ಕೊರಗಜ್ಜ, ಗುಳಿಗ ಕ್ಷೇತ್ರಗಳಿಗೆ ಭೇಟಿ ನೀಡಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಕಾಂತಾರ ನಟಿ ಸಪ್ತಮಿ!

By Gowthami KFirst Published Nov 15, 2022, 10:02 PM IST
Highlights

ಕರಾವಳಿಯ ದೈವ ಶಕ್ತಿ, ಕಾರ್ನಿಕದ ಮೂಲಕವೇ ಜಾಗತಿಕವಾಗಿ ಭರ್ಜರಿ ಯಶಸ್ವಿಯಾದ 'ಕಾಂತಾರ' ಸಿನಿಮಾ ಸದ್ಯ ಭಾರತದ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.  ಈ ಮಧ್ಯೆ ಕಾಂತಾರದ ಗೆಲುವಿನ ನಡುವೆ ನಟಿ ಸಪ್ತಮಿ ಗೌಡ ಮಂಗಳೂರಿನ ದೈವೀ ಕ್ಷೇತ್ರಗಳನ್ನ ಸಂದರ್ಶಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಮಂಗಳೂರು (ನ.15): ಕರಾವಳಿಯ ದೈವ ಶಕ್ತಿ, ಕಾರ್ನಿಕದ ಮೂಲಕವೇ ಜಾಗತಿಕವಾಗಿ ಭರ್ಜರಿ ಯಶಸ್ವಿಯಾದ 'ಕಾಂತಾರ' ಸಿನಿಮಾ ಸದ್ಯ ಭಾರತದ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಈ ಅದ್ಭುತ ಯಶಸ್ಸಿಗೆ ದೈವ ಶಕ್ತಿಯೇ ಕಾರಣ ಅಂತಾನೂ ಹೇಳಲಾಗ್ತಿದೆ. ಈ ಮಧ್ಯೆ ಕಾಂತಾರದ ಗೆಲುವಿನ ನಡುವೆ ನಟಿ ಸಪ್ತಮಿ ಗೌಡ ಮಂಗಳೂರಿನ ದೈವೀ ಕ್ಷೇತ್ರಗಳನ್ನ ಸಂದರ್ಶಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಂಗಳೂರಿನ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೈವಸ್ಥಾನ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳ ಹಾಗೂ ಈ ಭಾಗದ ಕೆಲವು ದೈವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಕುಟುಂಬ ಸದಸ್ಯರು, ಸಿನಿಮಾದ ಸಹನಟರು ಹಾಗೂ ಸ್ನೇಹಿತರೊಂದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬುರ್ದುಗೋಳಿ ಆದಿಸ್ಥಳ ಕ್ಷೇತ್ರದ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್ ಅವರು ಸಪ್ತಮಿ ಗೌಡ ಅವರನ್ನ ಬರಮಾಡಿ ಕ್ಷೇತ್ರದ ಐತಿಹ್ಯವನ್ನ ತಿಳಿಸಿದರು.

ಈ ವೇಳೆ ಮಾತನಾಡಿದ ಸಪ್ತಮಿ ಗೌಡ, ವಿಶ್ವದಾದ್ಯಂತ ಕಾಂತಾರ ಸದ್ದು ಮಾಡುತ್ತಿದೆ. ಸಿನಿಮಾ ನಿರ್ಮಾಣದ ವೇಳೆ ಕರಾವಳಿ ಭಾಗದ ಆಚರಣೆ, ಸಂಸ್ಕೃತಿ, ದೈವಾರಾಧನೆ ಬಗ್ಗೆ ನಾನು ತಿಳಿದುಕೊಂಡೆ. ಇತ್ತೀಚಿಗೆ ನಡೆದ ವೈಯಕ್ತಿಕ ಘಟನೆಯೊಂದು ದೈವಗಳ ಬಗ್ಗೆ ಹುಟ್ಟಿದ ನಂಬಿಕೆ ಗಟ್ಟಿಯಾಗುವಂತೆ ಮಾಡಿದೆ.

Uttarakanda Movie: 'ಉತ್ತರಕಾಂಡ'ದಲ್ಲಿ ಕಾಂತಾರ ಚೆಲುವೆ: ಡಾಲಿ, ರಮ್ಯಾಗೆ ಸಪ್ತಮಿ ಸಾಥ್

ಈಗಾಗಲೇ ಸಿನಿಮಾಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬಂದಿದ್ದು, ಸ್ಕ್ರಿಪ್ಟ್ ರೀಡಿಂಗ್ ನಡೀತಾ ಇದೆ. ಜನರ ಪ್ರೀತಿಯಿಂದ ಜಗತ್ತಿನಾದ್ಯಂತ ಕಾಂತಾರ ಹೌಸ್ ಫುಲ್ ಆಗಿ ಓಡುತ್ತಿದ್ದು, ತುಳುನಾಡಿನ ದೈವಗಳ ಆಶೀರ್ವಾದವೇ ಚಿತ್ರಕ್ಕೆ ಶ್ರೀರಕ್ಷೆ ಎಂದರು. ಜಗತ್ತಿನಾದ್ಯಂತ ಕಾಂತಾರ ಚಿತ್ರವು ಹೌಸ್ ಫುಲ್ ಪ್ರದರ್ಶನದೊಂದಿಗೆ 50 ದಿವಸ ಪೂರೈಸುತ್ತಿದ್ದು, ಚಿತ್ರದ ಅದ್ಭುತ ಯಶಸ್ಸಿಗೆ ದೈವಗಳ ಆಶೀರ್ವಾದವೇ ಕಾರಣ ಎಂದರು.

Udupi: ದೈವಾರಾಧನೆ ಟೀಕಿಸಿದ ಬಿ.ಟಿ ಲಲಿತಾ ನಾಯಕ್ ವಿರುದ್ದ ದೂರು

ಬಳಿಕ ಅವರು ಕುತ್ತಾರಿನ ಕೊರಗಜ್ಜನ ಆದಿಸ್ಥಳಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದರು.  ಕೊರಗಜ್ಜನ ಬಗ್ಗೆ ಕೇಳಿ ತಿಳಿದಿದ್ದೆ, ಸಾನ್ನಿಧ್ಯವನ್ನು ನೋಡುವ ತವಕದಿಂದ ಬಂದಿದ್ದೇನೆ. ಅಜ್ಜನ ದಯೆಯಿಂದ ಇನ್ನಷ್ಟುಚಿತ್ರಗಳು ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು. ಸಪ್ತಮಿ ಗೌಡರ ತಾಯಿ ಶಾಂತ, ನಟ ಶಾನೀಲ್ ಗುರು ಮೊದಲಾದವರು ಜತೆಗಿದ್ದರು.

click me!