ವಿಜಯ್ ರಾಘವೇಂದ್ರ, ಸೋನು ಗೌಡ, ಗೋಪಾಲಕೃಷ್ಣ ದೇಪಾಂಡೆ ನಟನೆ ಮರೀಚಿ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಹೇಗಿದೆ....
ಆರ್ ಕೇಶವಮೂರ್ತಿ
ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟರಿ, ಪೊಲೀಸು, ತನಿಖೆಯ ತಿರುಗಳಿದ್ದರೆ ವಿಜಯ್ ರಾಘವೇಂದ್ರ ಅವರ ಚಿತ್ರಗಳು ನೋಡಗರ ಗಮನ ಸೆಳೆತ್ತವೆ ಎನ್ನುವ ನಂಬಿಕೆ ಹುಟ್ಟಿಸಿದ್ದು ಅವರದ್ದೇ ನಟನೆಯ ‘ಸೀತಾರಾಮ್ ಬಿನೋಯ್’. ಅದೇ ಜಾಡಿನಲ್ಲಿ ಬಂದಿರುವ ಮತ್ತೊಂದು ಸಿನಿಮಾ ‘ಮರೀಚಿ’. ಇಲ್ಲಿ ಮೂರು ಕೊಲೆಗಳು ನಡೆದಿವೆ. ನಿಗೂಢವಾಗಿ ಸಂಭವಿಸಿರುವ ಈ ಸಾವುಗಳ ಹಿಂದೆ ಮತ್ತು ಮುಂದೆ ನಡೆದ ಘಟನಾವಳಿಗಳನ್ನು ಹಿಡಿದು ಸಿನಿಮಾ ಸಾಗುತ್ತದೆ. ಪ್ರೇಕ್ಷಕ ಕೂಡ ನಿರ್ದೇಶಕನ ಕೈ ಹಿಡಿದು ಸಾಗುತ್ತಾನೆ.
ತಾರಾಗಣ: ವಿಜಯ್ ರಾಘವೇಂದ್ರ, ಸೋನು ಗೌಡ, ಗೋಪಾಲಕೃಷ್ಣ ದೇಪಾಂಡೆ, ಅರುಣಾ ಬಾಲರಾಜ್, ಅಭಿ ದಾಸ್, ಸ್ಪಂದನಾ ಸೋಮಣ್ಣ, ಆರ್ಯನ್ ಎಸ್ ಜಿ
KAIVA REVIEW: ಪ್ರೇಮದಲ್ಲಿ ತಾಕಬಲ್ಲ, ದ್ವೇಷದಲ್ಲಿ ಕದಡಬಲ್ಲ ಕೈವ
ನಿರ್ದೇಶನ: ಸಿದ್ಧ್ರುವ್
ರೇಟಿಂಗ್: 3
ಮೂಲವರು ವೈದ್ಯರು ಸತ್ತಿದ್ದು ಯಾಕೆ, ನಾಯಕನ ಪತ್ನಿಯ ಸಾವಿಗೂ ಈ ಸರಣಿ ಕೊಲೆಗಳಿಗೂ ಇರುವ ನಂಟು ಏನೆಂಬ ಕುತೂಹಲ ಪ್ರೇಕ್ಷಕನನ್ನು ಕೊನೆಯವರೆಗೂ ಸಿನಿಮಾ ನೋಡುವಂತೆ ಮಾಡುತ್ತದೆ. ಇದಕ್ಕೆ ಹಳ್ಳಿಯ ಫ್ಲ್ಯಾಷ್ ಬ್ಯಾಕ್, ಭೂತ- ದೆವ್ವ, ಸಿಹಿ ಪದಾರ್ಥ ತಿಂದರೆ ಮತ್ತೇರುವುದು, ಹಳ್ಳಿಯ ಜನರ ದೇಹಕ್ಕೆ ಸೇರುತ್ತಿರುವ ಆಲ್ಕೋಹಾಲ್... ಇತ್ಯಾದಿ ಅಂಶಗಳ ಸುತ್ತ ಭೈರವ್ ನಾಯಕ್ ಪಾತ್ರಧಾರಿ ನಾಯಕ ಹೇಗೆ ಪತ್ತೆ ಹಚ್ಚುತ್ತಾನೆ ಎಂಬುದನ್ನು ನಿರ್ದೇಶಕರು ಸಾಧ್ಯವಾದಷ್ಟು ಸಾವಧಾನದಿಂದ ಹೇಳಿದ್ದಾರೆ.
ತಾಳ್ಮೆಯ ಪ್ರೇಕ್ಷಕನಿಗೆ ಥ್ರಿಲ್ಲಿಂಗ್ ಅನುಭವ ಕೊಡುವುದರಲ್ಲಿ ‘ಮರೀಚಿ’ ಚಿತ್ರ ಹಿಂದೆ ಸರಿಯಲ್ಲ. ಜ್ಯೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ, ಮನೋಹರ್ ಜೋಶಿ ಕ್ಯಾಮೆರಾ ಚಿತ್ರಕಥೆಗೆ ಪೂರಕವಾಗಿ ಕೆಲಸ ಮಾಡಿದೆ. ಗೋಪಾಲಕೃಷ್ಣ ದೇಪಾಂಡೆ, ಭೈರವ್ ನಾಯಕ್ ಪಾತ್ರದಲ್ಲಿ ವಿಜಯ್ ರಾಘವೇಂದ್ರ, ರಿಕ್ಕಿ ಪಾತ್ರಧಾರಿ ಚಿತ್ರದ ಮುಖ್ಯ ಪಿಲ್ಲರ್‌ಗಳಾಗಿ ಗಮನ ಸೆಳೆಯುತ್ತಾರೆ.