Film Review: ಗಿಲ್ಕಿ

By Kannadaprabha News  |  First Published Feb 19, 2022, 10:25 AM IST

ವಿಶೇಷ ಚೇತನರ ಬದುಕಿನ ಅನಾವರಣದ ಗಿಲ್ಕಿ ಸಿನಿಮಾ ಹೇಗಿದೆ? ಇಲ್ಲಿದೆ ವಿಮರ್ಶೆ... 


ಈಚಿತ್ರದಲ್ಲಿ ಒಂದು ಸಂಭಾಷಣೆ ಇದೆ. ನಾಯಕ: ನಾನು ನಿನ್ನ ಜ್ಯೂಲಿ ಲಕ್ಷ್ಮೀ ಅಂತ ಕರೆಯಲಾ, ನಾಯಕಿ: ಹೂಂ ಸರಿ. ನಾನೂ ನಿನ್ನ ಅನಂತ್‌ನಾಗ್ ಅಂತ ಕರೆಯಲಾ.. ನಾಯಕ: ಹೋ... ಆಯ್ತು.

- ಹೀಗೆ ತಮ್ಮದು ಕ್ಲಾಸಿಕ್ ಪ್ರೇಮ ಕತೆ ಎಂದು ಹೇಳಿಕೊಳ್ಳುವ ನಾಯಕ ಯೋಚನೆ ಮತ್ತು ವರ್ತನೆಯಲ್ಲಿ ಇನ್ನೂ ಮಗು. ನಾಯಕಿ ಸುಂದರಿ. ಆದರೆ ಮಾತನಾಡಲು ಬರಲ್ಲ. ಕೈ-ಕಾಲು ಬೇರೆ ಸರಿ ಇಲ್ಲ. ಇನ್ನೊಬ್ಬರ ನೆರವಿಲ್ಲದೆ ಬದುಕಲಾಗದ ಜೀವ ಅದು. ಇವರ ಮಧ್ಯೆ ನಡು ವಯಸ್ಸು ದಾಟಿರುವ ಮತ್ತೊಬ್ಬ ವ್ಯಕ್ತಿ. ಕಣ್ಣು ಕಾಣದ ಈತ ವೇದಾಂತಿ ಮಾತ್ರವಲ್ಲ, ತೆವಲುಗಳನ್ನು ಮೈಗೂಡಿಸಿಕೊಂಡ ಪರಮ ಸುಖಿ. 

Film Review: ಬೈಟು ಲವ್

Tap to resize

Latest Videos

ತಾರಾಗಣ: ತಾರಕ್ ಪೊನ್ನಪ್ಪ, ಚೈತ್ರಾ ಆಚಾರ್, ಅಶ್ವಿನ್ ಹಾಸನ್, ಗೌತಮ್ ರಾಜ್
ನಿರ್ದೇಶನ: ವೈಕೆ
ರೇಟಿಂಗ್: ****

ಹೆಸರು ಶೇಕ್‌ಸ್ಪಿಯರ್. ನಡುವೆ ಕೋಪಿಷ್ಟ ಅಣ್ಣ. ಇವಿಷ್ಟು ಪಾತ್ರಗಳ ಮೂಲಕ ನಿರ್ದೇಶಕ ವೈಕೆ ಹೇಳುವ ‘ಗಿಲ್ಕಿ’ ಚಿತ್ರದ ಕತೆಯನ್ನು ನೋಡಿ ಅಚ್ಚರಿಗೊಳ್ಳುತ್ತೀರಿ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿಜವಾಗಲೂ ಹೊಸತನದ ಸಿನಿಮಾ ಕೊಟ್ಟಿದ್ದಾರೆ ವೈಕೆ. ನಿರ್ದೇಶಕರ ಸಿನಿಮಾ ಕಟ್ಟುವ ಪ್ರೀತಿಗೆ ದೊಡ್ಡ ಪಿಲ್ಲರ್‌ಗಳಾಗಿ ನಿಲ್ಲುವುದು ನಾಯಕ ತಾರಕ್ ಪೊನ್ನಪ್ಪ, ನಾಯಕಿ ಚೈತ್ರಾ ಆಚಾರ್ ಮತ್ತು ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡ ವ್ಯಕ್ತಿ. 

Film Review: ವರದ

‘ಬದುಕು ಸುಂದರವಾಗಿದ್ದರೆ ಸಾವು ಆದರ್ಶವಾಗಿರುತ್ತದಂತೆ’, ‘ಒಳ್ಳೆಯತನ ಅನ್ನೋದು ಒಣಗಿರೋ ಸೌದೆ ತರ. ಅದು ನೆನಪಾಗೋದೇ ಹೆಣ ಸುಡುವಾಗ’, ‘ಮನಸ್ನಾ ಕಟ್ಟಾಕೊಂಡು ನೋಡಕ್ಕೆ ಹೋಗ್ಬೇಡ, ಕಾಣೋದೆಲ್ಲ ಕತ್ಲೆ. ಒಂದೇ ಒಂದು ಸಲ ಬಿಚ್ಚಿಟ್ಟುಕೊಂಡು ನೋಡು ಎಲ್ಲರೂ ಬೆತ್ಲೆನೇ’, ‘ಬೇಡಿಕೆಗಳು ಕಮ್ಮಿ ಇದ್ದರೂ ಭಾವನೆಗಳು ತುಂಬಾ ಇದ್ವು. ಅದೇನೋ ಹೇಳ್ತಾರಲ್ಲ, ಬದುಕಿಗೆ ಬಾಯಾರಿದಾಗ ಭಾವನೆಗಳು ಬೀದಿಗಿಳಿತಾವೆ ಅಂತ’ ಇಂತಹ ಸಂಭಾಷಣೆಗಳ ಮೂಲಕ ಇಡೀ ಚಿತ್ರವನ್ನು ಆಪ್ತವಾಗಿ, ಜೀವಪರವಾಗಿ ಬೆಸೆಯುತ್ತ ಸಾಗುವ ‘ಗಿಲ್ಕಿ’ ನೋಡಲೇ ಬೇಕಾದ ಸಿನಿಮಾ ಎನ್ನುವ ಹಿರಿಮೆಗೆ ಪಾತ್ರವಾಗುವುದರಲ್ಲಿ ಕಾರ್ತಿಕ್ ಎಸ್ ಕ್ಯಾಮೆರಾ, ಅದಿಲ್ ನಾದಫ್ ಸಂಗೀತ ಕೂಡ ಬಹು ಮುಖ್ಯ ಕೆಲಸ ಮಾಡಿದೆ.

click me!