ಪಿಬಿ ಶ್ರೀನಿವಾಸ್‌ಗೆ ಆಗಿರೋ ಅನ್ಯಾಯಕ್ಕೆ ಡಾ ರಾಜ್‌ಕುಮಾರ್ ಇಟ್ಟ ಹೆಜ್ಜೆಯೇ ರೋಚಕ!

ತಾವು ಸ್ವತಃ ತಮ್ಮ ಚಿತ್ರಗಳಿಗೆ ಹಾಡಲು ಶುರುಮಾಡಿದ ಕಾರಣಕ್ಕೆ ಪಿಬಿ ಶ್ರೀನಿವಾಸ್‌ ಅವರಿಗೆ ಚಾನ್ಸ್ ತಪ್ಪಿತು ಎಂದು ಡಾ ರಾಜ್‌ಕುಮಾರ್ ಅವರು ನೊಂದುಕೊಂಡರು. ಆದರೆ, ಡಾ ರಾಜ್‌ಕುಮಾರ್ ಅವರ ಕಂಠ ಹಾಗೂ ಹಾಡನ್ನು ಜನರು..

Dr Rajkumar did not receive remuneration for his Singing by respecting PB Srinivas

ಹೌದು, ಡಾ ರಾಜ್‌ಕುಮಾರ್ (Dr Rajkumar) ಅವರ ವಿಷಯದಲ್ಲಿ ಪ್ರತಿಯೊಂದು ಅಧ್ಯಾಯ ಕೂಡ ವಿಶಿಷ್ಠ ಹಾಗೂ ವಿಶೇಷ ಅರ್ಥ ಹೊಂದಿರುವಂಥದ್ದು. ಡಾ ರಾಜ್‌ಕುಮಾರ್ ಅವರು ಕಪ್ಪು-ಬಿಳುಪು ಕಾಲದಿಂದಲೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 1954ರಲ್ಲಿ ತೆರೆಗೆ ಬಂದ ಬೇಡರ ಕಣ್ಣಪ್ಪ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಡಾ ರಾಜ್‌ಕುಮಾರ್‌ ಅವರು ಸ್ವತಃ ಹಾಡಲಿಲ್ಲ. 1974ರಲ್ಲಿ ಡಾ ರಾಜ್‌ಕುಮಾರ್ ಅಭಿನಯದಲ್ಲಿ ತೆರೆಗೆ ಬಂದ 'ಸಂಪತ್ತಿಗೆ ಸವಾಲ್' ಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ಡಾ ರಾಜ್‌ಕುಮಾರ್ ಅವರು ಹಾಡಿದ್ದಾರೆ. 

ಸಂಪತ್ತಿಗೆ ಸವಾಲ್ ಚಿತ್ರದಲ್ಲಿ 'ಯಾರೇ ಕೂಗಾಡಲಿ..' ಹಾಡನ್ನು ಸ್ವತಃ ಡಾ ರಾಜ್‌ಕುಮಾರ್ ಹಾಡಿದ್ದಾರೆ. ಅದನ್ನು ಮೊದಲು ಪಿಬಿ ಶ್ರೀನಿವಾಸ್‌ (PB Srinivas) ಅವರಿಂದಲೇ ಹಾಡಿಸಲು ನಿರ್ಧರಿಸಲಾಗಿತ್ತು. ಆದರೆ, ಸಂಗೀತ ನಿರ್ದೇಶಕ ಇಳಯರಾಜಾ ಅವರು ಅವರಿಗಾಗಿ ಕಾಯುಬ ಬದಲು ಡಾ ರಾಜ್‌ಕುಮಾರ್ ಅವರಿಂದಲೇ ಹಾಡಿಸಿ ಎಂದು ಸಲಹೆ ಕೊಟ್ಟರು. 'ಡಾ ರಾಜ್‌ಕುಮಾರ್ ಅವರು ರಂಗಭೂಮಿ ಕಲಾವಿದರು. ಅವರಿಗೆ ಹಾಡಲು ಬರುತ್ತದೆ. ಅವರೇ ಹಾಡಲಿ' ಎಂದು ಹೇಳಿದ್ದರಂತೆ ಇಳಯರಾಜಾ. ಅಂದು ರಂಗಭೂಮಿ ಕಲಾವಿದರೆಲ್ಲರೂ ನಟನೆ ಜೊತೆಗೆ ಗಾಯನ ಕೂಡ ಮಾಡುತ್ತಿದ್ದರು. ಅದೇ ರೀತಿ ಡಾ ರಾಜ್‌ಕುಮಾರ್ ಕೂಡ ನಾಟಕಗಳಲ್ಲಿ ತಾವೇ ಹಾಡುತ್ತಿದ್ದರು. 

Latest Videos

ಅಷ್ಟು ಚೆನ್ನಾಗಿ ಹಾಡುವ ಡಾ ರಾಜ್‌ ಇಷ್ಟು ದಿನ ಆ ಅವಕಾಶವನ್ನು ನಂಗೆ ಬಿಟ್ಟಿದ್ದರಲ್ಲಾ; ಪಿಬಿ ಶ್ರೀನಿವಾಸ್!

ಹೀಗಾಗಿ, ಮೊಟ್ಟಮೊದಲ ಬಾರಿಗೆ ಡಾ ರಾಜ್‌ಕುಮಾರ್ ಅವರು ಸಂಪತ್ತಿಗೆ ಸವಾಲ್ ಚಿತ್ರದ ಮೂಲಕ ನಟ ಅನ್ನೋ ಪಟ್ಟದ ಜೊತೆ ಗಾಯಕ ಎಂಬ ಪಟ್ಟವೂ ಸೇರಿಕೊಂಡಿತು. ಆದರೆ, ಅಲ್ಲಿಯವರೆಗೂ ಡಾ ರಾಜ್‌ಕುಮಾರ್ ನಟನೆಯ ಸಿನಿಮಾಗಳಿಗೆ ಹಾಡುತ್ತಿದ್ದ ಗಾಯಕ 'ಪಿಬಿ ಶ್ರೀನಿವಾಸ್' ಅವರಿಗೆ ಇದರಿಂದ ಅವಕಾಶ ಕೈತಪ್ಪಿ ಹೋಯ್ತು. ಗಾಯನವನ್ನೇ ವೃತ್ತಿ ಮಾಡಿಕೊಂಡಿದ್ದ ಪಿಬಿ ಶ್ರೀನಿವಾಸ್ ಅವರಿಗೆ ಇದರಿಂದ ಅನ್ಯಾಯ ಆಗಿದ್ದು ನಿಜ. ಹಾಗಂತ ಡಾ ರಾಜ್‌ಕುಮಾರ್ ಅವರೇ ಹೇಳಿದ್ದು, ಅದಕ್ಕಾಗಿ ತುಂಬಾ ಪಶ್ವಾತ್ತಾಪ ಪಟ್ಟಿದ್ದಾರೆ. 

ತಾವು ಸ್ವತಃ ತಮ್ಮ ಚಿತ್ರಗಳಿಗೆ ಹಾಡಲು ಶುರುಮಾಡಿದ ಕಾರಣಕ್ಕೆ ಪಿಬಿ ಶ್ರೀನಿವಾಸ್‌ ಅವರಿಗೆ ಚಾನ್ಸ್ ತಪ್ಪಿತು ಎಂದು ಡಾ ರಾಜ್‌ಕುಮಾರ್ ಅವರು ನೊಂದುಕೊಂಡರು. ಆದರೆ, ಡಾ ರಾಜ್‌ಕುಮಾರ್ ಅವರ ಕಂಠ ಹಾಗೂ ಹಾಡನ್ನು ಜನರು ಅದಾಗಲೇ ಒಪ್ಪಿಕೊಂಡುಬಿಟ್ಟಿದ್ದರು. ಹೀಗಾಗಿ, ಡಾ ರಾಜ್‌ ನಟನೆಯ ಚಿತ್ರಕ್ಕೆ ಅವರೇ ಹಾಡೋದು ಅನಿವಾರ್ಯ ಆಯ್ತು. ಕಾರಣ, ಅಣ್ಣಾವ್ರ ನಟನೆಯ ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರು ಡಾ ರಾಜ್‌ಕುಮಾರ್ ಅವರೇ ಹಾಡಬೇಕೆಂದು ಪಟ್ಟು ಹಿಡಿದುಬಿಟ್ಟರು. ಆದ್ದರಿಂದ ಅಸಹಾಯಕರಾದ ಡಾ ರಾಜ್‌ಕುಮಾರ್ ಅವರು ಹಾಡುವುದನ್ನು ಮುಂದುವರಿಸಿದರು. 

ರಾಕಿಂಗ್ ಸ್ಟಾರ್ ಯಶ್ ಒಟ್ಟೂ ಆಸ್ತಿ ಎಷ್ಟು? ಇಷ್ಟು ಬೇಗ ಅಷ್ಟೊಂದು ಕೋಟಿ ಸಂಪಾದಿಸಿದ್ದು ಹೇಗೆ?

ಆದರೆ, ತಮ್ಮಿಂದ ಪಿಬಿ ಶ್ರೀನಿವಾಸ್ ಅವರಿಗೆ ಅನ್ಯಾಯವಾಯ್ತು ಎಂದುಕೊಂಡ ಡಾ ರಾಜ್‌ಕುಮಾರ್ ಅವರು ಅದಕ್ಕೆ ಪ್ರಾಯಶ್ಚಿತ್ತ ಎಂಬಂತೆ ತಮ್ಮ ಹಾಡಿಗೆ ಬಂದ ಸಂಭಾವನೆಯನ್ನು ಸ್ವೀಕರಿಸುತ್ತಿರಲಿಲ್ಲ. ಬದಲಿಗೆ ಅದನ್ನು ಸಾಮಾಜಿಕ ಕಾರ್ಯಗಳಿಗೆ, ಟ್ರಸ್ಟ್‌ಗಳಿಗೆ ನೀಡುತ್ತಿದ್ದರು. ಸಂಪತ್ತಿಗೆ ಸವಾಲ್ ಚಿತ್ರದಿಂದ ಹಿಡಿದು ಜೀವನದ ಕೊನೆಯವರೆಗೂ ಡಾ ರಾಜ್‌ಕುಮಾರ್ ಅವರು ಹಾಡಿದ್ದಕ್ಕೆ ಬಂದ ಸಂಭಾವನೆಯನ್ನು ಸ್ವೀಕರಿಸಲೇ ಇಲ್ಲ. ಆದರೆ, ಅದರಿಂದ ಪಿಬಿ ಶ್ರೀನಿವಾಸ್ ಅವರಿಗೆ ಯಾವುದೇ ಲಾಭವಾಗಲಿಲ್ಲ. ಆದರೆ, ಅಣ್ಣಾವ್ರು ಆ ರೀತಿಯಲ್ಲಿ ಪ್ರಾಯಶ್ಚಿತ್ತ ಮಾಡಿಕೊಂಡು ಮನಸ್ಸಿಗೆ ನೆಮ್ಮದಿ ಪಡೆದುಕೊಂಡರು ಎನ್ನಬಹುದು. 

vuukle one pixel image
click me!