The Kashmir Files ಯಾವ ಕಾರಣಕ್ಕೆ ನೀವು ಕಾಶ್ಮೀರಿ ಪಂಡಿತರ ವಲಸೆ ಕುರಿತ ಸಿನಿಮಾ ನೋಡಬೇಕು?

By Suvarna News  |  First Published Mar 12, 2022, 3:28 PM IST

ನಿರ್ದೇಶಕ ಅಗ್ನಿಹೋತ್ರಿ ಆಕ್ಷನ್ ಕಟ್ ಹೇಳಿರುವ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ. ವಿಮರ್ಶೆ ಕೊಟ್ಟ ನೆಟ್ಟಿಗರು, ಸಿನಿಮಾ ನೋಡಿಲ್ಲ ಅಂದ್ರೆ ಸತ್ಯ ತಿಳಿಯುವುದಿಲ್ಲ ಅಂತಿದ್ದಾರೆ. 
 


ದಿ ಕಾಶ್ಮೀರಿ ಫೈಲ್ಸ್ (The Kashmir Files) ಸಿನಿಮಾ ಟೈಟಲ್ ರಿಲೀಸ್ ಆದ ದಿನದಿಂದಲೂ ಸುದ್ದಿಯಲ್ಲಿದೆ. ಅನೇಕ ವಿಚಾರಗಳಿಗೆ ಕೋರ್ಟ್‌ ಮೆಟ್ಟಿಲು ಏರಿರುವ ಈ ಸಿನಿಮಾದ ಬಗ್ಗೆ ಸಿನಿ ರಸಿಕರು ಪಾಸಿಟಿವ್ ರೆಸ್ಪಾನ್ಸ್ ಕೊಡುತ್ತಿದ್ದಾರೆ. ಸಿನಿಮಾ ಸೂಪರ್ ಆಗಿದೆ ಸತ್ಯ ಹೇಳುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಗೊತ್ತಲ್ವಾ ಕೆಲವೊಂದು ಗುಂಪು ಅದರಲ್ಲಿರುವ ತಪ್ಪು ಹುಡುಕುವುದಕ್ಕೆ ಇರುತ್ತಾರೆ. ಸಿನಿಮಾದಲ್ಲಿರುವ ಕೆಲವೊಂದು ನೈಜ ಘಟನೆಗಳನ್ನು ನೋಡಿ ಮಹಿಳೆಯೊಬ್ಬರು ನಿರ್ದೇಶಕ ವಿವೇಕ್ ಕಾಲಿಗೆ ಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. 

'ನಮಗೆ ಏನಾಗಿದೆ ಅಂತ ನೀವು ಮಾತ್ರ ಅರ್ಥ ಮಾಡಿಕೊಂಡಿದ್ದೀರಿ. ನಿಮ್ಮ ಬಿಟ್ಟು ಇದನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಅದಕ್ಕೆ ನಿಮ್ಮ ಕಾಲಿಗೆ ಬೀಳೋಣ ಅನಿಸಿತು. ನೀವು ದಯವಿಟ್ಟು ಇನ್ನೂ ಬರೆಯಿರಿ ಬೆಳೆಯಿರಿ ನಮ್ಮ ಆಶೀರ್ವಾದವಿರುತ್ತದೆ' ಎಂದು ಮಹಿಳೆ ಹೇಳಿದ್ದಾರೆ. ಅನೇಕರಲ್ಲಿ ಸಿನಿಮಾ ದೊಡ್ಡ ಪರಿಣಾಮ ಬೀರಿದೆ. ಸಿನಿಮಾದಲ್ಲಿ ಅನುಪಮ್ ಖೇರ್, ಭಾಷಾ ಸುಂಬ್ಳಿ, ದರ್ಶನ್ ಕುಮಾರ್, ಚಿನ್ಮಯ್ ಮಾಂಡ್ಲೇಕರ್, ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ, ಪುನೀತ್ ಇಸ್ಸಾರ್, ಅತುಲ್ ಶ್ರೀವಾಸ್ತವ ಮತ್ತು ಮೃಣಾಲ್ ಕುಲಕರ್ಣಿ ನಟಿಸಿದ್ದಾರೆ.

Tap to resize

Latest Videos

ಸಿನಿಮಾದಲ್ಲಿ ಪ್ರತಿಯೊಬ್ಬ ಪಾತ್ರಧಾರಿಗೂ ಹೆಚ್ಚಿನ ಪ್ರಮುಖ್ಯತೆ ನೀಡಲಾಗಿದೆ. ಸಿನಿಮಾದ 2 ಗಂಟೆ 50 ನಿಮಿಷಗಳಿದೆ, ಸಮಯ ಹೆಚ್ಚಿದೆ ಅನಿಸಿದರೂ ಯಾವ ಬ್ರೇಕ್ ಇಲ್ಲದೆ ಸಿನಿಮಾ ನೋಡಬಹುದು. ಅನೇಕರು ಇಂಟರ್ವಲ್‌ ಯಾಕೆ ಬೇಕು? ಸಿನಿಮಾ ಸೂಪರ್ ಆಗಿದೆ ಬೇಗ ಶುರು ಮಾಡಿ ಎನ್ನುತ್ತಿದ್ದಾರೆ.  ವಲಸೆ ಕಾಶ್ಮೀರಿ ಪಂಡಿತರ ಜೀವನ ಹೇಗಿದೆ ಎಂಬುದನ್ನು ನಿರ್ದೇಶಕರು ಸಣ್ಣ ಸಣ್ಣ ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ.  ಸಿನಿಮಾ ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದು ಇಂಗ್ಲಿಷ್‌ ಸಬ್‌ಟೈಟಲ್‌ ಹೊಂದಿದೆ. 

Film Review ಹರೀಶ ವಯಸ್ಸು 36

32 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರು ಸಾಮೂಹಿಕವಾಗಿ ಕಾಶ್ಮೀರದಿಂದ ನಿರ್ಗಮಿಸಿದ್ದರು. ಜೆಎನ್‌ಯು ವಿದ್ಯಾರ್ಥಿ ದರ್ಶನ್ ಕುಮಾರ್ ಸುತ್ತ ಕಥೆ ನಡೆಯುತ್ತದೆ. ತನ್ನ ಬಾಲ್ಯದ ಬಗ್ಗೆ ಯಾವ ನೆನಪು ಕೂಡ ಇಲ್ಲದ ವಿದ್ಯಾರ್ಥಿ ದರ್ಶನ್. ಸ್ವತಃ ವಿಧು ವಿನೋದ್ ಚೋಪ್ರಾ ಅವರೇ ಕಾಶ್ಮೀರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಡಿಯೋದಲ್ಲಿ ಸಚಿನ್ ಕ್ರಿಕೆಟ್‌ ಬಗ್ಗೆ ಕಾಮೆಂಟ್ರಿ ಕೇಳುತ್ತಿರುವಾಗ ಅಲ್ಲಿದ್ದ ಮುಸ್ಲಿಂ ಹುಡುಗರು ಹಿಂದೂಗಳ ಮೇಲೆ ಹಲ್ಲೆ ಮಾಡುತ್ತಾರೆ. ಆತನಿಗೆ ಪಾಕಿಸ್ತಾನ ಜಿಂದಾಬಾದ್‌ ಎಂದು ಹೇಳುವುದಕ್ಕೆ ಒತ್ತಾಯ ಮಾಡುತ್ತಾರೆ. ಇದಾದ ನಂತರ ಕಾಶ್ಮೀರಿ ಮುಸ್ಲಿಂಮರು ಅಲ್ಲಿನ ಪಂಡಿತರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ ಅನೇಕರ ಮನೆಗೆ ಬೆಂಕಿ ಹಚ್ಚುತ್ತಾರೆ. ಕಾಶ್ಮೀರದಲ್ಲಿ ಇರಬೇಕು ಅಂದ್ರೆ ಮುಸ್ಲಿಂ ಆಗಿರಬೇಕು ಇಲ್ಲ ಸಾಯಬೇಕು ಎಂದು ಒತ್ತಾಯ ಮಾಡುತ್ತಾರೆ. 

Film review: ಡಿಯರ್‌ ಸತ್ಯ

ಸಿನಿಮಾ ನೋಡಿದ ಪ್ರತಿಯೊಬ್ಬರು ಕಣ್ಣೀರಿಟ್ಟಿದ್ದು ಈ ದೃಶ್ಯಕ್ಕೆ. ಭಯೋತ್ಪಾದಕರು ಅನುಪಮ್ ಖೇರ್ ನಿವಾಸಕ್ಕೆ ನುಗ್ಗುವ ಪ್ರಯತ್ನ ಮಾಡುತ್ತಾರೆ. ಮನೆಯಲ್ಲಿದ್ದ ಗಂಡಸರು ಅಕ್ಕಿ ಡ್ರಮ್‌ನಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಆದರೆ ಅಕ್ಕ ಪಕ್ಕ ಮನೆಯಲ್ಲಿ ವಾಸ ಮಾಡುತ್ತಿದ್ದ ಮುಸ್ಲಿಂಮರು ಅವರು ಎಲ್ಲಿದ್ದಾರೆ ಎಂದು ತೋರಿಸುತ್ತಾರೆ. ಇಡೀ ಅಕ್ಕಿ ಡ್ರಮ್‌ಗೆ ಬೆಂಕಿ ಹಾಕುತ್ತಾರೆ. ಆಗ ಅವರು ಅಲ್ಲೇ ಸಾಯುತ್ತಾರೆ. ಭಯೋತ್ಪಾದಕರು ಅಲ್ಲಿಗೆ ಸುಮ್ಮನಾಗುವುದಿಲ್ಲ ಪತಿ, ಮಾವ ಮತ್ತು ಮಗನ ರಕ್ತದಲ್ಲಿ ಬೆಂದಿರುವ ಅಕ್ಕಿಯನ್ನು ತಿನ್ನಲು ಒತ್ತಾಯಿಸುತ್ತಾರೆ. 24 ಕಾಶ್ಮೀರಿ ಪಂಡಿತರನ್ನು ಕೊಲ್ಲುವ 2003 ರ ನಾಡಿಮಾರ್ಗ್ ಹತ್ಯಾಕಾಂಡದ ದೃಶ್ಯವನ್ನು ಮರುಸೃಷ್ಟಿಸುವ ಚಲನಚಿತ್ರ ನಿರ್ಮಾಪಕರು, ನಿಮ್ಮನ್ನು ದುಃಖಿಸುತ್ತಾ ಮತ್ತು ಭಾರವಾದ ಹೃದಯದಿಂದ ಚಿತ್ರಮಂದಿರದಿಂದ ಹೊರ ಬರುವಂತೆ ಮಾಡುತ್ತಾರೆ.

click me!