ಧರ್ಮಣ್ಣ ಕಡೂರು, ನಿರೀಕ್ಷಾ ರಾವ್, ಅಪೂರ್ಣ, ನಾಗೇಂದ್ರ ಷಾ, ದೀಕ್ಷಿತ್ ಕೃಷ್ಣ, ಕೃಷ್ಣಮೂರ್ತಿ ಕವತ್ತಾರ, ಶ್ರೀನಿವಾಸ್ ಗೌಡ್, ಉಷಾ ರವಿಶಂಕರ್, ಎಂ ಕೆ ಮಠ ನಟನೆಯ ರಾಜಯೋಗ ಸಿನಿಮಾ ರಿಲೀಸ್ ಆಗಿದೆ....ಸಿನಿಮಾ ಹೇಗಿದೆ?
ಆರ್. ಕೇಶವಮೂರ್ತಿ
ಅಚ್ಚುಕಟ್ಟಾದ ಪ್ರಾಮಾಣಿಕವಾದ ಪ್ರಯತ್ನ ಮತ್ತು ಪ್ರತಿಭಾವಂತ ಕಲಾವಿದರು ಸಂಗಮವಾದರೆ ಒಂದೊಳ್ಳೆ ಸಿನಿಮಾ ಮೂಡುತ್ತದೆ ಎಂಬುದಕ್ಕೆ ‘ರಾಜಯೋಗ’ ಉದಾಹರಣೆ. ಹಳ್ಳಿಗಾಡಿನ ಕತೆಯನ್ನು ತುಂಬಾ ಸೊಗಸಾಗಿ ಹೇಳುವ ಜತೆಗೆ ಯಾವುದೇ ಆಡಂಬರ, ವೈಭವೀಕರಣ ಇಲ್ಲದೆ ಇಡೀ ಚಿತ್ರವನ್ನು ಆರ್ಗ್ಯಾನಿಕ್ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಲಿಂಗರಾಜ ಉಚ್ಚಂಗಿದುರ್ಗ.
ತಾರಾಗಣ: ಧರ್ಮಣ್ಣ ಕಡೂರು, ನಿರೀಕ್ಷಾ ರಾವ್, ಅಪೂರ್ಣ, ನಾಗೇಂದ್ರ ಷಾ, ದೀಕ್ಷಿತ್ ಕೃಷ್ಣ, ಕೃಷ್ಣಮೂರ್ತಿ ಕವತ್ತಾರ, ಶ್ರೀನಿವಾಸ್ ಗೌಡ್, ಉಷಾ ರವಿಶಂಕರ್, ಎಂ ಕೆ ಮಠ
ನಿರ್ದೇಶನ: ಲಿಂಗರಾಜ ಉಚ್ಚಂಗಿದುರ್ಗ
ರೇಟಿಂಗ್ : 3
ಕೆಎಎಸ್‌ನಲ್ಲಿ ಪಾಸಾಗಿ ತಹಶೀಲ್ದಾರ್ ಆಗಬೇಕು ಎಂದು ಕನಸು ಕಾಣುವ ಹಳ್ಳಿಯ ವಿದ್ಯಾವಂತ ಪ್ರಾಣೇಶ್ ಅಲಿಯಾಸ್ ಪ್ರಾಣಿ. ಈತನ ಓದನ್ನು ಅಪಹಾಸ್ಯ ಮಾಡುವ ಊರಿನ ಜನ, ಮದುವೆ ಆದ ಮೇಲೂ ಓದು- ಪರೀಕ್ಷೆಯ ಹುಚ್ಚು ಬಿಡದ ಪ್ರಾಣೇಶನ ಸಂಸಾರ ಬೀದಿಗೆ ಬಂದಾಗ ಸಂಬಂಧಗಳು, ಪ್ರೀತಿ- ಪ್ರೇಮದ ಮುಖವಾಡಗಳು ಬಯಲಾಗುವ ಜತೆಗೆ ಕತೆಯ ನಿಜವಾದ ಉದ್ದೇಶ ಜೀವ ಪಡೆದುಕೊಳ್ಳುತ್ತದೆ. ಇದು ಪ್ರತಿಯೊಬ್ಬ ವಿದ್ಯಾವಂತ ಹಳ್ಳಿ ಹುಡುಗನ ಲೈಫ್ ಡೈರಿಯಾಗಿ ನಿಲ್ಲುತ್ತದೆ.
Sapta Sagaradaache Ello Side B Review: ಅವಳು ಸುಖವಾಗಿರಲಿ ಎಂದು ಹಾರೈಸುತ್ತಾ...
ಸಂಕಲನ ಮತ್ತಷ್ಟು ಸರಾಗವಾಗಿ ಸಾಗಿ, ಚಿತ್ರದ ಅವಧಿಗೆ ಒಂದಿಷ್ಟು ಕತ್ತರಿ ಬೀಳುವ ಅಗತ್ಯ ಇತ್ತು ಅನಿಸುತ್ತದೆ. ಇದರ ಜತೆಗೆ ಹಿನ್ನೆಲೆ ಸಂಗೀತದ ಕಡೆ ಗಮನ ಕೊಡಬೇಕಿತ್ತು. ಇದರ ಹೊರತಾಗಿ ನೋಡಬಹುದಾದ ಸಿನಿಮಾ ಎನ್ನುವ ಶಿಫಾರಸ್ಸಿಗೆ ‘ರಾಜಯೋಗ’ ಅರ್ಹ.
THE VACANT HOUSE REVIEW: ನಿಗೂಢತೆ, ಗ್ಲಾಮರ್, ಅಂಜಿಕೆ ಅಡಗಿಸಿಟ್ಟಿರುವ ವೇಕೆಂಟ್ ಹೌಸ್
ಧರ್ಮಣ ಕಡೂರು ನಟನಾ ಪ್ರತಿಭೆ, ನಿರೀಕ್ಷಾ ರಾವ್ ಮುಗ್ಧತೆ ನಿರ್ದೇಶಕನ ಕನಸಿಗೆ ಜೀವ ತುಂಬಿದೆ. ನಾಯಕನ ಸೋದರ ಹಾಗೂ ನಾಯಕಿ ತಂದೆ ಪಾತ್ರಧಾರಿಗಳು, ನಾಗೇಂದ್ರ ಷಾ ಹಾಗೂ ಎಂ ಕೆ ಮಠ ಪಾತ್ರ ಪೋಷಣೆ ಗಮನಾರ್ಹವಾದದ್ದು. ನಮ್ಮದೇ ಊರಿನ ಕತೆ, ಪಾತ್ರಗಳು ತೆರೆ ಮೇಲೆ ಬಂದರೆ ಹೇಗಿರುತ್ತದೆ ಎನ್ನುವ ಕುತೂಹಲ ಇದ್ದವರು ಈ ಸಿನಿಮಾ ನೋಡಬಹುದು.