ನಟ ಸಲ್ಮಾನ್ ಖಾನ್ ತನ್ನ ಮನೆಯಲ್ಲಿ ತೂತಾಗಿರುವ ಟಿ-ಶರ್ಟ್ ಧರಿಸಿರುವ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಲ್ಮಾನ್ ಖಾನ್ ತೂತಾದ ಟಿಶರ್ಟ್ ಹಾಕ್ತಾರೆ ಅಂದ ಮೇಲೆ ನಾವೆಲ್ಲಾ ಯಾವ ಲೆಕ್ಕ ಎಂದು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್, ತಮ್ಮ ವಿಶಿಷ್ಟ ಪರ್ಸನಾಲಿಟಿ ಕಾರಣಕ್ಕಾಗಿಯೇ ಸುದ್ದಿಯಲ್ಲಿರುವ ಸಲ್ಮಾನ್ ಖಾನ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಬಹುಶಃ ಸಲ್ಮಾನ್ ಖಾನ್‌ಗೂ ತಾವು ಈ ವಿಚಾರಕ್ಕಾಗಿ ವೈರಲ್ ಆಗ್ತಾರೆ ಅನ್ನೋದು ಅಂದಾಜೇ ಇರ್ಲಿಲ್ಲ ಅಂತಾ ಕಾಣುತ್ತದೆ. ಸಲ್ಮಾನ್ ಖಾನ್ ತಮ್ಮ ಮನೆಯಲ್ಲಿ ತೂತಾದ ಟಿಶರ್ಟ್ ಧರಿಸಿರುವ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ಸಾಕಷ್ಟು ತಮಾಷೆಯ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಶಾಸಕ ಆಶಿಶ್ ಶೆಲಾರ್ ಮತ್ತು ರಾಹುಲ್ ಕನಾಲ್ ಅವರು ಸಲ್ಮಾನ್ ಅವರ ನಿವಾಸ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ವೈರಲ್ ಆಗಿದ್ದಾರೆ. ಸಲ್ಮಾನ್ ಖಾನ್ ಮತ್ತು ಅವರ ಕುಟುಂಬವು ವಿಶೇಷವಾಗಿ ಆರೋಗ್ಯ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವ ವಿವಿಧ ಸಾಮಾಜಿಕ ಉಪಕ್ರಮಗಳಲ್ಲಿ ಭಾಗಿಯಾಗಿದ್ದಾರೆ, ಈ ಬಗ್ಗೆ ಚರ್ಚೆ ಮಾಡಲು ಬಿಜೆಪಿ ಶಾಸಕರು ಆಗಮಿಸಿದ್ದರು. ಅವರ ಭೇಟಿಯ ನಂತರ, ಶೆಲಾರ್ ಮತ್ತು ರಾಹುಲ್ ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದರು.
ಕ್ಯಾಶುಯಲ್‌ನಲ್ಲಿ ಸಲ್ಮಾನ್ ಖಾನ್ ಟಿಶರ್ಟ್ ಹಾಗೂ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದರು. ಆದರೆ, ನೆಟ್ಟಿಗರು ಈ ಫೋಟೋ ಹೊರಬಂದಿದ್ದೇ ತಡ ಸಲ್ಮಾನ್ ಖಾನ್ ತೂತಾದ ಟಿಶರ್ಟ್ ಹಾಕಿಕೊಂಡು ತಿರುಗಾಡ್ತಾ ಇದ್ದಾರೆ ಎಂದು ವೈರಲ್ ಮಾಡಿಬಿಟ್ಟರು.
ಸಲ್ಮಾನ್ ಖಾನ್ ಅವರ ನೋ ಮೇಕಪ್ ಲುಕ್‌ನೊಂದಿಗೆ ಅವರ ತೂತಾದ ಟಿ ಶರ್ಟ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿತ್ತು. ಸಲ್ಮಾನ್ ಖಾನ್ ಮನೆಯಲ್ಲಿ ಧರಿಸಲು ಆಯ್ಕೆ ಮಾಡುವಂಥ ಬಟ್ಟೆಗಳ ಕುರಿತಾಗಿಯೇ ಚರ್ಚೆ ನಡೆದಿದೆ. ಕೆಲವರು ಸಲ್ಮಾನ್ ಖಾನ್ ಸರಳತೆಯನ್ನು ಹೊಗಳಿದ್ದರೆ, ಇನ್ನೂ ಕೆಲವರು ಬಹುಶಃ ಟಿ ಶರ್ಟ್ ತುತಾಗಿರುವ ವಿಚಾರ ಸ್ವತಃ ಸಲ್ಮಾನ್ ಖಾನ್‌ಗೂ ಗೊತ್ತಿರಲಿಕ್ಕಿಲ್ಲ ಎಂದು ಅಭಿಪ್ರಾಯ ವ್ಯಕ್ಯಪಡಿಸಿದ್ದಾರೆ.
ಸಲ್ಮಾನ್ ಖಾನ್ ಅವರ ಈ ಫೋಟೋಗೆ ಸಾಕಷ್ಟು ಕಾಮೆಂಟ್‌ಗಳು, ಮೀಮ್‌ಗಳು ಹಾಗೂ ಜೋಕ್‌ಗಳು ಬಂದಿವೆ. ಅವರ ಅಭಿಮಾನಿಗಳು ತಮ್ಮ ಯೋಚನಾಲಹರಿಯನ್ನು ಇಲ್ಲಿ ಬಿಟ್ಟಿದ್ದಾರೆ. ಸಲ್ಮಾನ್ ಖಾನ್ ಸಿಂಪ್ಲಿಸಿಟಿ ಮಾತ್ರವಲ್ಲದೆ, ತೂತಾದ ಟಿಶರ್ಟ್ ಹಿಂದಿನ ತಮಾಷೆಯ ಕಥೆಗಳನ್ನೂ ಹೇಳಲು ಆರಂಭಿಸಿದ್ದಾರೆ.
ಚಂದ್ರನ ಮೇಲೆ ಏಲಿಯನ್‌ಗಳ ನೌಕೆ ಕಂಡ ನಾಸಾದ ಎಲ್‌ಆರ್‌ಓ ನೌಕೆ?
ಸಲ್ಮಾನ್ ಖಾನ್ ಈ ರೀತಿ ತಿರುಗಾಡ್ತಾನೆ ಎಂದಾದ ಮೇಲೆ ನಾವೆಲ್ಲಾ ಯಾಕೆ ಮುಜುಗರ ಪಟ್ಟುಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದು ಸಲ್ಮಾನ್ ಖಾನ್ ಅವರ ಫ್ಯಾಶನ್ ಕೂಡ ಆಗಿರಬಹುದು ಎಂದಿದ್ದಾರೆ. ಹೊಸ ಟ್ರೆಂಡ್‌ಅನ್ನು ನಟ ಸ್ಟಾರ್ಟ್ ಮಾಡುತ್ತಿರಬಹುದು ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಇಂಥ ಟಿಶರ್ಟ್ ಧರಿಸ್ತಾರೆ ಅಂದ ಮೇಲೆ, ತೂತಾಗಿರುವ ಟಿಶರ್ಟ್‌ಗಳೇ ಇನ್ನು ಟ್ರೆಂಟ್ ಆಗುತ್ತದೆ ಎಂದು ಇನ್ನೊಬ್ಬ ಯೂಸರ್ ಬರೆದಿದ್ದಾರೆ. ಎಷ್ಟೇ ದೊಡ್ಡ ಸೆಲೆಬ್ರಿಟಿಗಳಾಗಿದ್ದು, ತಮ್ಮ ಮನೆಯಲ್ಲಿ ಅವರು ಸಾಮಾನ್ಯ ವ್ಯಕ್ತಿ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
iPhone 16 Pro Max: ಹೊಸ ಫೋನ್‌ಗಳಲ್ಲಿ ಇರಲಿದೆ ಈ 7 ಪ್ರಮುಖ ಅಪ್‌ಡೇಟ್‌ಗಳು!