ಸಚಿನ್ ಚೆಲುವರಾಯಸ್ವಾಮಿ, ರೋಹಿತ್ ಭಾನುಪ್ರಕಾಶ್, ಚಂದನ್ ಆಚಾರ್ , ಚಿಕ್ಕಣ್ಣ, ಅಭಿಷೇಕ್ ದಾಸ್, ವೈನಿಧಿ, ಸೋನಿ, ಪ್ರಗ್ಯ ನಯನ, ಜಯಶ್ರೀ ಆರಾದ್ಯ ನಟಿಸಿರುವ ಸಿನಿಮಾ ರಿಲೀಸ್ ಆಗಿದೆ..
ಆರ್ ಕೇಶವಮೂರ್ತಿ
ನಾಲ್ಕು ಮಂದಿ ಹುಡುಗರ ಕತೆ, ವ್ಯಥೆಯನ್ನು ಹೇಳುವ ‘ಬೆಂಗಳೂರು ಬಾಯ್ಸ್’ ಚಿತ್ರದ ಮೂಲ ಕತೆ ತೆಲುಗಿನಲ್ಲಿದೆ. 2018ರಲ್ಲಿ ಬಂದ ‘ಹುಷಾರು’ ಹೆಸರಿನ ಚಿತ್ರವನ್ನು ಕನ್ನಡಕ್ಕೆ ಎತ್ತಿಕೊಂಡು ಬರಲಾಗಿದೆ. ಈ ಚಿತ್ರಕ್ಕೆ ನಿರ್ದೇಶಕರು ಇಲ್ಲ. ಆದರೆ, ಗುರುದತ್ ಗಾಣಿಗ ಕ್ರಿಯೇಟಿವ್ ನಿರ್ದೇಶಕರಾಗಿದ್ದಾರೆ.
ಮೂಲ ಕತೆಯಲ್ಲಿ ಯುವಕರ ಎಮೋಷನ್ ಹಾಗೂ ಕನಸುಗಳು ಪಿಲ್ಲರ್‌ಗಳಾಗಿ ಕೆಲಸ ಮಾಡಿದ್ದವು. ಕನ್ನಡಕ್ಕೆ ಬರುವ ಹೊತ್ತಿಗೆ ಅದೇ ಕೊರೆಯಾಗಿ ಕಾಣುತ್ತದೆ. ಹಾಗೆ ನೋಡಿದರೆ ತಮಗೆ ಇಷ್ಟದಂತೆ ಬದುಕಲು ಹೊರಡುವ ಯುವಕ- ಯುವತಿಯರ ಸುತ್ತಾ ಈಗಾಗಲೇ ಸಾಕಷ್ಟು ಕತೆ- ಸಿನಿಮಾಗಳು ಬಂದಿವೆ. ‘ಬೆಂಗಳೂರು ಬಾಯ್ಸ್’ ಕೂಡ ಅದೇ ಸಾಲಿಗೆ ಸೇರುವ ಮತ್ತೊಂದು ಸಿನಿಮಾ.
90 BIDI MANEGE NADI REVIEW: ಕುಡಿತವೇ ಮಾರಕ, ಸಿನಿಮಾ ಸಂದೇಶಾತ್ಮಕ
ತಾರಾಗಣ: ಸಚಿನ್ ಚೆಲುವರಾಯಸ್ವಾಮಿ, ರೋಹಿತ್ ಭಾನುಪ್ರಕಾಶ್, ಚಂದನ್ ಆಚಾರ್ , ಚಿಕ್ಕಣ್ಣ, ಅಭಿಷೇಕ್ ದಾಸ್, ವೈನಿಧಿ, ಸೋನಿ, ಪ್ರಗ್ಯ ನಯನ, ಜಯಶ್ರೀ ಆರಾದ್ಯ
ನಿರ್ದೇಶನ: ಗುರುದತ್ ಗಾಣಿಗ
ಡಾ. ವಿಷ್ಣುವರ್ಧನ್ ಮಾತಿನ ಪ್ರಕಾರ ನೀವು ಬದುಕಿದರೆ ಆರೋಗ್ಯ ಸೂಪರ್; ಹಳೆ ವಿಡಿಯೋ ವೈರಲ್!
ತಾವು ವ್ಯರ್ಥ ಎಂದುಕೊಂಡು ಎಲ್ಲರಿಂದ ಬೈಯಿಸಿಕೊಳ್ಳುವ ನಾಲ್ಕು ಮಂದಿ ಹುಡುಗರು. ಇವರು ಏನೇ ಮಾಡಿದರೂ ಅದು ಕೈಗೂಡಲ್ಲ. ಸೋಲು ಇವರ ಹೆಗಲ ಮೇಲೆ ಕೂತಿರುತ್ತದೆ. ಇಂಥವರ ಜತೆಗೆ ಒಬ್ಬ ಸಾಫ್ಟ್‌ವೇರ್ ಉದ್ಯೋಗಿ ಸೇರಿಕೊಳ್ಳುತ್ತಾನೆ. ಈ ನಡುವೆ ಈ ನಾಲ್ಕು ಮಂದಿ ಪೈಕಿ ಒಬ್ಬ ಆಸ್ಪತ್ರೆಗೆ ಸೇರುತ್ತಾನೆ. ಮುಂದೆ ಆತ ಏನಾಗುತ್ತಾನೆ, ಉಳಿದ ಮೂವರ ಪಾಡೇನು, ಪೊಲೀಸರು ಇವರನ್ನು ಅರೆಸ್ಟ್ ಮಾಡುವುದು ಯಾಕೆ ಎಂಬುದು ಚಿತ್ರದ ಮುಂದಿನ ಕತೆ.
ಸಾಫ್ಟ್‌ವೇರ್ ಉದ್ಯೋಗಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಚಿಕ್ಕಣ್ಣ ನಗಿಸುತ್ತಾರೆ. ಚಂದನ್ ಆಚಾರ್ಯ ಆಗಾಗ ಪಂಚ್ ಡೈಲಾಗ್ ಹೇಳಿ ಪ್ರೇಕ್ಷಕರನ್ನು ಎಚ್ಚರಿಸುತ್ತಾರೆ. ಎರಡು ಹಾಡುಗಳು ಕೇಳುವಂತಿವೆ. ಉಳಿದ ವಿಚಾರಗಳ ಹೆಚ್ಚಿನ ವಿವರಣೆಗಳು ಅಗತ್ಯವಿಲ್ಲ!