Latest Videos

ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ನಟಿ ಅನುಷ್ಕಾ ಶೆಟ್ಟಿ, ಶುರುವಾದ್ರೆ ನಿಲ್ಲೋದೇ ಇಲ್ವಂತೆ!

By Shriram BhatFirst Published Jun 20, 2024, 5:38 PM IST
Highlights

ನಟಿ ಅನುಷ್ಕಾ ಶೆಟ್ಟಿ ಅವರು ಎಸ್‌ಎಸ್‌ ರಾಜಮೌಳಿ ನಿರ್ದೇಶನ ಹಾಗೂ ತೆಲುಗು ಸ್ಟಾರ್ ನಟ ಪ್ರಭಾಸ್ ಅವರೊಂದಿಗೆ ನಟಿಸಿದ ಬಾಹುಬಲಿ ಸಿನಿಮಾ ಇಡೀ ಜಗತ್ತನ್ನೇ ಮೆಚ್ಚಿಸಿದೆ ಎನ್ನಬಹುದು. ಕಾರಣ, ಪಾರ್ಟ್ 1 ಹಾಗು ಪಾರ್ಟ್‌ 2 ಗಳಲ್ಲಿ ತೆರೆಗೆ ಬಂದಿದ್ದ ಬಾಹುಬಲಿ ಸಿನಿಮಾ ಅದೆಷ್ಟು ಬ್ಲಾಕ್ ಬಸ್ಟರ್ ಹಿಟ್..

ಕ್ಯೂಟ್ ನಟಿ, ಕನ್ನಡ ಮೂಲದ ತೆಲುಗು ಸ್ಟಾರ್ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಯಾರಿಗೆ ಗೊತ್ತಿಲ್ಲ? ಅನುಷ್ಕಾ ನಟನೆಯ 'ಅರುಂಧತಿ' ಚಿತ್ರವು ಅದ್ಯಾವ ಪರಿ ಸೂಪರ್ ಹಿಟ್ ಆಗಿತ್ತು ಎಂದರೆ, ಇಡೀ ಸೌತ್ ಇಂಡಿಯಾ ಮಾತ್ರವಲ್ಲ, ಅಂದು ಬಾಲಿವುಡ್ ಕೂಡ ತೆಲುಗು ಚಿತ್ರರಂಗವನ್ನು ಹಾಗು ನಟಿ ಅನುಷ್ಕಾ ಶೆಟ್ಟಿಯವರನ್ನು ಕೊಂಡಾಡಿತ್ತು. ಅರುಂಧತಿ ಮಾತ್ರವಲ್ಲ, ತೆಲುಗು ಹಾಗು ತಮಿಳಿನ ಅನೇಕ ಚಿತ್ರಗಳಲ್ಲಿ ನಟಿ ಅನುಷ್ಕಾ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವುದು ಸೀಕ್ರೆಟ್ ಸಂಗತಿಯೇನಲ್ಲ!

ನಟಿ ಅನುಷ್ಕಾ ಶೆಟ್ಟಿ ಅವರು ಎಸ್‌ಎಸ್‌ ರಾಜಮೌಳಿ ನಿರ್ದೇಶನ ಹಾಗೂ ತೆಲುಗು ಸ್ಟಾರ್ ನಟ ಪ್ರಭಾಸ್ ಅವರೊಂದಿಗೆ ನಟಿಸಿದ ಬಾಹುಬಲಿ ಸಿನಿಮಾ ಇಡೀ ಜಗತ್ತನ್ನೇ ಮೆಚ್ಚಿಸಿದೆ ಎನ್ನಬಹುದು. ಕಾರಣ, ಪಾರ್ಟ್ 1 ಹಾಗು ಪಾರ್ಟ್‌ 2 ಗಳಲ್ಲಿ ತೆರೆಗೆ ಬಂದಿದ್ದ ಬಾಹುಬಲಿ ಸಿನಿಮಾ ಅದೆಷ್ಟು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಎಂದರೆ, ಅಲ್ಲಿಯವರೆಗೂ ನಟಿ ಅನುಷ್ಕಾ ಯಾರು ಎಂದು ಗೊತ್ತಿಲ್ಲದ ಕೆಲವೇ ಕೆಲವು ಮಂದಿಗೆ ಅವರನ್ನು ಅದು ಪರಿಚಯಿಸಿದೆ ಎನ್ನಬಹುದು. ಅಷ್ಟರಮಟ್ಟಿಗೆ ಬಾಹುಬಲಿ ಸಿನಿಮಾ ನಟಿ ಅನುಷ್ಕಾ ಶೆಟ್ಟಿಯವರ ಕೆರಿಯರ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎನ್ನಬಹುದು. 

ಏಲಿಯನ್ ಸಂಪರ್ಕ ಮಾಡಿದ್ದಕ್ಕೆ ಹೃತಿಕ್ ರೋಶನ್‌ಗೆ ಜೋರಾಗಿ ಹೊಡೆದ ರೇಖಾ!

ಇಂತ ನಟಿ ಅನುಷ್ಕಾ ಶೆಟ್ಟಿ ಅಪರೂಪದ, ವಿಚಿತ್ರವಾದ ಖಾಯಿಲೆ ಎನ್ನಬಹುದಾದ ಸಮಸ್ಯೆಯೊಂದರಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹೌದು ನಟಿ ಅನುಷ್ಕಾ ಶೆಟ್ಟಿಯವರಿಗೆ ನಗುವ ಸಮಸ್ಯೆ ಇದೆಯಂತೆ. ಅರೇ, ಇದೇನಿದು? ನಗುವುದೂ ಕೂಡ ಒಂದು ಸಮಸ್ಯೆಯೇ ಎಂದು ನೀವು ಕೇಳಬಹುದು. ಆದರೆ, ಅವರಿಗೆ ನಗು ಒಮ್ಮೆ ಪ್ರಾರಂಭವಾದರೆ ಮುಗಿಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆಯಂತೆ. ಯಾವುದೋ ಕಾಮಿಡಿ ಕೇಳಿ ನಟಿ ಅನುಷ್ಕಾ ಶೆಟ್ಟಿ ನಗಲು ಶುರು ಮಾಡಿದರೆ ತುಂಬಾ ಹೊತ್ತು ನಗುತ್ತಲೇ ಇರುತ್ತಾರಂತೆ. 

ಹೆಂಗ್ ಕೊಡ್ಬೇಕು ಹಂಗೆ ಕೊಟ್ಟು, ಹೊಡ್ದು ಎತ್ಕೊಂಡು ಬಂದ್ವಲ್ಲಾ; ಕೆಜಿಎಫ್ ಸ್ಟಾರ್ ನಟ ಯಶ್!

ಅಂದ್ರೆ, ಈ ಕಂಟ್ರೋಲ್‌ ಸಿಗದ ನಗುವಿನ ಬಗ್ಗೆ ಅವರು ಹೇಳಿಕೊಂಡು, ನನಗೆ ಅದೊಂಥರಾ ಖಾಯಿಲೆ ಎನಿಸಿಬಿಟ್ಟಿದೆ. ಈ ಕಾರಣಕ್ಕೆ ನಾನು ಸಾಕಷ್ಟು ವೇಳೆ ಮುಜುಗರ ಕೂಡ ಅನುಭವಿಸಿದ್ದೇನೆ' ಅದರಲ್ಲೂ ಕಾಮಿಡಿ ಸೀನ್ ಏನಾದ್ರೂ ಇದ್ರೆ ಕತೆ ಮುಗಿಯಿತು. ಅದಕ್ಕೆ ಶುರವಾದ ನನ್ನ ನಗು ಅಷ್ಟು ಬೇಗ ನಿಲ್ಲಲ್ಲ ಎಂದು ಅರಿತಿರುವ ಶೂಟಿಂಗ್‌ ಸೆಟ್‌ನಲ್ಲಿ ಅವರೆಲ್ಲರೂ ಟೀ ಬ್ರೇಕ್ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಟೀ ಬ್ರೇಕ್ ಮುಗಿದರೂ ನನ್ನ ನಗು ಮುಗಿದಿರುವುದಿಲ್ಲ' ಎಂದಿದ್ದಾರೆ. 

ಬದಲಾವಣೆ ಜಗದ ನಿಯಮ ಹೌದು, ಆದ್ರೆ ಬೆಕ್ಕು ಹುಲಿ ಆಗುವುದಿಲ್ಲ; ಪ್ರಿಯಾಂಕಾ ಚೋಪ್ರಾ ಬಾಂಬ್!

click me!