ಸಾವಿನಲ್ಲೂ ಡೇನಿಯಲ್‌ ಬಾಲಾಜಿ ಸಾರ್ಥಕತೆ, ನೇತ್ರದಾನ ಮಾಡಿದ ನಟ!

By Santosh NaikFirst Published Mar 30, 2024, 10:27 AM IST
Highlights


ನಟ ಡೇನಿಲ್‌ ಬಾಲಾಜಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸಾವಿನ ನಂತರ ನೇತ್ರವನ್ನು ದಾನ ಮಾಡುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದರು. ಅದರಂತೆ, ವೈದ್ಯರು ಅವರ ಆಸೆಯನ್ನು ಪೂರ್ತಿ ಮಾಡಿದ್ದಾರೆ.
 

ಬೆಂಗಳೂರು (ಮಾ.30):  ತಮಿಳು ಚಿತ್ರರಂಗದ ಪ್ರಮುಖ ವಿಲನ್ ಹಾಗೂ ಪ್ರಖ್ಯಾತ ನಡ ಡೇನಿಯಲ್ ಬಾಲಾಜಿ ನಿನ್ನೆ ಹಠಾತ್ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ತಡರಾತ್ರಿಯ ವೇಳೆ ಸಾವು ಕಂಡಿದ್ದಾರ.ೆ ಇದೀಗ ಅವರ ಕಣ್ಣುಗಳನ್ನು ಅವರ ಆಸೆಯಂತೆಯೇ ದಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.  ಡೇನಿಯಲ್ ಬಾಲಾಜಿ ಅವರು ಸೂಪರ್‌ ಸ್ಟಾರ್‌ ಕಮಲ್ ಹಾಸನ್ ನಿರ್ದೇಶಿಸಿ ನಟಿಸಿದ 'ಮರುದನಾಯಕಂ' ಸಿನಿಮಾದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭ ಮಾಡಿದ್ದರು. ಆ ಬಳಿಕ ಸನ್‌ ಟಿವಿಯಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿದ್ದ ಚಿತ್ತಿಯಲ್ಲಿ  ಡೇನಿಯಲ್‌ ಎನ್ನುವ ಪಾತ್ರದಲ್ಲಿ ನಡೆಸಿದ್ದರು. . ಇದಾದ ನಂತರ ಅಗಲೇ ಧಾರಾವಾಹಿಯಲ್ಲಿ ನಟಿಸಿದಾಗ ಆ ಧಾರಾವಾಹಿಯ ನಿರ್ದೇಶಕ ಸುಂದರ್ ಕೆ ವಿಜಯನ್ ಅವರಿಗೆ ಡೇನಿಯಲ್ ಬಾಲಾಜಿ ಎಂದು ಹೆಸರಿಟ್ಟಿದ್ದರು. ಇದು ಅವರು ಹೆಸರೂ ಕೂಡ ಆಗಿ ಹೋಯಿತು. 

ಡೇನಿಯಲ್ ಬಾಲಾಜಿ ತಮಿಳಿನಲ್ಲಿ  ಕಾದಲ್ ಕೊಂಡಾನೆ, ಕಾಕ್ಕ ಕಾಕ್ಕ, ಫ್ರದ್ರು ಉಧರು, ಪೊಲ್ಲದವನ್, ರೆಮುಗಂ, ವೈ ರಾಜ ವೈ, ಭೈರವ, ಇಪ್ಪಾ ವೆಲ್ಲುಂ, ಮಾಯವನ್ ಸೇರಿದಂತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು 10 ಕ್ಕೂ ಹೆಚ್ಚು ಮಲಯಾಳಂ ತಮಿಳು ಚಲನಚಿತ್ರಗಳು. ಸಿನಿಮಾಗಳಲ್ಲೂ ನಟಿಸಿದ್ದಾರೆ.

ಕನ್ನಡದಲ್ಲಿ ಕಿರಾತಕ ಚಿತ್ರದಲ್ಲಿ ಯಶ್‌ ಅವರೊಂದಿಗೆ ಡೇನಿಯಲ್‌ ಬಾಲಾಜಿ ನಟಿಸಿದ್ದರು. ಅದರೊಂದಿಗೆ ಶಿವಾಜಿನಗರ, ಬೆಂಗಳೂರು ಅಂಡರ್​ವರ್ಲ್ಡ್​​​ ಹಾಗೂ ಡವ್​ ಸಿನಿಮಾಗಳಲ್ಲಿಯೂ ನಟಿಸಿದ್ದರು. ತೆಲುಗು ಮತ್ತು ಕನ್ನಡದಂತಹ ದಕ್ಷಿಣ ಭಾರತದ ಭಾಷೆಯ ಚಿತ್ರಗಳಲ್ಲೂ ನಟಿಸಿರುವ ಡೇನಿಯಲ್ ಬಾಲಾಜಿ ಅವರು ದಿವಂಗತ ಖ್ಯಾತ ನಟ ಮುರಳಿ ಅವರ ಸಂಬಂಧಿ. ಡೇನಿಯಲ್ ಬಾಲಾಜಿ ನಟ ಮುರಳಿ ಅವರ ತಾಯಿಯ ತಂಗಿಯ ಮಗ. ಹೃದಯಾಘಾತದಿಂದ 48ರ ಹರೆಯದ ಡೇನಿಯಲ್ ಬಾಲಾಜಿ ಹಠಾತ್ ಸಾವನ್ನಪ್ಪಿರುವುದು ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದು, ಅವರ ಪಾರ್ಥಿವ ಶರೀರವನ್ನು ಪುರಸೈವಾಕಂನ ವರದಮ್ಮಾಳ್ ಕಾಲೋನಿಯಲ್ಲಿ ಬಾಲ್ಯದಿಂದಲೂ ವಾಸವಿದ್ದ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. 


ಡೇನಿಯಲ್ ಬಾಲಾಜಿ ಅವರ ಕಣ್ಣುಗಳನ್ನು ಅವರ ಕುಟುಂಬದವರು ದಾನ ಮಾಡಿದ್ದಾರೆ ಎಂದು ವರದಿಯಾಗಿದೆ. ಡೇನಿಯಲ್ ಬಾಲಾಜಿ ಅವರು ಸಿನಿಮಾದಲ್ಲಿ ಯಾವುದೇ ವಿಲನ್ ಪಾತ್ರ ಮಾಡಿದರೂ ತಮ್ಮ ಕುಟುಂಬ ಮತ್ತು ಅಭಿಮಾನಿಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು. ಇಂದು ಸಂಜೆ ಅವರ ಪಾರ್ಥಿವ ಶರೀರವನ್ನು ಒಟ್ಟೇರಿಯ ಮಿನ್ನಮನಾಟ್‌ನಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ತಿಳಿದುಬಂದಿದೆ.

Daniel Balaji: ಯಶ್‌ ನಟನೆಯ 'ಕಿರಾತಕ' ಚಿತ್ರದ ವಿಲನ್‌ ಡೇನಿಯಲ್‌ ಬಾಲಾಜಿ ನಿಧನ

ಈ ಬಗ್ಗೆ ಅನಾಲಿಸ್ಟ್‌ ರಮೇಶ್‌ ಬಾಲಾ ಕೂಡ ಮಾಹಿತಿ ನೀಡಿದ್ದಾರೆ. ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಲು ಡೇನಿಯಲ್‌ ಬಾಲಾಜಿ ಇಚ್ಛಿಸಿದ್ದರು. ಅದರಂತೆ ವೈದ್ಯರು ಅವರ ಆಸೆಯನ್ನು ಈಡೇರಿಸಿದ್ದಾರೆ. ಶ್ರೇಷ್ಠ ವ್ಯಕ್ತಿ ಎಂದು ಬರೆದಿದ್ದಾರೆ. ಈ ಮಾಹಿತಿ ತಿಳಿದ ಬೆನ್ನಲ್ಲಿಯೇ ಡೇನಿಯಲ್‌ ಬಾಲಾಜಿ ಸಿನಿಮಾದಲ್ಲಿ ವಿಲನ್‌ ಆಗಿದ್ದರೂ, ನಿಜ ಜೀವನದ ನಾಯಕ ಎಂದು ಬಣ್ಣಿಸಿದ್ದಾರೆ.

ಜಿಮ್‌ನಲ್ಲಿ ಹೃದಯಾಘಾತ ಕಾಮನ್‌ ಆಗಿದ್ಯಾಕೆ? ಇಲ್ಲಿದೆ ಕೆಲವು ಕಾರಣ..

Actor has pledged his eyes for donation after his death..

The doctors have fulfilled his wish!

Great Man! 🙏 pic.twitter.com/koFsEX1vea

— Ramesh Bala (@rameshlaus)
click me!