O Manase: ಕಾಲೇಜು, ಪ್ರೇಮದ ಮಧ್ಯೆ ಕೊಲೆಗಿಲೆ ಇತ್ಯಾದಿ

By Kannadaprabha News  |  First Published Jul 15, 2023, 9:57 AM IST

ವಿಜಯ್ ರಾಘವೇಂದ್ರ, ಧರ್ಮಕೀರ್ತಿ ರಾಜ್‌, ಸಂಚಿತಾ ಪಡುಕೋಣೆ, ಹರೀಶ್‌ ರೈ, ಸಾಧಕೋಕಿಲಾ, ಶೋಭರಾಜ್‌ ನಟಿಸಿರುವ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ? 


ಆರ್ ಕೇಶವಮೂರ್ತಿ

ಅದು ಮಡಿಕೇರಿಯ ಸುಂದರ ಪರಿಸರ. ಒಬ್ಬ ಪೊಲೀಸ್ ಅಧಿಕಾರಿ, ಮತ್ತೊಬ್ಬ ಕಾಲೇಜು ಓದುವ ಯುವಕ, ಹೆಣ್ಣು ಮಕ್ಕಳಿಗೆ ಮಾತ್ರ ಬಡ್ಡಿಗೆ ಹಣ ಕೊಡುವಾತ, ವಸೂಲಿ ಹೆಡ್‌ ಕಾನ್ಸ್‌ಟೇಬಲ್‌ ಪಾತ್ರಗಳ ಮೂಲಕ ಒಂದು ಸಾವಿನ ಥ್ರಿಲ್ಲರ್ ಕತೆಯನ್ನು ಹೇಳುವ ಸಾಹಸ ಮಾಡಿದ್ದಾರೆ ನಿರ್ದೇಶಕ ಉಮೇಶ್ ಗೌಡ. ಮೊದಲ ಭಾಗ ಪ್ರೀತಿ- ಪ್ರೇಮಕ್ಕೆ ಹೆಚ್ಚು ಒತ್ತು ಕೊಟ್ಟರೆ, ವಿರಾಮದ ನಂತರ ಪ್ರೀತಿಯ ಕಾರಣಕ್ಕೆ ಸಾವು ಕಾಣುವ ನಾಯಕಿ ಸುತ್ತ ಕತೆ ಸಾಗುತ್ತದೆ. ಇಷ್ಟಕ್ಕೂ ನಾಯಕಿ ಸಾಯುವುದು ಯಾಕೆ, ಪ್ರೀತಿಸಿದವನೇ ಆಕೆಯನ್ನು ಕೊಲ್ಲುವುದೇಕೆ ಎಂಬುದೇ ಚಿತ್ರದ ಕೊನೆಯ ತಿರುವು. ಈ ತಿರುವಿನ ರಹಸ್ಯ ತಿಳಿಯಬೇಕು ಎಂದರೆ ನೀವು ‘ಓ ಮನಸೇ’ ಸಿನಿಮಾ ನೋಡಬೇಕು. 

Tap to resize

Latest Videos

undefined

ಪ್ರೀತಿ, ಕ್ರೈಮ್ ಹಾಗೂ ಕಾಲೇಜು ಓದು... ಇವಿಷ್ಟು ತಿರುವುಗಳಲ್ಲಿ ಇಡೀ ಸಿನಿಮಾ ಸಂಚರಿಸುತ್ತದೆ. ತಪ್ಪು ಮಾಡಿದ ರಾಜಕಾರಣಿ ಮಗನನ್ನು ಬಂಧಿಸಿದ್ದರಿಂದ ವರ್ಗಾವಣೆ ಶಿಕ್ಷಗೆ ಗುರಿಯಾಗುವ ಚಿತ್ರದ ನಾಯಕ, ಬೆಂಗಳೂರಿನಿಂದ ಮಡಿಕೇರಿಗೆ ಹೊರಡುವ ಮೂಲಕ ಕತೆ ಶುರುವಾಗುತ್ತದೆ. ಪೊಲೀಸ್ ಠಾಣೆಗೆ ದೂರು ನೀಡಲು ಬರುವ ನಾಯಕಿ, ನಾಯಕನಿಗೆ ಕನೆಕ್ಟ್ ಆಗುತ್ತಾಳೆ. ಇಬ್ಬರು ಪ್ರೀತಿಸುತ್ತಿದ್ದಾರೆ ಎಂದುಕೊಂಡಾಗ ಒಂದು ದುರಂತ ನಡೆಯುತ್ತದೆ. ಆ ದುರಂತದ ಹಿನ್ನೆಲೆಯ ಕತೆ ತೆರೆದುಕೊಳ್ಳುತ್ತದೆ.

APAROOPA REVIEW: ಭಾವನೆಗಳಿಗೆ ಹೊಸರೂಪ, ಪ್ರೇಮಕತೆ ಅಪರೂಪ

ತಾರಾಗಣ: ವಿಜಯ್ ರಾಘವೇಂದ್ರ, ಧರ್ಮಕೀರ್ತಿ ರಾಜ್‌, ಸಂಚಿತಾ ಪಡುಕೋಣೆ, ಹರೀಶ್‌ ರೈ, ಸಾಧಕೋಕಿಲಾ, ಶೋಭರಾಜ್‌

ನಿರ್ದೇಶ: ಉಮೇಶ್ ಗೌಡ

ಚಿತ್ರದ ಹಾಡುಗಳು ಅದ್ದೂರಿಯಾಗಿ ಮೂಡಿ ಬಂದಿವೆ. ಹೀಗಾಗಿ ಕೇಳಕ್ಕೂ ಮತ್ತು ನೋಡಕ್ಕೂ ಅರ್ಹ ಎನಿಸುವ ಹಾಡುಗಳು ಇಲ್ಲಿವೆ. ಪೊಲೀಸ್ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅವರದ್ದು ಖಡಕ್ ಪಾತ್ರ. ತನಿಖೆಯ ಜಾಡಿನಲ್ಲಿ ಸಾಗುವ ಅವರ ಪಾತ್ರದಿಂದ ಸಿನಿಮಾ ನೋಡುವ ಕುತೂಹಲ ಮೂಡಿಸಿದರೆ, ಸಾಧು ಕೋಕಿಲ ಹಾಗೂ ಶೋಭರಾಜ್ ಪಾತ್ರಗಳು ನಗಿಸುತ್ತವೆ. ಧರ್ಮ ಕೀರ್ತಿರಾಜ್ ಅವರ ಪಾತ್ರ ಹೇಗಿದೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದೆ. ಸಂಚಿತಾ ಪಡುಕೋಣೆ ಅವರ ಪಾತ್ರ ನೋಡಲು ಚಂದ.

click me!