Dvandva Review: ಸಸ್ಪೆನ್ಸ್‌, ಸಸ್ಪೆನ್ಸ್‌ ಮತ್ತೂ ಸಸ್ಪೆನ್ಸ್‌

By Kannadaprabha News  |  First Published Sep 23, 2023, 10:21 AM IST

ತಿಲಕ್‌, ಆಸಿಯಾ ಫಿರ್ದೋಸಿ, ದಿನೇಶ್‌ ಮಂಗಳೂರು, ಶೋಭರಾಜ್‌, ಬಲರಾಜವಾಡಿ, ಅನಿತಾ ಭಟ್‌, ಶೋಧನ್ ನಟನೆಯ ದ್ವಂದ್ವ ರಿಲೀಸ್ ಆಗಿದೆ....
 


ಆರ್‌. ಕೇಶವಮೂರ್ತಿ

ರಾಜಕೀಯ ಚದುರಂಗದ ಆಟದಲ್ಲಿ ಒಬ್ಬ ಮುಗ್ಧ ಹುಡುಗಿ, ಮತ್ತೊಬ್ಬ ಸಿನಿಮಾ ನಟಿಯ ಹಾಡು-ಪಾಡುಗಳನ್ನು ಒಳಗೊಂಡ ಸೈಲೆಂಟ್‌ ಕಿಲ್ಲಿಂಗ್‌ ಕತೆಯನ್ನು ಹೇಳುವ ಸಿನಿಮಾ ‘ದ್ವಂದ್ವ’. ಇಲ್ಲಿ ಯಾರು ವಿಲನ್‌, ಯಾರು ಹೀರೋ ಎಂಬುದು ಸಿನಿಮಾ ಮುಗಿಯುವ ತನಕ ಗೊತ್ತಾಗುವುದಿಲ್ಲ. ಅಷ್ಟರ ಮಟ್ಟಿಗೆ ರಹಸ್ಯ ಕಾಪಾಡಿಕೊಂಡು ಹೋಗಿದ್ದಾರೆ ನಿರ್ದೇಶಕ ಎ ಭರತ್‌. ಅದಕ್ಕೆ ಈ ಸಿನಿಮಾ ಪೂರ್ತಿ ಸಸ್ಪೆನ್ಸ್‌, ಸಸ್ಪೆನ್ಸ್‌ ಮತ್ತೂ ಸಸ್ಪೆನ್ಸ್‌.

Latest Videos

undefined

ತಾರಾಗಣ: ತಿಲಕ್‌, ಆಸಿಯಾ ಫಿರ್ದೋಸಿ, ದಿನೇಶ್‌ ಮಂಗಳೂರು, ಶೋಭರಾಜ್‌, ಬಲರಾಜವಾಡಿ, ಅನಿತಾ ಭಟ್‌, ಶೋಧನ್

ನಿರ್ದೇಶನ: ಎ. ಭರತ್‌

Olave Mandara 2 Review: ಸಂಬಂಧವೆಂಬ ಆಲದ ಮರದಡಿ ಪ್ರೀತಿ, ನೀತಿ ಇತ್ಯಾದಿ

ಮೂರು ಕತೆಗಳು ಒಟ್ಟಿಗೆ ಸಾಗುತ್ತವೆ. ಒಮ್ಮೆ ರಾಜಕೀಯ ಆಟ ತೆರೆದುಕೊಂಡರೆ, ಇದ್ದಕ್ಕಿದ್ದಂತೆ ನಾಯಕ ಮತ್ತು ನಾಯಕಿ ಕತೆ ಬರುತ್ತದೆ, ಮತ್ತೆಲ್ಲೋ ಸಿನಿಮಾ ನಟಿಯೊಬ್ಬಳು ಕಾರು ಡ್ರೈವರ್‌ ಜತೆಗೆ ಹೋಗಿರುವ ಘಟನೆ ದರ್ಶನವಾಗುತ್ತದೆ. ಈ ಮೂರಕ್ಕೂ ಇರುವ ಸೈಲೆಂಟ್‌ ಕಿಲ್ಲಿಂಗ್‌ ಕೊಂಡಿಯ ಹಿಂದೆ ಪೊಲೀಸ್‌ ಅಧಿಕಾರಿ ಹೊರಟಿದ್ದಾರೆ. ಹೀಗೆ ಏಕಾಕಲಕ್ಕೆ ಬೇರೆ ಬೇರೆ ಕತೆಗಳನ್ನು ಹೇಳುತ್ತಲೇ ಕೊನೆಗೂ ಚಿತ್ರದ ಹೆಸರಿಗೆ ತಕ್ಕಂತೆಯೇ ಸಿನಿಮಾ ಮುಗಿಸುತ್ತಾರೆ!

DIGVIJAYA REVIEW: ರೈತರ ಗೆಲುವಿಗೆ ಹಾತೊರೆಯುವ ಕತೆ

ಚಿಕ್ಕಂದಿನಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗಿಗೆ ಅಪಾರವಾದ ನೆನಪಿನ ಶಕ್ತಿ ಇರುತ್ತದೆ. ಹೈಪರ್‌ಟೈಮಿಸಿಯಾ ಸಮಸ್ಯೆ ಇರುವ ಹುಡುಗಿ. ಒಮ್ಮೆ ನೋಡಿದ್ದನ್ನು ಹತ್ತಿಪ್ಪತ್ತು ವರ್ಷಗಳ ಕಾಲ ನೆನಪಿನಲ್ಲೇ ಇಟ್ಟುಕೊಳ್ಳುವ ಹುಡುಗಿ. ಈಕೆಯ ಈ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ರಾಜಕಾರಣಿ ತನ್ನ ಅಕ್ರಮ ಆಸ್ತಿಯ ವಿವರಣೆಗಳನ್ನು ದಾಖಲೆಗಳೇ ಇಲ್ಲದೆ ಈಕೆಯ ನೆನಪಿನಲ್ಲಿ ಅಡಗಿಸಿಟ್ಟಿರುತ್ತಾನೆ. ಈಗ ಈಕೆ ನಾಪತ್ತೆ ಆಗಿದ್ದಾಳೆ. ಮುಂದೆ ಏನಾಗುತ್ತದೆ ಎಂಬುದನ್ನು ತೆರೆ ಮೇಲೆ ನೋಡಬೇಕು.

click me!