ನಟ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್'ನಲ್ಲೂ ನಟ ಯಶ್..
ಕನ್ನಡದ ನಟ, ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಯಶ್ ಆಗಾಗ ಕೆಲವು ಮುತ್ತಿನಂಥ ಮಾತುಗಳನ್ನು ಆಡುತ್ತ ಇರುತ್ತಾರೆ. ಹೀಗೊಂದು ವೇದಿಕೆಯಲ್ಲಿ ಯಶ್ ಅವರು ಕೆಜಿಎಫ್ ಸಿನಿಮಾ ಮಾಡುವಾಗಿನ ಪಾಡು, ಹಾಗೂ ಅದು ರಿಲೀಸ್ ಆದ ಬಳಿಕ ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಬೇರೆ ಕಡೆಯಲ್ಲಿ ಬದಲಾದ ಅಭಿಪ್ರಾಯ, ಈಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ ಬಳಿಕ ಕನ್ನಡ ಸಿನಿಮಾಗಳ ಬಗ್ಗೆ ಪರಭಾಷೆಯ ಉದ್ಯಮ ಹಾಗು ಜನರು ರೆಸ್ಪಾನ್ಸ್ ಮಾಡುವ ರೀತಿಯೇ ಬದಲಾಗಿದೆ ಎಂಬುದನ್ನು ನಟ ಯಶ್ ಮಾರ್ಮಿಕವಾಗಿ ವಿವರಿಸಿದ್ದಾರೆ.
ಹಾಗಿದ್ದರೆ ನಟ ಯಶ್ ಏನು ಹೇಳಿದ್ದಾರೆ? 'ನಾನು ನನ್ನ ಕನಸು ಕೆಜಿಎಫ್ ಅನ್ನು ತಗೊಂಡು ಹೋದಾಗ ಅದನ್ನು ಕೇಳೋರೆ ಇರ್ಲಿಲ್ಲ. ನಾವೇನೋ ಹೇಳ್ತೀವಿ ಅಂದ್ರೆ ಕೇಳೋಕೆ ಮೊದ್ಲೇ, ಅಂದ್ರೆ, ನಾವು ಈ ಸೇಲ್ಸ್‌ಮನ್‌ಗಳು ಬರ್ತಿದ್ದಂಗೆ, ಏ ಬೇಡಪ್ಪ ನಮಗೆ ಅಂತೀವಲ್ಲ ಹಾಗೆ, ಆ ಫೀಲ್. ಏ, ನಮ್ಮತ್ರ ಎಲ್ಲಾ ಇದೆ, ಆದ್ರೂ ಕೇಳಪ್ಪ ನಾವ್ ಏನ್ ಹೇಳ್ತೀವಿ ಅಂತ ಅಂದ್ರೂ ಯಾರೂ ಕೇಳೋರು ಇರಲ್ವಲ್ಲಾ ಹಾಗೆ.. ಕನ್ನಡ ಇಂಡಸ್ಟ್ರಿ ಒಂದು ಸಿನಿಮಾ ಅಂದಾಗ.
ಬದಲಾವಣೆ ಜಗದ ನಿಯಮ ಹೌದು, ಆದ್ರೆ ಬೆಕ್ಕು ಹುಲಿ ಆಗುವುದಿಲ್ಲ; ಪ್ರಿಯಾಂಕಾ ಚೋಪ್ರಾ ಬಾಂಬ್!
ಆದ್ರೆ ನಾವು ಹೆಂಗ್ ಅಟ್ರಾಕ್ಸ್ ಮಾಡ್ಬೇಕು, ಹೆಂಗ್ ಕೊಡ್ಬೇಕು ಹಂಗೆ ಕೊಟ್ಟು, ಹೊಡ್ದು ಎತ್ಕೊಂಡು ಬಂದ್ವಲ್ಲಾ, ಇವತ್ತು ನಮಗೆ ಬೇಕು ಅಂತಾರೆ, ಈ ಮೆಂಬರ್‌ಶಿಪ್ ಬೇಕು ಅಂತಾರಲ್ಲ ಹಾಗೇ.. ಹಂಗೆ ಕೇಳ್ತಾ ಇದಾರಲ್ಲ, ದಟ್ ಈಸ್ ಚೇಂಜ್' ಅಂದಿದ್ದಾರೆ ನಟ ಯಶ್. ಹೌದು, ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಸಿನಿಮಾವನ್ನು ಕನ್ನಡಿಗರು ಕೊಟ್ಟಮೇಲೆ ಖಂಡಿತಾ ಸ್ಯಾಂಡಲ್‌ವುಡ್ ಮಾರ್ಕೆಟ್ ಬದಲಾಗಿದೆ. ಕನ್ನಡ ಸಿನಿಮಾಗಳಿಗೂ ಡಬ್ಬಿಂಗ್ ಹಾಗು ರಿಲೀಸ್ ಮಾರುಕಟ್ಟೆ ಸಾಕಷ್ಟು ವಿಸ್ತರಿಸಿದೆ.
ಕಿರುತೆರೆ ನಟಿಯರು ಕೈಕೈ ಹಿಡಿದು ಕುಣಿದರು, ಕೇಕೆ ಹಾಕಿ ನಕ್ಕರು; ಯಾಕೆ ಹೀಗೆ ಗುರೂ!
ಅಂದಹಾಗೆ, ನಟ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
ವೀರಪ್ಪನ್ ಅಣ್ಣಾವ್ರನ್ನು ಬಿಡುಗಡೆ ಮಾಡಿದಾಗ ಕೊಟ್ಟ ಗಿಫ್ಟ್ ಏನು? ಸೇತುಕುಳಿ ಅದನ್ನ ಕೊಟ್ಟಿದ್ನ?