ರಾಜಕೀಯಕ್ಕೆ ಇಳಿತಾರಾ ಕೆಜಿಎಫ್‌ ಸ್ಟಾರ್‌, ಸ್ಪಷ್ಟನೆ ಕೊಟ್ಟ ಬಿಗ್‌ ಹೀರೊ!

By Santosh Naik  |  First Published Apr 8, 2024, 6:29 PM IST

ಲೋಕಸಭೆ ಚುನಾವಣೆಯ ಹೊತ್ತಿನಲ್ಲಿಯೇ ಸಿನಿಮಾ ತಾರೆಯರು ರಾಜಕೀಯಕ್ಕೆ ಇಳಿಯುವ ಬಗ್ಗೆ ಸುದ್ದಿ ಹೆಚ್ಚಾಗುತ್ತಿದೆ. ಈಗಾಗಲೇ ಕಂಗನಾ ರಣಾವತ್‌ ಹಾಗೂ ನಟ ಗೋವಿಂದ ರಾಜಕೀಯಕ್ಕೆ ಇಳಿದಿದ್ದಾರೆ.
 


ನವದೆಹಲಿ (ಏ.8):  ಚಿತ್ರರಂಗದ ಎರಡು ಬಿಗ್‌ ನೇಮ್‌ಗಳಾದ ಕಂಗನಾ ರಣಾವತ್ ಮತ್ತು ಗೋವಿಂದ ಈ ಚುನಾವಣೆಯಿಂದ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ರಾಜಕೀಯದಲ್ಲಿ ಕಂಗನಾಗೆ ಇದು ಮೊದಲ ಇನ್ನಿಂಗ್ಸ್ ಆಗಿದ್ದರೆ, ಗೋವಿಂದ ಎರಡನೇ ಬಾರಿಗೆ ರಾಜಕೀಯಕ್ಕೆ ಇಳಿದಿದ್ದಾರೆ. ಇವರಿಬ್ಬರೂ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಹಿಂದಿನಿಂದಲೂ ರಾಜಕೀಯದಲ್ಲಿ ಬೇರೂರಿರುವ ಇಂಡಸ್ಟ್ರಿಯ ಮತ್ತೊಬ್ಬ ದೊಡ್ಡ ನಟ ಕೂಡ ರಾಜಕೀಯಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ನಟ ಸಂಜಯ್‌ ದತ್‌. ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಸಂಪಾದಿಸಿರುವ ಸಂಜಯ್‌ ದತ್‌, ತೀರಾ ಇತ್ತೀಚೆಗೆ ಕೆಜಿಎಫ್‌ ಚಿತ್ರದಲ್ಲಿ ಅಧೀರ ಪಾತ್ರದ ಮೂಲಕ ಇನ್ನಷ್ಟು ಜನಮನ್ನಣೆ ಸಂಪಾದಿಸಿದ್ದರು. ಕಳೆದ ಕೆಲವು ದಿನಗಳಿಂದ, ಸಂಜಯ್ ದತ್ ಅವರ ಬಗ್ಗೆ ಸುದ್ದಿ ಮತ್ತು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅವರು ಕೂಡ ಈ ಚುನಾವಣಾ ರೇಸ್‌ನಲ್ಲಿ ಕೈ ಹಾಕಬಹುದು ಎಂಬ ಊಹಾಪೋಹಗಳು ಇದ್ದವು. ಇದೀಗ ಈ ಪ್ರಶ್ನೆಗೆ ಸಂಜಯ್ ಅವರೇ ಉತ್ತರ ನೀಡಿದ್ದಾರೆ. ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ರಾಜಕೀಯಕ್ಕೆ ಪ್ರವೇಶಿಸುವ ಸುದ್ದಿಗೆ ಪ್ರತಿಕ್ರಿಯಿಸಿದರು.

ಸಂಜಯ್ ದತ್ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, 'ನನ್ನ ರಾಜಕೀಯ ಪ್ರವೇಶದ ಬಗ್ಗೆ ಇರುವ ಎಲ್ಲಾ ವದಂತಿಗಳಿಗೆ ನಾನು ಕೊನೆ ಹಾಡಲು ಬಯಸುತ್ತೇನೆ. ನಾನು ಯಾವುದೇ ಪಕ್ಷ ಸೇರುವುದಿಲ್ಲ ಅಥವಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸಂಜಯ್ ಮುಂದೆ ಎಂದಾದರೂ ಈ ರೀತಿ ಮಾಡಲು ಬಯಸಿದರೆ, ಅದನ್ನು ಮುಚ್ಚಿಡುವುದಿಲ್ಲ ಎಂದು ಹೇಳಿದರು. 'ನಾನು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಧರಿಸಿದರೂ, ಇದನ್ನು ನಾನೇ ಮೊದಲು ಘೋಷಿಸುತ್ತೇನೆ. ಈ ದಿನಗಳಲ್ಲಿ ನನ್ನ ಬಗ್ಗೆ ಏನೆಲ್ಲಾ ಸುದ್ದಿಗಳು ನಡೆಯುತ್ತಿವೆಯೋ ಅದು ಯಾವುದನ್ನೂ ನಂಬಬೇಡಿ' ಎಂದು ಹೇಳಿದ್ದಾರೆ.

Latest Videos

undefined

ಸಂಜಯ್ ದತ್‌ಗೆ ರಾಜಕೀಯ ಸಂಪರ್ಕ ಹೊಸದಲ್ಲ: ಸಂಜಯ್ ರಾಜಕೀಯ ಪ್ರವೇಶದ ವದಂತಿಗಳಿಗೆ ಪ್ರತಿಕ್ರಿಯೆ ನೀಡುತ್ತಿರುವುದು ಇದೇ ಮೊದಲಲ್ಲ. ಫ್ರೀ ಪ್ರೆಸ್ ಜರ್ನಲ್ ಪ್ರಕಾರ, 2019 ರಲ್ಲಿ, ಅವರು ರಾಷ್ಟ್ರೀಯ ಸಮಾಜ ಪಕ್ಷ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಮಹಾರಾಷ್ಟ್ರ ಸಚಿವರ ಹೇಳಿಕೆಯನ್ನು ಅವರು ನಿರಾಕರಿಸಿದ್ದರು.

ಪತ್ನಿ ಮತ್ತು ಪ್ರಿಯಕರನ ಕೊಲೆ ಮಾಡಿದ್ರಂತೆ ಸಂಜಯ್​ ದತ್​: ನಟನಿಂದ ಶಾಕಿಂಗ್​ ವಿಷ್ಯ ರಿವೀಲ್​!

ಇದಕ್ಕೂ ಮುನ್ನ ಆಪ್ತ ಗೆಳೆಯರೊಬ್ಬರ ಸಲಹೆ ಮೇರೆಗೆ 2009ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಂಜಯ್ ದತ್ ನಿರ್ಧರಿಸಿದ್ದರು. ಆದರೆ, ನಂತರ ಅವರು ತಮ್ಮ ಹೆಸರನ್ನು ಹಿಂಪಡೆದರು. ಇದಾದ ನಂತರ ಅವರನ್ನು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಅವರು 2010 ರಲ್ಲಿ ಈ ಹುದ್ದೆಯನ್ನು ತೊರೆದರು. ಸಂಜಯ್ ಅವರ ತಂದೆ ಸುನಿಲ್ ದತ್ ಅವರು ಕಾಂಗ್ರೆಸ್ ಪಕ್ಷದ ಸಂಸದರಾಗಿದ್ದರು ಮತ್ತು ಸುದೀರ್ಘ ರಾಜಕೀಯ ವೃತ್ತಿಜೀವನವನ್ನು ಹೊಂದಿದ್ದರು.

Sanjay Dutt Birthday: ವಿಶೇಷ ವಿಡಿಯೋ ಮೂಲಕ 'ಮುನ್ನಾಭಾಯ್' ಹುಟ್ಟುಹಬ್ಬಕ್ಕೆ ಪತ್ನಿ ಮಾನ್ಯತಾ ವಿಶ್

ಸಂಜಯ್ ಅವರ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡುವುದಾದರೆ,  'ದಿ ವರ್ಜಿನ್ ಟ್ರೀ' ನಲ್ಲಿ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇದರಲ್ಲಿ ಸನ್ನಿ ಸಿಂಗ್, ಮೌನಿ ರಾಯ್ ಮತ್ತು ಪಾಲಕ್ ತಿವಾರಿ ಕೂಡ ಅವರೊಂದಿಗೆ ಇರಲಿದ್ದಾರೆ. ಇದರ ನಂತರ ಅವರು ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಪರೇಶ್ ರಾವಲ್ ಮತ್ತು ದಿಶಾ ಪಟಾನಿ ಅವರೊಂದಿಗೆ 'ವೆಲ್‌ಕಮ್ ಟು ದಿ ಜಂಗಲ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಡಿಸೆಂಬರ್ 2024 ರ ವೇಳೆಗೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.

I would like to put all rumours about me joining politics to rest. I am not joining any party or contesting elections. If I do decide to step into the political arena then I will be the first one to announce it. Please refrain from believing what is being circulated in the news…

— Sanjay Dutt (@duttsanjay)
click me!