Maavu Bevu Review: ಹಾಡೇ ಮಾವು, ಕಥೆಯೇ ಬೇವು

By Kannadaprabha News  |  First Published Apr 22, 2023, 10:10 AM IST

ಸಂದೀಪ್‌ ನೀನಾಸಂ, ಚೈತ್ರಾ ಹೆಚ್‌ ಜಿ, ಡ್ಯಾನಿ ಕುಟ್ಟಪ್ಪ, ಶ್ರೀನಿವಾಸ ಮೂರ್ತಿ ಸಿನಿಮಾ ಮಾವು ಬೇವು ರಿಲೀಸ್ ಆಗಿದೆ. ಸಿನಿಮಾ ಹೇಗಿದೆ? 


ಪೀಕೆ

ನಲವತ್ತು ವರ್ಷ ಕೆಳಗಿನ ಸರಳ, ಸುಂದರ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳು, ಸಿನಿಮಾದುದ್ದಕ್ಕೂ ಈ ಹಾಡುಗಳ ಸುಗ್ಗಿ, ಆ ಹಾಡನ್ನು ಮನಸ್ಸಲ್ಲಿಟ್ಟುಕೊಂಡು ದೃಶ್ಯಗಳನ್ನು ನೋಡಬೇಕು, ಒಂಥರಾ ಬೆಲ್ಲ ಬೇವಿನ ಹಾಗೆ. ಅಥವಾ ಈ ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಮಾವು ಬೇವಿನ ಹಾಗೆ. ಮುಂದೆ ಸಿಹಿ ಇದೆ ಅಂದುಕೊಂಡು ಇಂದಿನ ಕಹಿಯನ್ನು ನುಂಗಿ ನಡೆಯುವುದೇ ಬದುಕಲ್ಲವೇ..

Tap to resize

Latest Videos

ತಾರಾಗಣ: ಸಂದೀಪ್‌ ನೀನಾಸಂ, ಚೈತ್ರಾ ಹೆಚ್‌ ಜಿ, ಡ್ಯಾನಿ ಕುಟ್ಟಪ್ಪ, ಶ್ರೀನಿವಾಸ ಮೂರ್ತಿ

ನಿರ್ದೇಶಕ : ಸುಚೇಂದ್ರ ಪ್ರಸಾದ್‌

Chandini Bar Review: ಬಾರ್‌ ಹುಡುಗರ ಬಯಾಗ್ರಫಿ

ಇಲ್ಲಿ ಒಟ್ಟು ಮೂರು ಬದುಕಿನ ಕಥನಗಳನ್ನು ಸುಚೇಂದ್ರ ಪ್ರಸಾದ್‌ ಹೆಣೆಯುವ ಪ್ರಯತ್ನ ಮಾಡಿದ್ದಾರೆ. ಕೆಲವೊಮ್ಮೆ ದಪ್ಪ ದಾರ ಸೂಜಿಯೊಳಗೆ ಹೋಗದೆ ಎಡವಟ್ಟು ಆಗೋದಿದೆ. ಆಗ ಚೆಂದದ ಮಾಲೆಗಿಂತ ಹೂವಿನ ಕಂಪೇ ಮುಖ್ಯ ಅಂದುಕೊಂಡು ಸುಮ್ಮನಾಗಬಹುದು, ಕೆಲವೊಮ್ಮೆ ಹೂವೂ ಹಾಳಾಗಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತದೆ. ಹೆಣೆಯುವ ವಿಷಯದಲ್ಲಿ ನಿರ್ದೇಶಕನಿಗೆ ಇಂಥ ಬೇಸಿಕ್‌ ಸೆನ್ಸ್‌ ಇರಬೇಕಿರುತ್ತದೆ. ಇಲ್ಲವಾದರೆ ಕೊಳ್ಳುವ ಗ್ರಾಹಕ ಮುಂದೆ ನಡೆಯುತ್ತಾನೆ. ಇದರಲ್ಲಿ ಸಿಟಿಯ ಕಾಂಪ್ಲೆಕ್ಸ್‌ ಮನಸ್ಥಿತಿಯ ಹುಡುಗಿಯನ್ನು ಮದುವೆಯಾದ ಹಳ್ಳಿ ಮೂಲದ ಸರಳ ಮನಸ್ಥಿತಿಯ ವ್ಯಕ್ತಿಯ ವೇದನೆ, ಇನ್ನೊಬ್ಬರ ಬದುಕು ಸರಿ ಮಾಡಲು ಹೊರಡುವ ಆಪ್ತ ಸಲಹೆಗಾರನಿಗೆ ತಾನೇ ಕ್ಲೈಂಟ್‌ ಆಗಿ ನಿಲ್ಲಬೇಕಾಗಿ ಬರುವ ಸ್ಥಿತಿ, ಕನ್ನಡ ಭಾಷೆಯ ಮಹೋನ್ನತಿಯನ್ನು ಜಗತ್ತಿಗೆ ಪರಿಚಯಿಸಲು ಹೊರಟ ಪಂಡಿತರೊಬ್ಬರ ದುಃಸ್ಥಿತಿಗಳ ಚಿತ್ರಣವಿದೆ. ಬೇಡ ಬೇಡ ಅಂದರೂ ಬಿಡದ ಗಾದೆ ಮಾತುಗಳ ಬಿರುಮಳೆಯನ್ನೇ ಪ್ರೇಕ್ಷಕನ ಮೇಲೆ ಸುರಿಸಲಾಗುತ್ತದೆ. ಎಷ್ಟೋ ಪಾತ್ರಗಳ ಮಾತುಗಳು ಸುಚೇಂದ್ರಪ್ರಸಾದ್‌ ಅವರೇ ಆಡಿದಂತೆ ಭಾಸವಾಗುವುದು ಸಿನಿಮಾ ಮೇಲಿನ ಅವರ ಅಪರಿಮಿತ ಪ್ರಭಾವವೋ, ಪ್ರೇಕ್ಷಕನ ಪಾಡೋ ಗೊತ್ತಿಲ್ಲ.

BISILU KUDURE REVIEW: ರೈತ ಬದುಕಿನ ಬೆಂಕಿ ಬಿಸಿಲು

ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಬಹು ಮುಖ್ಯ ಮಾತು - ಫಲಾಫಲಗಳ ಅಪೇಕ್ಷೆ ಇಲ್ಲದೇ ನಿನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡು. ಇಲ್ಲಿ ಪ್ರೇಕ್ಷಕನೂ ಸಿನಿಮಾ ನೋಡುವುದು ತನ್ನ ಕರ್ತವ್ಯ ಅಂದುಕೊಂಡು ಬೇರೆ ಪ್ರಯೋಜನಗಳ ಅಪೇಕ್ಷೆ ಇಲ್ಲದೇ ‘ಮಾವು ಬೇವು’ ನೋಡಬಹುದು.

click me!