Film review: ಡಿಯರ್‌ ಸತ್ಯ

Kannadaprabha News   | Asianet News
Published : Mar 11, 2022, 09:03 AM IST
Film review: ಡಿಯರ್‌ ಸತ್ಯ

ಸಾರಾಂಶ

ಆರ್ಯನ್ ಸಂತೋಷ್ ಮತ್ತು ಅರ್ಚನಾ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಡಿಯರ್ ಸತ್ಯ ಸಿನಿಮಾ ಹೇಗಿದೆ? ನಿಮಗೆ ಸತ್ಯ ಇಷ್ಟ ಆಯ್ತಾ ಅಥವಾ ಡಿಯರ್ ಇಷ್ಟ ಆಯ್ತಾ?

ನಿತ್ತಿಲೆ

‘ಸಿನಿಮಾ ಮಾಡಲು ಆ ಬಗ್ಗೆ ಪ್ರೀತಿ ಇದ್ದರೆ ಸಾಕು, ಪದೇ ಪದೇ ಕಷ್ಟಪಡ್ತಿದ್ದೀನಿ ಅಂತ ಅನಿಸಿದರೆ ರಿಸ್ಕ್‌ ತಗೊಳ್ಬೇಡಿ’.

ಕ್ರೈಮ್‌ ಥ್ರಿಲ್ಲರ್‌ ಚಿತ್ರ ನಿರ್ದೇಶಕ ಕ್ವೆಂಟಿನ್‌ ಟ್ಯಾರಂಟಿನೋ ಮಾತಿದು. ‘ಡಿಯರ್‌ ಸತ್ಯ’ ಚಿತ್ರ ನೋಡುವಾಗ ಈ ಮಾತು ನೆನಪಿಗೆ ಬಂತು. ಈ ಚಿತ್ರದಲ್ಲಿ ತಂಡದ ಶ್ರಮ ಕಾಣುತ್ತದೆ. ಆದರೆ ಅದರ ಪರಿಣಾಮ ಕಾಣೋದಿಲ್ಲ. ರಿವರ್ಸ್‌ ಸ್ಕ್ರೀನ್‌ ಪ್ಲೇಯಲ್ಲಿ, ಎರಡೆರಡು ಕ್ಲೈಮ್ಯಾಕ್ಸ್‌ ಇಟ್ಟುಕೊಂಡು ಮಾಡಿರುವ ಚಿತ್ರವಿದು. ತಾಂತ್ರಿಕವಾಗಿ ಅಂಥ ಕೊರತೆಗಳು ಕಾಣೋದಿಲ್ಲ. ಆದರೆ ಜೀವ ತುಂಬಿಸೋದರಲ್ಲಿ ಎಡವಿದ್ದೇ ಮುಖ್ಯ ಕಂಟಕ.

ತಾರಾಗಣ : ಆರ್ಯನ್‌ ಸಂತೋಷ್‌, ಅರ್ಚನಾ ಕೊಟ್ಟಿಗೆ

ನಿರ್ದೇಶನ : ಶಿವ ಗಣೇಶ್‌

ರೇಟಿಂಗ್‌: 3

ಚಿತ್ರದ ನಾಯಕ ಸತ್ಯ ಹಂಗ್ರೀ ಆ್ಯಪ್‌ನ ಫುಡ್‌ ಡೆಲಿವರಿ ಬಾಯ್‌. ಒಂದು ಕಡೆ ಅವನ ಜೈಲ್‌ ಎಪಿಸೋಡು, ದಟ್ಟನೋವಿನ ಅಧ್ಯಾಯ, ಇನ್ನೊಂದು ಕಡೆ ಫ್ಲಾಶ್‌ಬ್ಯಾಕ್‌ ಕತೆ ಎರಡೂ ಸಮಾನಾಂತರದಲ್ಲಿ ಚಲಿಸುತ್ತದೆ. ತನ್ನ ಗೆಳತಿಯ ಸಾವಿನ ಕೇಸ್‌ನ ಆರೋಪಿಯಾಗಿದ್ದುಕೊಂಡೇ, ನಿಜ ಆರೋಪಿಗಳ ಬೇಟೆಯಾಡುವ ರಿವೆಂಜ್‌ ಸ್ಟೋರಿ ಚಿತ್ರದ ಒನ್‌ಲೈನ್‌. ಫುಡ್‌ ಡೆಲಿವರಿ ಬಾಯ್‌್ಸ ಜೀವನ, ಅಂಜಲಿ ಎಂಬ ಹುಡುಗಿ ಜೊತೆಗಿನ ಸತ್ಯನ ಪ್ರೀತಿ, ಅಮ್ಮನ ಮಮಕಾರ ಇತ್ಯಾದಿಗಳು ಇದಕ್ಕೆ ಪೂರಕವಾಗಿ ಬರುತ್ತವೆ. ಕೊನೆಯ ಹಂತದಲ್ಲಿ ನಾಯಕನ ಸೇಡನ್ನೂ ಮೀರಿ ಕತೆ ವಿಸ್ತರಿಸುತ್ತದೆ.

ಡೆಲಿವರಿ ಬಾಯ್ಸ್‌ಗೆ ಫಸ್ಟ್‌ ಡೇ ಫಸ್ಟ್‌ ಶೋ ಫ್ರೀ 'Dear Sathya' ನಟ ಆರ್ಯನ್ ಸಂತೋಷ್‌ ಜೊತೆ ಚಿಟ್ ಟಾಟ್

ವಿನೋದ್‌ ಭಾರತಿ ಸಿನಿಮಾಟೋಗ್ರಫಿ ಚೆನ್ನಾಗಿದೆ. ಅರ್ಚನಾ ಕೊಟ್ಟಿಗೆ ಕ್ಯೂಟ್‌ ನಗೆಯ ಜೊತೆಗೆ ಉತ್ತಮ ಅಭಿನಯ ನೀಡಿದ್ದಾರೆ. ಸಂತೋಷ್‌ ಆರ್ಯನ್‌ ನಟನೆಯಲ್ಲಿ ಅವರ ಶ್ರಮ ಕಾಣುತ್ತದೆ, ಸಹಜತೆ ಬೇಕಿತ್ತು ಅನಿಸುತ್ತದೆ. ಅರುಣಾ ಬಾಲರಾಜ್‌ ಹಾಗೂ ಇತರೆ ಪೋಷಕ ನಟರ ಅಭಿನಯ ಚೆನ್ನಾಗಿದೆ. ಸಂಗೀತ ಅಂಥಾ ಪರಿಣಾಮ ಬೀರೋದಿಲ್ಲ. ಕ್ರೈಮ್‌ ಥ್ರಿಲ್ಲರ್‌ನಲ್ಲಿ ಪ್ರಯೋಗವೊಂದನ್ನು ಮಾಡಲು ಚಿತ್ರತಂಡ ಶ್ರಮಿಸಿದೆ. ಪರಿಣಾಮದ ಬಗ್ಗೆ ಹೆಚ್ಚು ಚಿಂತಿಸದೇ ಪ್ರಯೋಗದ ದೃಷ್ಟಿಯಿಂದ ಚಿತ್ರ ನೋಡಬಹುದು.

ಎಕ್ಸೈಟ್ ಆ್ಯಂಡ್ ನರ್ವಸ್ ಆಗಿದ್ದೀನಿ, ನಾನು ಡೈರೆಕ್ಟರ್ಸ್ ನಟಿ: Dear Sathya ನಟಿ ಅರ್ಚನಾ

'ಚಿತ್ರದ ಫಸ್ಟ್‌ ಲುಕ್ ರಿಲೀಸ್ ಮಾಡಿದಾಗ ನನಗೆ Goosebump ಬಂದಿತ್ತು, ಜನರು ನನ್ನ ಒಪ್ಪಿಕೊಳ್ಳುತ್ತಾರಾ ಇದು ಮಾಸ್ ಕ್ಯಾರೆಕ್ಟರ್ ಎನ್ನುವ ಗೊಂದಲ ಇತ್ತು. ಶಿವಣ್ಣ ಲಾಂಚ್ ಮಾಡಿಕೊಟ್ಟಿದ್ದು, ಅಲ್ಲಿಂದ ಎನರ್ಜಿ ಹೆಚ್ಚಿತ್ತು. ಸತ್ಯ ಅಂತ ಟೈಟಲ್ ಇಟ್ಟಾಗಲೇ ಶಿವಣ್ಣ ಅವರೇ ಲಾಂಚ್ ಮಾಡಬೇಕು ಅಂತಿತ್ತು. ಏಕೆಂದರೆ ನಾವೆಲ್ಲಾ ಓಂ ನೋಡ್ಕೊಂಡು, ಸಿನಿಮಾದಲ್ಲಿ ನಟಿಸುವ ಕನಸು ಕಂಡಿರುವವರು. ನಾವು ರಿಲೀಸ್ ಮಾಡಿರುವ ಚಿತ್ರದ ಸಣ್ಣ ತುಣುಕಿಗೆ ಜನರ ರೆಸ್ಪಾನ್ಸ್ ಅದ್ಭುತವಾಗಿದೆ.' ನಾಯಕನ ಮಾತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ