತ್ರಕ್ಕೆ ಬಂದ ಈ ನಟಿ ನಾಟಕಗಳಲ್ಲಿ ಅಭಿನಯಿಸುತ್ತಲೇ ಸಿನಿಮಾದಲ್ಲಿ ಸಹ ಅವಕಾಶ ಪಡೆದುಕೊಂಡರು. 1950 ರಲ್ಲಿ ನಂದಮೂರಿ ತಾರಕ್ ರಾಮರಾವ್ ಜೊತೆ 'ಸಾಹುಕಾರ್' ಸಿನಿಮಾದಲ್ಲಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದ ಕಾರಣಕ್ಕೆ ಮುಂದೆ ಈ ನಟಿಗೆ 'ಸಾಹುಕಾರ್' ಜಾನಕಿ ಎಂದೇ ಹೆಸರಾಗಿದೆ.

70 ದಶಕಗಳಲ್ಲಿ ಸರಿಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದರು ನಟಿ ಜಾನಕಿ. ತಮಿಳು, ತೆಲುಗು ಹಾಗೂ ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ಸಾಹುಕಾರ್ ಜಾನಕಿ ನಟಿಸಿದ್ದಾರೆ. ಕನ್ನಡದಲ್ಲಿ ಡಾ ರಾಜ್‌ಕುಮಾರ್ ಅವರ ಜೊತೆ ಶಬ್ದವೇದಿ ಹಾಗೂ ಒಂದೇ ಗುರಿ ಚಿತ್ರಗಳಲ್ಲಿ ನಟಿಸಿದ್ದ ಸಾಹುಕಾರ್ ಜಾನಕಿಯವರು, ಪುನೀತ್ ಜೊತೆ ಅಭಿ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಜೊತೆಗೆ, ಶಂಕರ್‌ನಾಗ್ ನಟನೆಯ 'ಗೀತಾ' ಹಾಗೂ 'ಕುಲಪುತ್ರ' ಸೇರಿದಂತೆ ಹಲವು ಚಿತ್ರಗಳಲ್ಲಿ‌ ನಟನೆ ಮಾಡಿದ್ದಾರೆ ಈ ಮಹಾನ್ ನಟಿ.

400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಜಾನಕಿ ಅವರ ಕಲಾಸೇವೆಗೆ ಅವರಿಗೆ 'ಪದ್ಮಶ್ರೀ' ಸೇರಿದಂತೆ ಹಲವು ಪ್ರಶಸ್ತಿ ಲಭಿಸಿವೆ. ಹಲವಾರು ಸಂಘಸಂಸ್ಥೆಗಳು ಅವರ ಕಲಾಸೇವೆ ಗುರುತಿಸಿ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿದ್ದಾರೆ.

ನಟಿ ಜಾನಕಿಯವರ ಪೋಷಕರ ಮೂಲ ಉಡುಪಿ. ಆದರೆ, ಜಾನಕಿ ಹುಟ್ಟಿ ಬೆಳೆದಿದ್ದು ಆಂಧ್ರ ಪ್ರದೇಶದಲ್ಲಿ ಎಂಬುದು ವಿಶೇಷ. ಸಾಂಪ್ರದಾಯಿಕ ಸಂಗೀತ ಕಲಿತಿದ್ದ ಸಾಹುಕಾರ್ ಜಾನಕಿಯವರು, ದೇಶಕ್ಕೆ ಸ್ವಾತಂತ್ರ ಬಂದ ವರ್ಷವೇ 'ಸಾಹುಕಾರ್ ಸ್ವಾತಂತ್ರ್ಯ ನಷ್ಟವಾಯ್ತು' ಎಂದು ಹೇಳಿದ್ದರಂತೆ'. 1947ರಲ್ಲಿ ಮದುವೆಯಾಗಿದ್ದ ಜಾನಕಿಯವರಿಗೆ ಸಿನಿಮಾರಂಗದಲ್ಲಿ ವೃತ್ತಿ ಮುಂದುವರೆಸಲು ಪತಿಯಿಂದ ಸಹಕಾರ ಇರಲಿಲ್ಲ ಎನ್ನಲಾಗಿದೆ. ಹಾಗಿದ್ದರೂ ಕೂಡ ಜಾನಕಿಯವರು ಮದುವೆಯ ನಂತರವೂ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ.

ಇಂದು, ಅಂದರೆ 21 ಆಗಸ್ಟ್ 2026ರ 'ವರಮಹಾಲಕ್ಷ್ಮೀ' ಹಬ್ಬದ ದಿನವೇ ನಟಿ ಸಾಹುಕಾರ್ ಜಾನಕಿ ನಿಧನರಾಗಿದ್ದಾರೆ. ತಮ್ಮ 95ನೇ ವಯಸ್ಸಿನಲ್ಲಿ ಹಿರಿಯ ನಟಿ‌ ಸಾಹುಕಾರ್ ಜಾನಕಿ‌ ನಿಧನರಾಗಿದ್ದು, ವಯೋಸಹಜ ಖಾಯಿಲೆಯಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿ, ಅಭಿಮಾನಿಗಳು ಕಣ್ಣೀರು ಸುರಿಸುವಂತೆ ಆಗಿದೆ.

ಈ ಹಿರಿಯ ಜೀವ ಸಾಹುಕಾರ್ ಜಾನಕಿಯವರು ಅಗಲಿದ ಸುದ್ದಿ ಕೇಳಿ ಸಿನಿರಂಗದ ಅನೇಕ ಗಣ್ಯರು ಸೋಷಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ಅವರೊಂದಿಗೆ ನಟಿಸಿದ ಅನೇಕ ಕಲಾವಿದರು, ಆಪ್ತರು ಹಾಗೂ ಕುಟುಂಬಸ್ಥರು ಸಾಹುಕಾರ್ ಜಾನಕಿಯವರ ಅಗಲಿಕೆಗೆ ನೊಂದು ಸಂತಾಪ ಸೂಚಿಸುತ್ತಿದ್ದಾರೆ. ಅಗಲಿದ ಹಿರಿಯ ನಟಿ ಸಾಹುಕಾರ್ ಜಾನಕಿಯರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾನ್ಸರ್‌ ಜೊತೆ ಲಾಡ್ಜ್‌ನಲ್ಲಿ ಇದ್ದಾಗಲೇ ಪತ್ನಿ ಕೈಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪ್ರಖ್ಯಾತ ನಟ, ಚಡ್ಡಿಯಲ್ಲೇ ನಿಂತ ಫೋಟೋ ವೈರಲ್‌!
ಡಾರ್ಲಿಂಗ್ ಪ್ರಭಾಸ್ ಆರೋಗ್ಯದ ಬಗ್ಗೆ ಮತ್ತೆ ಚರ್ಚೆ: ವೈದ್ಯರ ಪೋಸ್ಟ್‌ನಿಂದ ಅಭಿಮಾನಿಗಳಲ್ಲಿ ಆತಂಕ