'ಅಂಕಲ್ಸ್‌ ಆದ್ರೂ ತೊಂದ್ರೆ ಇಲ್ಲ...' ಸಿನಿಮಾ ನಟಿ ಅಮ್ಮನಿಗೆ ಮತ್ತೊಂದ್‌ ಮದುವೆ ಮಾಡಲು ಹೊರಟ ಮಗಳು!

By Santosh Naik  |  First Published Mar 28, 2024, 6:57 PM IST

ಅಮ್ಮನ 2ನೇ ಮದುವೆ ವಿಚಾರವಾಗಿ ನಟಿ ಸುಪ್ರಿತಾ ನಾಯ್ಡು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಯೂಟ್ಯೂಬರ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ತಾಯಿ ಸುರೇಖಾ ವಾಣಿಗೆ ಮತ್ತೊಂದು ಮದುವೆ ಮಾಡಲು ಸಿದ್ಧವಿರುವುದಾಗಿ ಸುಪ್ರಿತಾ ತಿಳಿಸಿದ್ದಾರೆ.


2019ರಲ್ಲಿ ನಟಿ ಸುರೇಖಾ ವಾಣಿಯ ಪತಿ ಸುರೇಶ್‌ ತೇಜಾ ದೀರ್ಘಕಾಲದ ಅನಾರೋಗ್ಯದಿಂದಾಗಿ ಸಾವು ಕಂಡಿದ್ದರು. ಅದಾದ ಬಳಿಕ ಕೆಲ ತಿಂಗಳು ಕಾಲ ಸಿನಿಮಾ ರಂಗದಿಂದ ದೂರವಿದ್ದ ತೆಲುಗು ನಟಿ ಸುರೇಖಾ ವಾಣಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತೆಲುಗಿನ ಪ್ರಖ್ಯಾತ ಪೋಷಕ ನಟಿ ಎನಿಸಿಕೊಂಡಿರುವ ಸುರೇಖಾ ವಾಣಿ ವಿಚಾರವಾಗಿ ಬಂದಿರುವ ಸುದ್ದಿ ಬೇರೆ ಯಾರೋ ಮಾಡಿದ್ದಲ್ಲ, ಸ್ವತಃ ಅವರ ಪುತ್ರಿ ಸುಪ್ರಿತಾ ನಾಯ್ಡು ಹೇಳಿರುವ ಮಾತು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹೌದು, ಮಾಡೆಲ್‌ ಹಾಗೂ ನಟಿಯಾಗಿರುವ ಸುಪ್ರಿತಾ ನಾಯ್ಡು ತನ್ನ ಅಮ್ಮನಿಗೆ ಮತ್ತೊಂದು ಮದುವೆ ಮಾಡುವ ಆಲೋಚನೆಯಲ್ಲಿದ್ದಾರಂತೆ. ಹುಡುಗರು ಸಿಗದೇ ಇದ್ದರೂ, ಕನಿಷ್ಠ ಅಂಕಲ್ಸ್‌ ಆದರೂ ತೊಂದರೆ ಇಲ್ಲ ಅವರಿಗೆ ಮದುವೆ ಮಾಡುತ್ತೇನೆ ಎಂದಿದ್ದಾರೆ. ಆದರೆ, ಅವರು ತಮಾಷೆಯಾಗಿ ಹೇಳಿದ್ದೋ, ಅಥವಾ ಗಂಭೀರವಾಗಿ ಅದರ ಬಗ್ಗೆ ಆಲೋಚನೆ ಮಾಡುತ್ತಿದ್ದಾರೂ ಎನ್ನುವುದು ಇನ್ನೂ ಗೊತ್ತಿಲ್ಲ.

ಸಿನಿಮಾರಂಗದಲ್ಲಿ ಎರಡನೇ ಮದುವೆ, ಮೂರನೇ ಮದುವೆ ಎನ್ನುವುದು ವಿಚಾರವೇ ಅಲ್ಲ. ವೈಯಕ್ತಿ ವಿಚಾರಗಳಿಗೆ ಅವರು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದು ಇಲ್ಲ. ಇನ್ನು ಸುರೇಖಾ ವಾಣಿ ಹೆಸರು ತೆಲುಗು ಚಿತ್ರರಂಗದಲ್ಲಿ ಫೇಮಸ್‌, ಸೋಶಿಯಲ್‌ ಮೀಡಿಯಾದಲ್ಲೀ ಸುರೇಖಾ ವಾಣಿ ಸಖತ್‌ ಆಕ್ಟೀವ್‌ ಆಗಿದ್ದಾರೆ. ಮಗಳ ಕುರಿತಾಗಿ ಹಾಗೂ ತಮ್ಮ ಕುರಿತಾಗಿ ಸಾಕಷ್ಟು ಸುದ್ದಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ತಲೆ ಬೋಳಿಸಿಕೊಂಡು ಸುದ್ದಿಯಾಗಿದ್ದಾರೆ. ಈಗ ಸುಪ್ರಿತಾ ಅಮ್ಮನ ಮದುವೆ ಮಾಡುತ್ತೇನೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ತಾಯಿ, ತಂಗಿ, ಚಿಕ್ಕಮ್ಮ, ಅತ್ತಿಗೆ, ಅಕ್ಕ ಹೀಗೆ ಎಂಥದ್ದೇ ಪೋಷಕ ಪಾತ್ರವಾದರೂ ಅದಕ್ಕೆ ಸೈ ಎನಿಸುವಂತೆ ನಟಿಸುವ ಸುರೇಖಾ ವಾಣಿಗೆ ಈಗೇನು ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾಗಿಲ್ಲ. ಅಮ್ಮನಿಗೆ ಮಗಳು ಮಗಳಿಗೆ ಅಮ್ಮ ಆಸರೆಯಾಗಿ ನಿಂತು ಜೀವನ ಸಾಗಿಸುತ್ತಿದ್ದಾರೆ. ಆದರೆ, ಬದುಕಿನ ಮುಂದಿನ ದಿನಗಳು ಹೀಗೇ ಇರುತ್ತದೆ ಎಂದು ಸುಪ್ರಿತಾಗೆ ಅನಿಸಿಲ್ಲ. ಅಮ್ಮನಿಗಾಗಿ ಪ್ರೀತಿ ವ್ಯಕ್ತಪಡಿಸುವ ಇನ್ನೊಂದು ಜೀವ ಬೇಕು ಎಂದನಿಸಿದೆಯಂತೆ. ಅದಕ್ಕಾಗಿ ವರನ ಹುಡುಕಾಟದಲ್ಲಿದ್ದಾರೆ.

Tap to resize

Latest Videos

ಯೂಟ್ಯೂಬರ್‌ ಪಾಡ್‌ಕಾಸ್ಟ್‌ನಲ್ಲಿ ನಿಮ್ಮ ತಾಯಿ ಮತ್ತೊಂದು ಮದುವೆಯಾಗಲು ಬಯಸುತ್ತಾರೆಯೇ? ಎಂದು ಸುಪ್ರಿತಾಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರ ನೀಡಿರುವ ಆಕೆ, ನನ್ನ ಅಮ್ಮನಿಗೆ 46 ವರ್ಷ ವಯಸ್ಸು. ಈ ವಯಸ್ಸಿನವರನ್ನು ಮದುವೆಯಾಗಲು ಹುಡುಗರು ಮುಂದೆ ಬರೋದಿಲ್ಲ. ಮದುವೆಗಂತೂ ಒಪ್ಪೋದೇ ಇಲ್ಲ. ನಮಗೆ ಹುಡುಗರೇ ಬೇಕಂತೇನಿಲ್ಲ. ಅಂಕಲ್ಸ್‌ಗಳು ಆದ್ರೂ ನಡಿಯುತ್ತೆ.  ಅವರು ನನ್ನ ಅಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆರ್ಥಿಕವಾಗಿ ಚೆನ್ನಾಗಿರಬೇಕು. ಏನೂ ಕಿರಿಕಿರಿ ಮಾಡಬಾರದು. ಕೆಟ್ಟ ಆಲೋಚನೆ ಇಲ್ಲದ ಅಂಕಲ್‌ಗಳು ಸಿಕ್ಕರೆ, ಮದುವೆ ಮಾಡಿಲು ನಾನು ರೆಡಿ ಇದ್ದೇನೆ. ಅಂಥವರಿಗಾಗಿ ನಾನು ಕೂಡ ಹುಡುಕಾಟದಲ್ಲಿದ್ದೇನೆ ಎಂದು ಸುಪ್ರಿತಾ ಹೇಳಿದ್ದಾರೆ.\

ಟಾಲಿವುಡ್‌ನ ಖ್ಯಾತ ನಟಿ ಹೊಸ ಅವತಾರ! ಬಾಲ್ಡ್ ಲುಕ್‌ನಲ್ಲಿ ಬೋಲ್ಡ್ ಪೋಸ್ ಕೊಟ್ಟ ಸುರೇಖಾ

ಇದಕ್ಕೂ ಮುನ್ನ ಸುರೇಖಾ ವಾಣಿಯವರಿಗೆ ಇನ್ನೊಂದು ಮದುವೆಯ ವಿಚಾರ ಬಂದಾಗ ಸ್ವತಃ ಸುಪ್ರಿತಾ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಈಗ ತಾನೇ ಅಮ್ಮನಿಗೆ ಮದುವೆ ಮಾಡುತ್ತೇನೆ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಅಮ್ಮ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರೆ, ಸುಪ್ರಿತಾ ಬಿಗ್‌ ಬಾಸ್‌ ಖ್ಯಾತಿಯ ಅಮರ್‌ದೀಪ್‌ ಅಭಿನಯದ ರೋಮ್ಯಾಂಟಿಕ್‌ ಲವ್‌ ಎಂಟರ್‌ಟೇನ್ಮೆಂಟ್‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಡ್ರಗ್ಸ್​ 'ಕಿಂಗ್​ಪಿನ್​'ಗೆ ಕಿಸ್​ ಕೊಟ್ಟು ತಗ್ಲಾಕ್ಕೊಂಡ ಖ್ಯಾತ ನಟಿ- ವಿಡಿಯೋದಲ್ಲಿ ಹೇಳಿದ್ದೇನು?

click me!