Politics Kalyana: ರಾಜಕೀಯ ಕಲ್ಯಾಣ ಗುಣಗಳ ವಿಭಿನ್ನ ಕಥನ

By Kannadaprabha News  |  First Published Dec 9, 2023, 12:14 PM IST

ಪಂಕಜ್ ಎಸ್ ನಾರಾಯಣ್‌, ವಿ ಮನೋಹರ್‌, ಶಂಕರ್‌ ಅಶ್ವಥ್‌, ಗಿರಿಜಾ ಲೋಕೇಶ್‌ ನಟಿಸಿರುವ ಪಾಲಿಟಿಕ್ಸ್‌ ಕಲ್ಯಾಣ ಸಿನಿಮಾ ರಿಲೀಸ್...ಹೇಗಿದೆ ಚಿತ್ರ?


ಆರ್.ಕೆ.

ಮದುವೆ ನೆಪದಲ್ಲಿ ಒಂದು ಕಲ್ಯಾಣ ಮಂಟಪದಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯವರು ಒಟ್ಟಿಗೆ ಮಾತನಾಡಿಕೊಳ್ಳುವುದನ್ನು ಚಿತ್ರೀಕರಣ ಮಾಡಿಕೊಂಡು, ಅದಕ್ಕೆ ಸಂಕಲನ, ಹಿನ್ನೆಲೆ, ಮುನ್ನೆಲೆ ಸಂಗೀತ ಸಂಯೋಜಿಸಿ, ಜತೆಗೆ ಎರಡು ಹಾಡುಗಳನ್ನು ಇಟ್ಟರೆ ಯಾವ ರೀತಿ ಸಿನಿಮಾ ಮೂಡುತ್ತದೆ ಎಂಬುದಕ್ಕೆ ‘ಪಾಲಿಟಿಕ್ಸ್ ಕಲ್ಯಾಣ’ ಅತ್ಯುತ್ತಮ ಉದಾಹರಣೆ.

Tap to resize

Latest Videos

ತಾರಾಗಣ: ಪಂಕಜ್ ಎಸ್ ನಾರಾಯಣ್‌, ವಿ ಮನೋಹರ್‌, ಶಂಕರ್‌ ಅಶ್ವಥ್‌, ಗಿರಿಜಾ ಲೋಕೇಶ್‌, ಸುನೇತ್ರ ಪಂಡಿತ್‌, ಮಿಮಿಕ್ರಿ ಗೋಪಿ, ನಾಗೇಂದ್ರ ಶಾ, ಪಾಪ ಪಾಂಡು ಚಿನಾಂದ್‌, ತನುಜಾ, ಸಸ್ಯ

ATHI I LOVE YOU REVIEW: ಉತ್ತಮ ಸಂಸಾರದ ಹತ್ತು ಸೂತ್ರಗಳು

ನಿರ್ದೇಶನ: ಕವಿ ರಾಜೇಶ್

ಇದು ನಾಯಕ, ನಾಯಕಿ ಹಾಗೂ ಅದ್ದೂರಿ ಮೇಕಿಂಗ್‌ ಸಿನಿಮಾ ಅಲ್ಲ. ಇಬ್ಬರು ವಿರೋಧಿ ರಾಜಕೀಯ ನಾಯಕರು. ಮದುವೆ ಮೂಲಕ ಸಂಬಂಧ ಬೆಳೆಸಿಕೊಳ್ಳುವ ತಯಾರಿ. ತಮ್ಮ ಹೆತ್ತವರು ಮದುವೆಯನ್ನು ರಾಜಕೀಯಗೊಳಿಸಿದ್ದಾರೆಂದು ತಿಳಿದು ಮದುವೆ ಮಂಟಪದಿಂದ ಓಡಿ ಹೋಗುವ ಹುಡುಗ- ಹುಡುಗಿ. ಮಕ್ಕಳ ಈ ನಡೆಯಿಂದ ಇಬ್ಬರು ರಾಜಕೀಯ ವಿರೋಧಿಗಳು ಒಂದಾಗುತ್ತಾರೆಯೇ ಎಂಬುದು ಚಿತ್ರದ ಕತೆ.

Ardhambardha Premakathe Review: ಪಯಣದಲ್ಲಿ ಅರಳಿದ ಅರೆಬರೆ ಪ್ರೇಮ

ರಾಜಕೀಯ ವಿಡಂಬನೆ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಪೋಷಕ ಕಲಾವಿದರ ದೊಡ್ಡ ದಂಡೇ ಇದೆ ಎಂಬುದಷ್ಟೇ ಈ ಚಿತ್ರದ ಪ್ಲಸ್‌ ಪಾಯಿಂಟ್‌.

click me!