Film Review ಹರೀಶ ವಯಸ್ಸು 36

Kannadaprabha News   | Asianet News
Published : Mar 12, 2022, 09:25 AM IST
Film Review ಹರೀಶ ವಯಸ್ಸು 36

ಸಾರಾಂಶ

ನಮ್ಮ ಸಂಕಟ, ವ್ಯಥೆ, ನೋವುಗಳನ್ನು ನಾವೇ ವ್ಯಂಗ್ಯ ಮಾಡಿಕೊಂಡರೆ ಉಳಿದವರಿಗೆ ಸಿಕ್ಕಾಪಟ್ಟೆಕನೆಕ್ಟ್ ಆಗಿ ಅವರಿಗೊಂದು ಫನ್ನಿ ಮರಂಜನೆ ಕೊಡುತ್ತದೆ ಎಂಬುದನ್ನು ಜಗತ್ತಿಗೆ ಸಾರಿದವರು ಲೆಜೆಂಡ್‌ ಚಾರ್ಲಿ ಚಾಪ್ಲಿನ್‌. 

ಆರ್‌. ಕೇಶವಮೂರ್ತಿ

ತಮ್ಮನ್ನು ತಾವು ಜೋಕರ್‌ಗಳನ್ನಾಗಿಸಿಕೊಳ್ಳುವ ಸಾಕಷ್ಟುಸಿನಿಮಾಗಳು ತೆರೆ ಮೇಲೆ ಮೂಡಿವೆ. ಅಥವಾ ತಮ್ಮ ಕಷ್ಟಗಳು ಇನ್ನೊಬ್ಬರಿಗೆ ಮನರಂಜನೆ ನೀಡುವ ನಿಟ್ಟಿನಲ್ಲಿ ಹತ್ತಾರು ಚಿತ್ರಗಳು ಕನ್ನಡದಲ್ಲೂ ಬಂದಿವೆ. ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಇದಕ್ಕೊಂದು ಉದಾಹರಣೆ. ಈಗ ಇದೇ ಫ್ಲೇವರ್‌ನಲ್ಲಿ ಮೂಡಿ ಬಂದಿರುವ ಸಿನಿಮಾ ‘ಹರೀಶ ವಯಸ್ಸು 36’. ಚಿತ್ರದ ಕತೆ ಏನು ಎನ್ನುವ ಕುತೂಹಲಕ್ಕೆ ಚಿತ್ರದ ಹೆಸರಿನಲ್ಲೇ ಉತ್ತರ ಇದೆ.

ಪಕ್ಕಾ ಮಂಗಳೂರಿನ ಭಾಷೆಯಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ನೋಡುವಾಗ ಏಕಕಾಲದಲ್ಲಿ ತುಳು ನಾಟಕ ಮತ್ತು ಸಿನಿಮಾ, ಮಲಯಾಳಂ ಸಿನಿಮಾಗಳನ್ನು ನೋಡಿದಂತಹ ಅನುಭವ ಆಗುತ್ತದೆ. ಒಬ್ಬನ ಸಂಕಷ್ಟ, ಊರಿನವರ ಚುಚ್ಚು ಮಾತುಗಳು, ದುಡಿಮೆ ಇಲ್ಲದ ಜೀವನ, ಅಕ್ಕಪಕ್ಕದವರ ಕರುಣೆ, ಪ್ರೀತಿ... ಈ ಎಲ್ಲವನ್ನೂ ಒಟ್ಟಿಗೆ ಹದವಾಗಿ ಬೆರೆಸಿ ನಿರ್ದೇಶಕ ಗುರುರಾಜ್‌ ಅವರು ಹರೀಶನ ವಯಸ್ಸಿನ ಕತೆ ಹೇಳಿದ್ದಾರೆ. ಮನರಂಜನೆ ಮಾತ್ರ ಬಯಸುವವರಿಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ. ಜತೆಗೆ ಇಲ್ಲೊಂದು ಭಾವುಕತೆಯ ನೆರಳು ಕೂಡ ಇದೆ. ಅದನ್ನು ತೆರೆ ಮೇಲೆಯೇ ನೋಡಿದರೆ ಉತ್ತಮ.

Film Review: ಅಘೋರ

ತಾರಾಗಣ: ಯೋಗೀಶ್‌ ಶೆಟ್ಟಿ, ಶ್ವೇತಾ ಅರೆಹೊಳೆ, ಪ್ರಕಾಶ್‌ ತುಮಿನಾಡು, ಎಂ ಎಸ್‌ ಉಮೇಶ್‌

ನಿರ್ದೇಶನ: ಗುರುರಾಜ್‌

ರೇಟಿಂಗ್‌ : 3

ಮದುವೆ ವಯಸ್ಸು ದಾಟುತ್ತಿರುವ ಹುಡುಗನಿಗೆ ತಾಯಿ ಇಲ್ಲ. ತಂದೆಯೇ ಎಲ್ಲ. ಆತ ಕೂಡ ಬಡ ಕನ್ನಡ ಶಿಕ್ಷಕ. ತನ್ನ ಮಗನಿಗೆ ಮದುವೆ ಮಾಡಬೇಕು ಎಂಬುದು ತಂದೆಯ ಕನಸು. ಆತನಿಗೆ ವಯಸ್ಸು 40ರ ಗಡಿ ಮುಟ್ಟುವ ಮುನ್ನ ಹುಡುಗಿ ಸಿಕ್ತಾಳೆಯೇ ಎನ್ನುವ ವ್ಯಥೆ. ಈತನಿಗಾಗಿ ಬ್ರೋಕರ್‌ ಒಬ್ಬರು ಹುಡುಗಿಯನ್ನು ಹುಡುಕಿ ಹುಡುಕಿ ಸಾಕಾಗುತ್ತದೆ. ಎಲ್ಲೇ ಹೋದರೂ ವಯಸ್ಸು, ಉದ್ಯೋಗ, ಲುಕ್‌ ಕಾರಣಕ್ಕೆ ರಿಜೆಕ್ಟ್ ಆಗುತ್ತಲೇ ಹೋಗುವ ಹರೀಶನನ್ನು ಕೈ ಹಿಡಿಯುವ ಹುಡುಗಿ ಸಿಗುತ್ತಾಳೆಯೇ ಎಂಬುದು ಚಿತ್ರದ ಕತೆ. ಇದರ ಜತೆಗೆ ತಂದೆ ತೀರಿಕೊಳ್ಳುವ ಕಣ್ಣೀರ ಕತೆ, ಪ್ರಕಾಶ್‌ ತುಮಿನಾಡು ಅವರ ತಮಾಷೆ ಸರಳವಾಗಿ ಸಾಗುತ್ತಿರುವ ಚಿತ್ರಕ್ಕೆ ಹೊಸ ರೆಕ್ಕೆಪುಕ್ಕ ನೀಡುತ್ತದೆ.

Film review: ಡಿಯರ್‌ ಸತ್ಯ

ಅದ್ಭುತ ಸಂಗೀತ, ಸೌಂದರ್ಯವಂತ ನಾಯಕ, ನಾಯಕಿ ಹಾಗೂ ಅದ್ದೂರಿ ಮೇಕಿಂಗ್‌ ಇದ್ಯಾವುದನ್ನು ನಿರೀಕ್ಷೆ ಮಾಡದೆ ನೈಜತೆಗೆ ಹತ್ತಿರ ಇರುವ ಕತೆ ಬೇಕು, ಮಂಗಳೂರಿನ ಹಾಸ್ಯದ ಧಾಟಿಯಲ್ಲಿ ಇಡೀ ಸಿನಿಮಾ ನೋಡಬೇಕು ಎಂದುಕೊಳ್ಳುವವರಿಗೆ ‘ಹರೀಶ ವಯಸ್ಸು 36’ ಚಿತ್ರದ ಹೇಳಿ ಮಾಡಿಸಿದಂತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ