Kaiva Review: ಪ್ರೇಮದಲ್ಲಿ ತಾಕಬಲ್ಲ, ದ್ವೇಷದಲ್ಲಿ ಕದಡಬಲ್ಲ ಕೈವ

By Kannadaprabha News  |  First Published Dec 9, 2023, 12:26 PM IST

ಧನ್‌ವೀರ್‌, ಮೇಘಾ ಶೆಟ್ಟಿ, ರಮೇಶ್‌ ಇಂದಿರಾ ನಟಿಸಿರುವ ಕೈವ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?


ರಾಜೇಶ್ ಶೆಟ್ಟಿ

ದ್ರೌಪದಿ ದೇವಿಯ ಗುಡಿಯ ಆವರಣದಲ್ಲಿ ಹುಟ್ಟುವ ನವಿರು ಪ್ರೇಮಕತೆ ಮತ್ತು ತಿಗಳರ ಪೇಟೆಯ ಶ್ರಮ ಜೀವನದ ಹಿಂದೆ ಅಡಗಿದ್ದ ಭೂಗತಲೋಕದ ದ್ವೇಷದ ಕಥನ ಇವೆರಡನ್ನೂ ಮಿಳಿತಗೊಳಿಸಿ ರಚಿಸಿದ ಕಥನ ಇದು.

Tap to resize

Latest Videos

ಇಲ್ಲಿ 80ರ ದಶಕದ ಬೆಂಗಳೂರಿನ ಕತೆ ಸಿಗುತ್ತದೆ. ಕರಗದ ಇತಿಹಾಸ ದೊರೆಯುತ್ತದೆ. ಅದರ ಮಧ್ಯೆಯೇ ತಿಗಳರ ಪೇಟೆಯ ಗಲ್ಲಿಯಲ್ಲಿನ ರಂಗವಲ್ಲಿಯ ಸೊಗಸು ಕಾಣುತ್ತದೆ. ಇತಿಹಾಸದ ಮೂಲಕವೇ ಕತೆ ಶುರುಮಾಡುವ ನಿರ್ದೇಶಕರು ಆ ಕಾಲಘಟ್ಟವನ್ನು ವಿವರಿಸುತ್ತಾರೆ. ಅಲ್ಲಿನ ಪಾತ್ರಗಳ ಪರಿಚಯ ಮಾಡುತ್ತಾರೆ. ಜೊತೆಗೆ ಪ್ರೇಮ ಕತೆ ಶುರು ಮಾಡುತ್ತಾರೆ. ಯಾವುದೋ ತಿರುವಲ್ಲಿ ಸಂಕಟವೊಂದು ಎದುರಾಗಿ ಕತೆಯ ರಮ್ಯತೆ ಬದಲಾಗುತ್ತದೆ. ಅಲ್ಲಿಂದ ಕತೆ ಬೇರೆ ಹಾದಿ ಹಿಡಿಯುತ್ತದೆ.

Athi I Love You Review: ಉತ್ತಮ ಸಂಸಾರದ ಹತ್ತು ಸೂತ್ರಗಳು

ನಿರ್ದೇಶನ: ಜಯತೀರ್ಥ

ತಾರಾಗಣ: ಧನ್‌ವೀರ್‌, ಮೇಘಾ ಶೆಟ್ಟಿ, ರಮೇಶ್‌ ಇಂದಿರಾ, ನಂದ, ಉಗ್ರಂ ಮಂಜು, ರಾಘು ಶಿವಮೊಗ್ಗ

ರೇಟಿಂಗ್: 3

ನಿರ್ದೇಶಕರು ಭಕ್ತ ಪ್ರಹ್ಲಾದ ಸಿನಿಮಾ ಬಿಡುಗಡೆ, ಗಂಗಾರಾಮ್ ಕಟ್ಟಡ ದುರಂತ ಎಲ್ಲವನ್ನೂ ಜಾಣ್ಮೆಯಿಂದ ಚಿತ್ರಕತೆಯಲ್ಲಿ ತಂದಿದ್ದಾರೆ. ನೈಜ ಘಟನೆಗೆ ನ್ಯಾಯ ಸಲ್ಲಿಸುವ ರೀತಿಯಲ್ಲಿಯೇ ಚಿತ್ರಕತೆ ಹೆಣೆದಿದ್ದಾರೆ. ಈ ನಿಟ್ಟಿನಲ್ಲಿ ಸಾಗುವಾಗ ಕೊಂಚ ಗಮನ ಅತ್ತಿತ್ತ ಹೋಗುತ್ತದೆ. ಅದರ ಹೊರತಾಗಿ ಇದೊಂದು ಪ್ರೇಮ ಕೈಹಿಡಿದು ನಡೆಸುವ, ದ್ವೇಷ ರೋಚಕತೆ ಹೆಚ್ಚಿಸುವ ಬೆರಗುವ ಹುಟ್ಟಿಸುವ ಕಥನ.

POLITICS KALYANA: ರಾಜಕೀಯ ಕಲ್ಯಾಣ ಗುಣಗಳ ವಿಭಿನ್ನ ಕಥನ

ಕನಸು ಕಂಗಳ ತರುಣನಾಗಿ, ತನ್ಮಯ ಪ್ರೇಮಿಯಾಗಿ, ಸಿಟ್ಟು ಉಕ್ಕುವ ಕೋಪಿಷ್ಠನಾಗಿ ಧನ್‌ವೀರ್‌ ಈ ಸಿನಿಮಾದಲ್ಲಿ ಆವರಿಸಿದ್ದಾರೆ. ಒಂದು ಘೋರ ಯುದ್ಧದ ಬಳಿಕ ಆರ್ತನಾಗಿ ಹೆಣ್ಣೊಬ್ಬಳ ಬಳಿ ಕ್ಷಮೆಯಾಚಿಸುವ ದೃಶ್ಯದಲ್ಲಿ ಧನ್‌ವೀರ್‌ ನಟನೆ ಮನದಲ್ಲಿ ಉಳಿಯುವಂತಿದೆ. ಮೇಘಾ ಶೆಟ್ಟಿ, ರಮೇಶ್ ಇಂದಿರಾ, ಉಗ್ರಂ ಮಂಜು, ರಾಘು ಶಿವಮೊಗ್ಗ, ನಂದ ಎಲ್ಲರೂ ಅವರವರ ನಟನೆಯ ಘನತೆ ಹೆಚ್ಚುವಂತೆ ಅಭಿನಯಿಸಿದ್ದಾರೆ.

ಇಟ್ಟಾದಿ ಇದು ಪ್ರೇಮದಲ್ಲಿ ತಾಕಬಲ್ಲ, ದ್ವೇಷದಲ್ಲಿ ಕದಡಬಲ್ಲ, ಇತಿಹಾಸವಾಗಿ ಸೆಳೆಯಬಲ್ಲ, ದೂರ ದಾರಿಯಾಗಿ ಕಾಡಬಲ್ಲ ಸಿನಿಮಾ.

click me!