
ಕಹಾನಿ ಸ್ಲೀಪರ್ ಹಿಟ್ ಆಗಿ ಹೊರಹೊಮ್ಮಿ 12 ವರ್ಷಗಳಾಗಿವೆ. ಆದರೆ, ಸುಜಯ್ ಘೋಷ್ ನಿರ್ದೇಶನದ ಈ ಸಿನಿಮಾದ ಇನ್‌ಸೈಡ್ ಸ್ಟೋರಿಗಳು ಇಂದಿಗೂ ಈ ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸುವಂತೆ ಮಾಡುತ್ತದೆ. ಕೋಲ್ಕತ್ತಾದ ದುರ್ಗಾಪೂಜೆಯ ಸಂಭ್ರವವನ್ನು ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಿಸಲಾಗಿತ್ತು. ಅದರೊಂದಿಗೆ ಸಿನಿಮಾವನ್ನು ಗೆರಿಲ್ಲಾ ಫಿಲ್ಮ್‌ಮೇಕಿಂಗ್ ಮಾಡಲಾಗಿತ್ತು. ಅದೇನೇ ಇದ್ದರೂ ಕಹಾನಿ ಸಿನಿಮಾವನ್ನು ಶೂಟಿಂಗ್ ಮಾಡೋದು ನಿರ್ದೇಶಕರಿಗೆ ಮಾತ್ರವಲ್ಲ ನಟರಿಗೂ ಕಷ್ಟವಾಗಿತ್ತು. ಮಶಾಬೆಲ್ ಇಂಡಿಯಾಗಾಗಿ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಅವರೊಂದಿಗೆ ಮಾತುಕತೆ ನಡೆಸಿದ ನಿರ್ದೇಶಕ ಸುಜೋಯ್ ಘೋಷ್ ಅವರು "ಬಿಗಿಯಾದ ಬಜೆಟ್" ಕಾರಣದಿಂದಾಗಿ ವಿದ್ಯಾಗೆ ವ್ಯಾನಿಟಿ ವ್ಯಾನ್ ಅನ್ನು ಕೂಡ ನೀಡಲು ನಮಗೆ ಸಾಧ್ಯವಾಗಿರಲಿಲ್ಲ. ಆದರೆ, ವಿದ್ಯಾ ಬಾಲನ್ ಮಾತ್ರ ಎಲ್ಲರೊಂದಿಗೆ ಉತ್ತಮ ರೀತಿಯಲ್ಲಿ ಹೊಂದಿಕೊಂಡಿದ್ದರು. ಚಿತ್ರದಲ್ಲಿ ವಿದ್ಯಾ ಬಾಲನ್ ಗರ್ಭಿಣಿ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಶೂಟಿಂಗ್ ಟೈಮ್‌ನಲ್ಲಿ ವಿದ್ಯಾ ಬಾಲನ್ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರ್‌ನಲ್ಲಿಯೇ ತಮ್ಮ ಬಟ್ಟೆಗಳನ್ನು ಬದಲಿಸುತ್ತಿದ್ದರು. ಈ ವೇಳೆ ಇಡೀ ಕಾರ್‌ಗೆ ಕಪ್ಪು ಬಟ್ಟೆ ಹೊದಿಸಲಾಗುತ್ತಿತ್ತು ಎಂದು ನಿರ್ದೇಶಕ ಹೇಳಿದ್ದಾರೆ.
ಈ ಸಿನಿಮಾಗಾಗಿ ದೊಡ್ಡ ಬಜೆಟ್ ಇದ್ದಿರಲಿಲ್ಲ. ವ್ಯಾನಿಟಿ ವ್ಯಾನ್ ಕೂಡ ವಿದ್ಯಾ ಅವರಿಗೆ ನೀಡುವಷ್ಟು ಹಣವಿರಲಿಲ್ಲ. ಟೈಟ್ ಬಜೆಟ್ ಇದ್ದ ಕಾರಣಕ್ಕೆ ಶೂಟಿಂಗ್‌ಅನ್ನು ನಿಸಲ್ಲಿಸುವ ಹಾಗೆಯೂ ಇದ್ದಿರಲಿಲ್ಲ. ಹಾಗಾಗಿ ಪ್ರತಿ ಬಾರಿ ಅವರು ಬಟ್ಟೆ ಬದಲಾಯಿಸಬೇಕಾದಾಗ, ಅವರ ಇನ್ನೋವಾ ಕಾರ್‌ಗೆ ಕಪ್ಪು ಬಟ್ಟೆ ಹೊದಿಸುತ್ತಿದ್ದೆವು. ನಡು ರಸ್ತೆಯಲ್ಲಿ ನಿಂತಿದ್ದ ಕಾರ್‌ನಲ್ಲಿಯೇ ಅವರು ಬಟ್ಟೆ ಬಸಲಾಯಿಸಿ, ಶೂಟಿಂಗ್‌ಗೆ ಬರುತ್ತಿದ್ದರು ಎಂದಿದ್ದಾರೆ.
ಕಹಾನಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದರೂ, ಇಂದಿಗೂ ಕೂಡ ನನಗೆ ಅಷ್ಟೇನೂ ಅವಕಾಶಗಳಿಲ್ಲ ಎಂದು ಸುಜಯ್ ಘೋಷ್ ಹೇಳಿದ್ದಾರೆ. ಕಹಾನಿ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ತೋರಿದ ಬದ್ಧತೆ, ಅಮಿತಾಬ್ ಬಚ್ಚನ್ ಹಾಗೂ ಶಾರುಖ್ ಖಾನ್‌ಗಿಂತ ಕಮ್ಮಿಯಿಲ್ಲ ಎಂದಿದ್ದಾರೆ. ಅಮಿತಾಬ್ ಬಚ್ಛನ್ ಅವರಿಗಾಗಿ ಬದ್ಲಾ ಸಿನಿಮಾವನ್ನು ಸುಜಯ್ ಘೋಷ್ ನಿರ್ದೇಶನ ಮಾಡಿದ್ದರು. ಇದನ್ನು ಶಾರುಖ್ ಖಾನ್ ನಿರ್ಮಾಣ ಮಾಡಿದ್ದರು.
"ಅಲಾದಿನ್‌ನ ವೈಫಲ್ಯದ ನಂತರ, ವಿದ್ಯಾ ಅವರು ಕಹಾನಿ ಬೇಡ ಎಂದು ಸುಲಭವಾಗಿ ಹೇಳಬಹುದಿತ್ತು. ಆದರೆ, ಅವರು ಅದಾಗಲೇ ಮಾತು ಕೊಟ್ಟಾಗಿತ್ತು. ಅಮಿತಾಬ್ ಬಚ್ಚನ್, ಶಾರುಖ್ ಖಾನ್ ರೀತಿಯಲ್ಲಿ ಕೊಟ್ಟ ಮಾತನ್ನು ಪಾಲಿಸುವಂತ ಕಲಾವಿದೆ ವಿದ್ಯಾ ಬಾಲನ್ ಎಂದು ಹೇಳಿದ್ದಾರೆ.
ಹೆಚ್ಚುತ್ತಿದೆ ಪತಿ-ಪತ್ನಿಯನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳುವ ಟ್ರೆಂಡ್! ನಟಿ ವಿದ್ಯಾ ಬಾಲನ್ ಹೇಳಿದ್ದೇನು?
ಕಹಾನಿ 2012 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ನವಾಜುದ್ದೀನ್ ಸಿದ್ದಿಕಿ, ಪರಂಬ್ರತ ಚಟರ್ಜಿ, ಶಾಶ್ವತ ಚಟರ್ಜಿ, ಇಂದ್ರನೀಲ್ ಸೆಂಗುಪ್ತ, ಧೃತಿಮಾನ್ ಚಟರ್ಜಿ, ದರ್ಶನ್ ಜರಿವಾಲಾ ಮತ್ತು ಇತರರು ನಟಿಸಿದ್ದರು. ಕಾಣೆಯಾದ ಗಂಡನನ್ನು ಹುಡುಕಲು ಲಂಡನ್‌ನಿಂದ ಕೋಲ್ಕತ್ತಾಗೆ ಪ್ರಯಾಣಿಸುವ ವಿದ್ಯಾ ಬಾಗ್ಚಿ ಎಂಬ ಗರ್ಭಿಣಿ ಮಹಿಳೆಯನ್ನು ಕಥೆಯನ್ನು ಇದು ಹೊಂದಿದೆ. ಆದರೆ, ಸಿನಿಮಾದ ಕ್ಲೈಮ್ಯಾಕ್ಸ್ ಮಾತ್ರ ಬಹಳ ವಿಭಿನ್ನವಾಗಿ ಚಿತ್ರಿಸಲಾಗಿತ್ತು.
ಡರ್ಟಿ ಪಿಕ್ಚರ್ ಹಾಡಿಗೆ ಡ್ಯಾನ್ಸ್: ಡೆನ್ಮಾರ್ಕ್ ಜನರ ಹೃದಯ ಕದ್ದ ಸುಂದರಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.