ಯಶ್ ಅವರ ಕಿರಾತಕ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ತಮಿಳಿನ ಪ್ರಖ್ಯಾತ ನಟ ಡೇನಿಯಲ್ ಬಾಲಾಜಿ ಶುಕ್ರವಾರ ವಿಧಿವಶರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಚೆನ್ನೈ (ಮಾ.30): ಯಶ್ ಅಭಿನಯದ ಕಿರಾತಕ ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟ ಡೇನಿಯಲ್ ಬಾಲಾಜಿ ಶುಕ್ರವಾರ (ಮಾರ್ಚ್ 29) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ತಮಿಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಗುರುತಿಸಿಕೊಂಡಿದ್ದ ಡೇನಿಯಲ್ ಬಾಲಾಜಿ ಬುಹುಭಾಷಾನಟನಾಗಿಯೂ ಗುರುತಿಸಿಕೊಂಡಿದ್ದರು ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದ ಡೇನಿಯಲ್ ಬಾಲಾಜಿ ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಏಕಾಏಕಿ ಡೇನಿಯಲ್ ಬಾಲಾಜಿಗೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಪಾರ್ಥಿವ ಶರೀರವನ್ನು ಶನಿವಾರ ಪುರಸೈವಾಲ್ಕಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ. ನಟ ಡ್ಯಾನಿಯಲ್ ಬಾಲಾಜಿ ಕನ್ನಡ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಕುಟುಂಬದ ಸದಸ್ಯರಾಗಿದ್ದು, ಚಿತ್ರಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಡೇನಿಯಲ್ ಬಾಲಾಜಿ ಕನ್ನಡದಲ್ಲಿ ಕಿರಾತಕ, ಶಿವಾಜಿನಗರ, ಬೆಂಗಳೂರು ಅಂಡರ್ವರ್ಲ್ಡ್ ಹಾಗೂ ಡವ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿ ಪ್ರಿಯರಿಗೂ ಕೂಡ ಚಿರಪರಿಚಿತರಾಗಿದ್ದರು. ತಮಿಳಿನಲ್ಲಿ ಗೌತಮ್ ವಾಸುದೇವ ಮೆನನ್ ನಿರ್ದೇಶನದ ‘ಕಾಖ ಕಾಖ’ ಸಿನಿಮಾದಲ್ಲಿ ಸೂರ್ಯ ಜೊತೆ ತೆರೆ ಹಂಚಿಕೊಂಡು ಅವರು ಗಮನ ಸೆಳೆದಿದ್ದರು. ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಇವರು ಚಿತ್ರರಂಗ ಪ್ರವೇಶಿಸಿದ್ದರು. ಕಮಲ್ ಹಾಸನ್ ಅವರ ಹಿಸ್ಟಾರಿಕ್ ಡ್ರಾಮಾ ‘ಮರುಢನಯಗಂ’ ಸಿನಿಮಾದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದರು.
ಜಿಮ್‌ನಲ್ಲಿ ಹೃದಯಾಘಾತ ಕಾಮನ್ ಆಗಿದ್ಯಾಕೆ? ಇಲ್ಲಿದೆ ಕೆಲವು ಕಾರಣ..
ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಇವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ನೀಡಿತು. ಮಮ್ಮೂಟಿ ನಟನೆಯ ‘ಬ್ಲ್ಯಾಕ್’ ಸಿನಿಮಾದಲ್ಲಿ,ಮೋಹನ್ಲಾಲ್ ನಟನೆಯ ‘ಭಗವಾನ್’, ಮಮ್ಮೂಟಿ ನಟನೆಯ ‘ಡ್ಯಾಡಿ ಕೂಲ್’ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದರು. ತಮ್ಮ ವಿಲನ್ ಲುಕ್ ಹಾಗೂ ಕಂಚಿನ ಕಂಠದ ದನಿಯಿಂದಲೇ ಜನಪ್ರಿಯರಾಗಿದ್ದ ಡೇನಿಯಲ್ ಬಾಲಾಜಿ, ವಿಲನ್ ಪಾತ್ರಗಳಿಗೆ ಹೇಳಿ ಮಾಡಿಸಿದಂಥ ನಟನಾಗಿದ್ದರು. ಆದರೆ, ಅವರ ಅಕಾಲಿಕ ನಿಧನ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ.
ಫಿಲ್ಮ್ ಚೇಂಬರ್ನ ಮಾಜಿ ಅಧ್ಯಕ್ಷ ಹಾಗೂ ಸಿನಿಮಾ ನಿರ್ಮಾಪಕ ಭಾಮಾ ಹರೀಶ್ಗೆ ಹೃದಯಾಘಾತ!
ಡೇನಿಯಲ್ ಬಾಲಾಜಿ ನಿಧನದ ಸುದ್ದಿ ತಮಿಳು ಚಿತ್ರರಂಗದಲ್ಲಿ ಮತ್ತು ಅವರ ಅಭಿಮಾನಿಗಳಲ್ಲಿ ತೀವ್ರ ಉಂಟುಮಾಡಿದೆ. ಟಿವಿ ಮೂಲಕ ತಮ್ಮ ವೃತ್ತಿಜೀವನ ಆರಂಭ ಮಾಡಿದ್ದ ಡೇನಿಯಲ್, ಇಲ್ಲಿಯೂ ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದರು. ಚಿತ್ತಿ ಧಾರವಾಹಿಯಲ್ಲಿ ಡೇನಿಯಲ್ ಎನ್ನುವ ಹೆಸರಿನ ಪಾತ್ರ ಮಾಡಿದ್ದ ಇವರು ಬಳಿಕ ಇದೇ ಪಾತ್ರದ ಹೆಸರನ್ನೇ ತಮ್ಮ ಮೂಲ ಹೆಸರಿನಲ್ಲಿ ಇಟ್ಟುಕೊಂಡಿದ್ದರು. ಡೇನಿಯಲ್ ಬಾಲಾಜಿ ಅವರ ಮೂಲ ಹೆಸರು ಟಿಸಿ ಬಾಲಾಜಿ. ನಟನೆಯೊಂದಿಗೆ ಧಾರ್ಮಿಕ ವ್ಯಕ್ತಿ ಕೂಡ ಆಗಿದ್ದ ಡೇನಿಯಲ್ ಬಾಲಾಜಿ, ಅವಡಿಯಲ್ಲಿ ತಮ್ಮ ಖರ್ಚಿನಲ್ಲಿಯೇ ಹೊಸ ದೇವಾಲಯವನ್ನು ನಿರ್ಮಾಣ ಮಾಡುತ್ತಿದ್ದರು ಎಂದು ವರದಿಯಾಗಿದೆ.