Latest Videos

ಹುಡ್ಗಿ ಇಂಪ್ರೆಸ್ ಮಾಡೋಕೋ, ವೀಡಿಯೋ ಮಾಡೋಕೋ ಹೋಗಿ ಹಾಳಾಗ್ಬೇಡಿ: ರಾಕಿಂಗ್ ಸ್ಟಾರ್ ಯಶ್!

By Shriram BhatFirst Published Jun 15, 2024, 3:33 PM IST
Highlights

ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಸಂದರ್ಶನಗಳಲ್ಲಿ ಆಗಾಗ ಕೆಲವು ಸೀಕ್ರೆಟ್‌ಗಳನ್ನು ಹೇಳುತ್ತಿರುತ್ತಾರೆ. ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು..


'ಪೇರೆಂಟ್ಸ್ ನಮ್ಗೆ ಜನ್ಮ ಕೊಟ್ಟಿದಾರೆ. ನಾವು ಹೊರಗಡೆ ಏನೇನೋ ಮಾಡ್ತಾ ಇರ್ತೀವಿ. ಒಂದು ಸಲ ನಾವು ನಮ್ಮ ಜೀವನದವನ್ನು ತಿರುಗಿ ನೋಡಬೇಕು. ಅವ್ರು ನಮ್ಮನ್ನ ಬೆಳೆಸೋದಕ್ಕೆ ಅದೆಷ್ಟು ಕಷ್ಟ ಪಟ್ಟಿರ್ತಾರೆ. ಹುಟ್ಟಿದಾಗಿನಿಂದ, ನಾವು ಹೆಜ್ಜೆ ಎತ್ತಿಟ್ಟು ನಡೆಯುವಾಗಿಂದ, ಹಾಲು ಕುಡಿಸಿ, ಬೆಳೆಸಿ, ನಮ್ಗೆ ಎಲ್ಲೂ ಒಂದ್ ಕಡೆ ಚಿಕ್ಕ ಗಾಯನೂ ಆಗದೇ ಇರೋ ತರ ಬೆಳೆಸಿರ್ತಾರೆ. 

ಎಲ್ಲೋ ಒಂದ್ ನಿಮಿಷ ಏನೋ ವೀಡಿಯೋ ಮಾಡೋಕ್ ಹೋಗಿಯೋ, ಅಥವಾ ಹುಡ್ಗಿ ಇಂಪ್ರೆಸ್ ಮಾಡೋಕೋ, ಮತ್ತೊಂದಕ್ಕೋ ಬೈಕಿಂದ ಬಿದ್ದು ನಮ್ಗೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಆ ಲಾಸ್ ತುಂಬೋಕಾಗಲ್ಲ. ಫ್ಯಾಮಿಲಿಗೆ ರೆಸ್ಪೆಕ್ಟ್ ಕೊಡೋಣ, ಅವ್ರ ಬಗ್ಗೆ ನೀವು ಗಮನ ಇಟ್ಕೊಳ್ಳಿ ಏನೇ ಮಾಡಿದ್ರೂ.. ನಿಮ್ ಫ್ಯಾಮಿಲಿ ಬಗ್ಗೆ ಗೌರವ ಇರ್ಲಿ, ಗಮನ ಇರ್ಲಿ ನೀವು ಏನೇ ಮಾಡ್ತಾ ಇದ್ರೂ.. ' ಎಂದಿದ್ದಾರೆ ನಟ ರಾಕಿಂಗ್ ಸ್ಟಾರ್ ಯಶ್. 

ಅಪ್ಪು ಅವ್ರು ಬಿಗ್ ಸ್ಟಾರ್, ಇಲ್ಲಿ ಇಷ್ಟು ಜನ ಕಾಯ್ತಾ ಇದೀವಿ; ಹೀಗಂದಿದ್ಯಾಕೆ 'ಕೋಟಿ' ಪರಮ್..?

ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಸಂದರ್ಶನಗಳಲ್ಲಿ ಆಗಾಗ ಕೆಲವು ಸೀಕ್ರೆಟ್‌ಗಳನ್ನು ಹೇಳುತ್ತಿರುತ್ತಾರೆ. ನಟ ಯಶ್ ಅವರು ಒಮ್ಮೆ ಹೀಗೆ ಹೇಳಿದ್ದಾರೆ. 'ಸಾಧನೆ ಅಂದ್ರೆ ಹೇಗಿರಬೇಕು? ಸಾಧನೆ ಅಂದರೆ, ಎಲ್ಲಿ ನಿಮ್ಮನ್ನು ಗುರುತಿಸಿರಲ್ಲವೋ, ಅಥವಾ ನಿಮ್ಮನ್ನು ಎಲ್ಲಿ ಜನರು ಹಿಯಾಳಿಸಿದ್ದಾರೋ, ಎಲ್ಲಿ ಟೀಕಿಸಿದಾರೋ ಅಲ್ಲಿ ನೀವು ಬೆಳೀಬೇಕು. ಅವರಿಂದಲೇ ನೀವು ಹೊಗಳಿಸಿಕೊಳ್ಳಬೇಕು.

ರೆಡ್ ಕಾರ್ಪೆಟ್ ಸ್ಟುಡಿಯೋ 777 ನಡೆಸುತ್ತಿದ್ರು ಪವಿತ್ರಾ ಗೌಡ; ವಿಜಯಲಕ್ಷ್ಮೀಗೆ ಟಾಂಗ್ ಕೊಡೋಕಾ?

ಹಾಗಂತ ಅವ್ರದ್ದು ಏನೂ ತಪ್ಪಿರಲ್ಲ. ಸಮಯ ಅವ್ರಿಗೆ ಗೊತ್ತಿರಲ್ಲ, ಅವ್ರು ಏನೋ ಅಂದ್ಕೊಂಡು ತಮ್ಮ ಕರ್ತವ್ಯ ಅಂತ ಮಾಡ್ತಾ ಇರ್ತಾರೆ. ಜನ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಶೇ. 90% ಜನರು ಕುಗ್ಗಿಹೋಗಿಬಿಡುತ್ತಾರೆ. ಆದರೆ, ಹಾಗೆ ಮಾಡಬಾರದು. ಯಾರು ಕುಗ್ಗೋದಿಲ್ವೋ ಅವನು ದೊಡ್ಡ ಸಾಧನೆ ಮಾಡ್ತಾನೆ' ಎಂದಿದ್ದಾರೆ ನಟ ಯಶ್. 

ಮುಂಗಾರು ಮಳೆ ಜೋಡಿ ಹೊಸ ಸಿನಿಮಾಗೆ ಆಯ್ಕೆಯಾದ 'ಆ ಬಿಗ್ ಸ್ಟಾರ್' ನಟ ಯಾರು?

ಅಂದಹಾಗೆ, ನಟ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. 

'ಇರುವುದೊಂದೇ ಜೀವನ, ಚೆನ್ನಾಗಿ ಬದುಕಿ' ಅಂದ್ರು ಜೂ. ಎನ್‌ಟಿಆರ್‌; ಪಕ್ಕದಲ್ಲಿದ್ದ ರಾಮ್ ಚರಣ್ ಮಾಡಿದ್ದೇನು?

click me!