ಸುಘೋಷ್, ಹೃತಿಕಾ ಶ್ರೀನಿವಾಸ್, ಅಶೋಕ್, ವಿಜಯ್ ಚೆಂಡೂರು, ಅರುಣಾ ಬಾಲರಾಜ್, ಅವಿನಾಶ್ ನಟಿಸಿರುವ ಅಪರೂಪ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ?
ರಾಜೇಶ್ ಶೆಟ್ಟಿ
ಆ್ಯಕ್ಷನ್ ಸಿನಿಮಾಗಳೇ ಪ್ರಜ್ವಲಿಸುತ್ತಿರುವ ಈ ಕಾಲದಲ್ಲಿ ಬಂದಿರುವ ನವಿರಾದ ಅಪ್ಪಟ ಪ್ರೇಮಕತೆ ಇದು. ಇಲ್ಲಿ ಪ್ರೇಮವಿದೆ, ಡ್ಯೂಯೆಟ್ ಇದೆ, ಬ್ರೇಕಪ್ ಹಾಡಿದೆ, ರುಚಿಗೆ ತಕ್ಕಷ್ಟು ಫೈಟಿಂಗ್ ಇದೆ, ಸೊಗಸಾದ ಹಾಡುಗಳಿವೆ, ಕುರಿ ಪ್ರತಾಪ್ ತಮಾಷೆ ಇದೆ ಎಲ್ಲವೂ ಸೇರಿ ಅಪರೂಪ ಸಿನಿಮಾ ಆಗಿದೆ.
ಬ್ರೇಕಪ್ ಆಗಿರುವ ಲವಲವಿಕೆಯ ತರುಣನೊಬ್ಬ ತನ್ನ ನೋವಿಗೆ ಮದ್ದು ಹುಡುಕುತ್ತಾ ಇರುವ ವೇಳೆಯಲ್ಲಿ ಅವನ ಪ್ರೇಮಕತೆಯ ಅನಾವರಣ ಆಗುತ್ತದೆ. ಏಕಾಂಗಿತನದಿಂದ ನೋಯುತ್ತಿರುವ, ಪ್ರೀತಿ ಬಯಸುವ, ವಿಸ್ಮಯ ಸಂಭವಿಸಬೇಕೆಂದು ಕಾಯುವ ಹುಡುಗಿಯ ಭೇಟಿ ನಾಯಕನ ಜೊತೆ ಆಕಸ್ಮಿಕವಾಗಿ ಆಗುತ್ತದೆ. ಅಲ್ಲಿಂದ ಪ್ರೇಮದಾರಂಭ. ಕತೆಯಾರಂಭ. ಅಲ್ಲಿಯವರೆಗೂ ಉಡಾಫೆಯಿಂದ ಇದ್ದ ನಾಯಕನ ರೂಪಾಂತರ.
ನಿರ್ದೇಶನ: ಮಹೇಶ್ ಬಾಬು
ತಾರಾಗಣ: ಸುಘೋಷ್, ಹೃತಿಕಾ ಶ್ರೀನಿವಾಸ್, ಅಶೋಕ್, ವಿಜಯ್ ಚೆಂಡೂರು, ಅರುಣಾ ಬಾಲರಾಜ್, ಅವಿನಾಶ್
ರೇಟಿಂಗ್- 3
Bengaluru Boys review: ನಾಲ್ಕು ಮಂದಿ ಹುಡುಗರ ಹಾಡು- ಪಾಡು
ಇದೊಂದು ಹೆಚ್ಚು ಭಾರವಿಲ್ಲದ ಸಿನಿಮಾ. ಭಾವನೆಗಳು ತುಂಬಿರುವ ಹಗುರ ಸಿನಿಮಾ. ಹಸಿರು ದಾರಿ ಇದೆ, ಒದ್ದೆಯಾದ ಕಣ್ಣುಗಳಿವೆ, ಪ್ರೇಮಗೊಂದಲವಿದೆ, ಹಿಮದ ಹಿನ್ನೆಲೆಯಲ್ಲಿ ನರ್ತನವಿದೆ, ಹಿತವಾದ ಹಾಡುಗಳಿವೆ, ಸೊಗಸದ ಕೌಟುಂಬಿಕ ಚಿತ್ರಣವಿದೆ. ಇವೆಲ್ಲವೂ ಸೇರಿ ಈ ಚಿತ್ರವನ್ನು ಕಾವ್ಯಮಯವನ್ನಾಗಿಸಿದೆ. ದ್ವಿತೀಯಾರ್ಧದಲ್ಲಿ ಬರುವ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್ ಧ್ವನಿ ಕೇಳುವುದು ಖುಷಿ ಮತ್ತು ವಿಷಾದ ಎರಡನ್ನೂ ಉಂಟು ಮಾಡುತ್ತದೆ.
ನಿರ್ದೇಶಕರು ತುಂಬಾ ಸಂಕೀರ್ಣವಾದದ್ದೇನೂ ಹೇಳಲೂ ಹೋಗಿಲ್ಲ. ಚಿತ್ರಿಸಲೂ ಹೋಗಿಲ್ಲ. ಭಾವಗಳನ್ನು ತಾಕುವ ಕತೆ ಬರೆದಿದ್ದಾರೆ. ಸಾಮಾನ್ಯನಿಗೂ ತಲುಪುವ ಪ್ರೇಮಕತೆಯನ್ನು ಶ್ರದ್ಧೆಯಿಂದ ರೂಪಿಸಿದ್ದಾರೆ. ಅದಕ್ಕೆ ಬೇಕಾಗುವ ಹಾಗೆ ಮಲೆನಾಡಿನ ದಾರಿಯಲ್ಲಿ ಬೈಕ್ ರೈಡ್ ಕರೆದುಕೊಂಡು ಹೋಗುತ್ತಾರೆ. ಹಿಮರಾಶಿಯ ಮಧ್ಯೆ ಹುಡುಗ, ಹುಡುಗಿಯನ್ನು ಡಾನ್ಸ್ ಮಾಡಿಸುತ್ತಾರೆ. ಜಾಸ್ತಿ ಒಲವು ತೋರಿಸುತ್ತಾರೆ, ಕೊಂಚ ಕಣ್ಣೀರು ಹಾಕಿಸುತ್ತಾರೆ. ಅಷ್ಟರ ಮಟ್ಟಿಗೆ ಇದೊಂದು ಚೆಂದವನ್ನೇ ಹಾಸುಹೊದ್ದುಕೊಂಡಿರುವ ಫೀಲ್‌ಗುಡ್ ಸಿನಿಮಾ.
Bera Film Review: ಕರುಣೆಯ ದೀಪ, ಪ್ರೀತಿಯ ಪಿಸುಮಾತು ಧರಿಸಿರುವ ಬೇರ
ಈ ಸಿನಿಮಾದ ಅಚ್ಚರಿ ನಾಯಕ ಸುಘೋಷ್ ಮತ್ತು ನಾಯಕಿ ಹೃತಿಕಾ. ಅವರಿಬ್ಬರೂ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ತೆರೆ ಮೇಲೆ ಗಮನ ಸೆಳೆಯುವಂತೆ ಕಾಣಿಸುತ್ತಾರೆ. ನೃತ್ಯದಲ್ಲಿನ ಚಾಕಚಕ್ಯತೆಗೆ ಹೆಚ್ಚು ಅಂಕಗಳು ಕೊಡುವಂತಿದೆ. ಪ್ರಜ್ವಲ್ ಪೈ ಸಂಗೀತ ದೃಶ್ಯಗಳೊಂದಿಗೆ ಮಿಳಿತಗೊಂಡು ಇಷ್ಟವಾಗುವಂತೆ ಕೇಳಿಸುತ್ತದೆ.
ಈ ಸಿನಿಮಾ ಬಣ್ಣಗಳೇ ತುಂಬಿಕೊಂಡಿರುವ, ಹಸಿರು ದಾರಿಯಂತೆ ಆಹ್ಲಾದ ಒದಗಿಸುವ, ಮಳೆಯಂತೆ ಖುಷಿ ಒದಗಿಸುವ ಸರಳ ಪ್ರೇಮ ಕಾವ್ಯ.