Bad Manners Review: ಕತ್ತಲು ಬೆಳಕು ಜಗತ್ತಲ್ಲಿ ಅನೂಹ್ಯ ಪಾತ್ರಗಳ ತಾಳಮೇಳ

By Kannadaprabha News  |  First Published Nov 25, 2023, 9:45 AM IST

ಅಭಿಷೇಕ್ ಅಂಬರೀಶ್, ರಚಿತಾ ರಾಮ್, ಮೈಸೂರು ಸಚ್ಚಿ, ರೋಚಿತ್‌, ಪ್ರತಾಪ್ ನಾರಾಯಣ್, ತಾರಾ ನಟನೆಯ ಬ್ಯಾಡ್ ಮ್ಯಾನರ್ಸ್‌ ಸಿನಿಮಾ ರಿಲೀಸ್ ಆಗಿದೆ....


ರಾಜೇಶ್ ಶೆಟ್ಟಿ

ಗುಡ್ಡ ಬಂಡೆಗಳೇ ತುಂಬಿರುವ ಜಾಗ, ಅಲ್ಲೊಂದು ಹಳೆಯ ಖ್ವಾರಿ, ತುಂಬಿಕೊಂಡ ನೀರು, ದಡದಲ್ಲಿ ದೊಡ್ಡದಾದ ನರಸಿಂಹನ ವಿಗ್ರಹ, ಅದರ ಮುಂದೆ ಉರಿಯುತ್ತಿರುವ ನಂದಾದೀಪ, ಕೊರಳಲ್ಲಿ ಹಾರ, ಬಯಲಲ್ಲಿ ಕತ್ತಿ, ಚೂರಿ, ಕಂಟ್ರಿ ಪಿಸ್ತೂಲು. ರಣ ರಣ ಬಿಸಿಲು ಊರಲ್ಲಿ ತಂಗಾಳಿ ಬೀಸಿದಂತೆ ಆಹ್ಲಾದ ಉಂಟು ಮಾಡುವ ಒಂದು ಪಾತ್ರ. ಅದು ಅಭಿಷೇಕ್ ಅಂಬರೀಶ್.

Tap to resize

Latest Videos

ನಿರ್ದೇಶನ: ಸೂರಿ

ತಾರಾಗಣ: ಅಭಿಷೇಕ್ ಅಂಬರೀಶ್, ರಚಿತಾ ರಾಮ್, ಮೈಸೂರು ಸಚ್ಚಿ, ರೋಚಿತ್‌, ಪ್ರತಾಪ್ ನಾರಾಯಣ್, ತಾರಾ

ರೇಟಿಂಗ್‌: 3

SUGAR FACTORY REVIEW: ಆಧುನಿಕ ಕಾಲದ ಸಂಕೀರ್ಣ ಸಂಬಂಧಗಳ ಸುತ್ತ..

ಸೂರಿ ಎಂದಿನಂತೆ ತನ್ನದೇ ಆದ ಗ್ರೇ ಬಣ್ಣದ ಕಂಟ್ರಿ ಪಿಸ್ತೂಲಿನ ಜಗತ್ತೊಂದನ್ನು ಸೃಷ್ಟಿಸಿದ್ದಾರೆ. ಧೂಳು ತುಂಬಿರುವ ರಸ್ತೆಯಲ್ಲಿ ಸಾಗಬೇಕಾದ ಆ ತಾಣದಲ್ಲಿ ಸಿಗುವುದೆಲ್ಲಾ ವಿಕ್ಷಿಪ್ತ ವ್ಯಕ್ತಿಗಳೇ. ಅಂಥದ್ದೊಂದು ಜಾಗಕ್ಕೆ ಬರುವ ಅಭಿಷೇಕ್ ಕಣ್ಣುಗಳೇ ಈ ಚಿತ್ರದ ಬೆಳಕು. ಆ ಕಣ್ಣುಗಳು ಸಾಕಷ್ಟು ಹೇಳುತ್ತವೆ. ಅದರಂತೆ ಸೂರಿ ತುಂಬಾ ಕಡೆಗಳಲ್ಲಿ ಅವರ ಕಣ್ಣಿಗೆ ಮಾತನಾಡುವ ಜಾಗ ಸೃಷ್ಟಿ ಮಾಡುತ್ತಾರೆ. ಛಾಯಾಗ್ರಾಹಕ ಶೇಖರ್ ಚಂದ್ರ ಅದನ್ನು ಬಹಳ ಚೆನ್ನಾಗಿ ಕಾಣಿಸುತ್ತಾರೆ. ಚರಣ್‌ರಾಜ್‌ ಸಂಗೀತ ಆ ನೋಟಕ್ಕೆ, ಮಾತಿಗೆ ಅರ್ಥ ಒದಗಿಸುವಂತಿವೆ. ಅಷ್ಟರ ಮಟ್ಟಿಗೆ ಬ್ಯಾಡ್ ಮ್ಯಾನರ್ಸ್ ಹತ್ತಿರ ಆಗುತ್ತದೆ.

ಅಭಿಷೇಕ್ ಅಂಬರೀಶ್ ಅವರು ರುದ್ರ ಎಂಬ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಸರಿಯಾಗಿ ಹೊಂದಿಕೊಂಡಿದ್ದಾರೆ. ಪೊಲೀಸ್ ಯೂನಿಫಾರ್ಮಿನಲ್ಲಿ ಕ್ಲೀನ್ ಶೇವ್ ಮಾಡಿಕೊಂಡು ಬಂದಾಗ, ಮನಸು ಪೂರ್ತಿ ನಕ್ಕಾಗ, ಆ್ಯಟಿಟ್ಯೂಡಿನಿಂದ ಮಾತನಾಡಿದಾಗ ಅವರು ಇಷ್ಟವಾಗುತ್ತಾರೆ.

Sapta Sagaradaache Ello Side B Review: ಅವಳು ಸುಖವಾಗಿರಲಿ ಎಂದು ಹಾರೈಸುತ್ತಾ...

ಚಿತ್ರದಲ್ಲಿ ಕತೆ ಹುಡುಕಿದರೆ ಅಂಥಾ ಗಾಢತೆ ಕಾಣುವುದಿಲ್ಲ. ಆದರೆ ಸರಳತೆಯಲ್ಲೇ ಶ್ರೇಷ್ಠತೆ ಕಾಣುವ ಸೂರಿ ಗುಣ ಇಲ್ಲೂ ಮುಂದುವರಿದಿದೆ. ಚಿತ್ರಕತೆಯಲ್ಲಿ ಮತ್ತೆ ಕೈಚಳಕ ತೋರಿಸಿದ್ದಾರೆ. ಕೊಂಚ ಕುತೂಹಲರ, ಸಂಕೀರ್ಣವಾಗಿದ್ದಾಗಲೇ ಚಿತ್ರಕತೆ ಹೆಚ್ಚು ಸೊಗಸು ಎಂದು ಅವರು ನಂಬಿದಂತಿದೆ. ಸೂರಿ ಅವರ ಶೈಲಿಯಲ್ಲೇ ಈ ಚಿತ್ರದ ವಾತಾವರಣವನ್ನು ಕಟ್ಟಿಕೊಂಡಿರುವುದು ಗಮನಾರ್ಹ. ಅದಕ್ಕೆ ತಕ್ಕಂತೆ ಎಲ್ಲಾ ಕಲಾವಿದರದೂ ಸೊಗಸು ಅಭಿನಯ.

ಇಲ್ಲಿ ವೇಗವಿದೆ. ಸ್ಟೈಲ್ ಇದೆ. ನಿರರ್ಗಳ ಓಟವಿದೆ. ಅಲ್ಲಲ್ಲಿ ಮೌನವನ್ನು, ಯೋಚನೆಗೆ ಹಚ್ಚುವ ಸಾಲುಗಳನ್ನು, ಸಂಕೀರ್ಣ ಪಾತ್ರಗಳನ್ನು ನೋಡುಗರಿಗೆ ದಾಟಿಸುತ್ತಾ ಸೂರಿ ಹಾದಿ ಸವೆಸಿದ್ದಾರೆ. ದಾರಿ ಮುಗಿದ ಮೇಲೂ ಉಳಿಯುವುದು ರುದ್ರ ಎಂಬ ಪಾತ್ರ ಮತ್ತು ಸೂರಿ ಕಟ್ಟಿಕೊಟ್ಟ ವಿಶಿಷ್ಟ ಜಗತ್ತು.

click me!