ಕ್ರಾಂತಿ, ಸೋನು ಸೂದ್, ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರಮೆನನ್, ಗಿರೀಶ್ ಶಿವಣ್ಣ, ಕಲ್ಯಾಣಿ, ರಮೇಶ್ ಭಟ್ ನಟನೆಯ ಶ್ರೀಮಂತ ಸಿನಿಮಾ ರಿಲೀಸ್. ಹೇಗಿದೆ ಸಿನಿಮಾ...
ಆರ್ ಕೇಶವಮೂರ್ತಿ
ಚಿತ್ರದ ಹೆಸರಿನಂತೆ ರೈತ ಈ ದೇಶದ ಶ್ರೀಮಂತ ಎಂದು ಹೇಳುವ ಸಂದೇಶ ಇಲ್ಲಿದೆ. ಹೀಗಾಗಿ ಆಗಾಗ ನಗರ ಮತ್ತು ಅಲ್ಲಿನ ಜೀವನದ ಕನಸುಗಳು ಕತೆ ಪಕ್ಕ ಬಂದಾಗಲೂ ತಮ್ಮ ನಿರ್ದೇಶನದ ಲಗಾಮನ್ನು ಮತ್ತಷ್ಟುಗಟ್ಟಿಯಾಗಿ ಹಿಡಿದುಕೊಂಡು ಮಣ್ಣು ರಸ್ತೆಯಲ್ಲೇ ಸಾಗುತ್ತಾರೆ. ಸಿನಿಮಾ ಉದ್ದಕ್ಕೂ ಅವರ ಹಳ್ಳಿ ಪ್ರೀತಿ ಸಾಗುತ್ತಾ, ಸೋನು ಸೂದ್ ಅವರಂತಹ ಬಾಲಿವುಡ್ ನಟನನ್ನೂ ಹಳ್ಳಿಗೆ ಕರೆಸಿಕೊಂಡು ರೈತನ ಕುರಿತ ರೋಮಾಂಚನಕಾರಿ ಪದಜಾಲವನ್ನು ಹರಿಬಿಟ್ಟು ಶಿಳ್ಳೆ- ಚಪ್ಪಾಳೆಗಳಿಗೆ ತಮ್ಮ ಚಿತ್ರವನ್ನು ಅರ್ಪಿಸುವಲ್ಲಿ ನಿರ್ದೇಶಕರು ಯಶ ಕಂಡಿದ್ದಾರೆ.
ತಾರಾಗಣ: ಕ್ರಾಂತಿ, ಸೋನು ಸೂದ್, ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರಮೆನನ್, ಗಿರೀಶ್ ಶಿವಣ್ಣ, ಕಲ್ಯಾಣಿ, ರಮೇಶ್ ಭಟ್, ಕುರಿ ರಂಗ, ರವಿಶಂಕರ್, ಶರತ್‌ಕುಮಾರ್, ಗುರುರಾಜ್ ಹೊಸಕೋಟೆ,
ನಿರ್ದೇಶನ: ಹಾಸನ್ ರಮೇಶ್
DAREDEVIL MUSTHAFA REVIEW: ತೇಜಸ್ವೀತನ ಬಿಟ್ಟುಕೊಡದ ಡೇರ್‌ಡೆವಿಲ್ ಕಥನ
ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿರುವ ಹುಡುಗ ಕೃಷ್ಣ. ಈತನನ್ನು ಪ್ರೀತಿಸುವ ಆ ಊರಿನ ಪಟೇಲನ ಪುತ್ರಿ ಪದ್ಮಾ. ಈ ಊರಿಗೆ ನಾಟಕ ತರಬೇತಿ ಮಾಡಿಸಲು ರಂಗಕರ್ಮಿ ಬರುತ್ತಾರೆ. ಜತೆಗೆ ಬಾಂಬೆಯಿಂದ ಒಬ್ಬ ನಟಿಯೂ ಆಗಮನ ಆಗುತ್ತದೆ. ಕೃಷ್ಣ ಮತ್ತು ಬಾಂಬೆ ಹುಡುಗಿ ನಡುವೆ ಲೈಟಾಗಿ ಲವ್ವಾಗುತ್ತಿರುತ್ತದೆ. ಪದ್ಮಾ ಸಿಟ್ಟಾಗುತ್ತಾಳೆ. ದೇವರ ಉತ್ಸವ, ನಾಟಕ, ಪ್ರೀತಿ ಕೈ ತಪ್ಪುತ್ತದೆಂಬ ಭಯ, ತನ್ನ ಮಗ ಓಡಿ ಹೋಗಲಿದ್ದಾನೆಂಬ ತಾಯಿಯ ಆತಂಕ, ಸಾವಿಗೆ ಎದುರಾಗಿ ನಿಂತ ನಾಯಕಿ. ಆ ಹಳ್ಳಿಗೆ ಬಾಂಬೆ ಹುಡುಗಿ ಬಂದಿದ್ದರ ಹಿಂದಿನ ರಹಸ್ಯ ತಿಳಿಯುವುದಕ್ಕೂ ನೀವು ಸಿನಿಮಾ ನೋಡಬೇಕು.
Gurudev Hoysala Review: ಅಬ್ಬರದ ಜೊತೆ ಪಿಸುಮಾತು ಧರಿಸಿರುವ ಪೊಲೀಸ್ ಕಥನ
ಹೇಳಿಕೊಳ್ಳುವಂತಹ ತಾಂತ್ರಿಕ ಕೌಶಲ್ಯ, ಬಹು ಕೋಟಿ ವೆಚ್ಚದ ಅದ್ದೂರಿ ಮೇಕಿಂಗ್ ಗೋಮಾಳ ಜಮೀನಿನಂತೆ! ಆದರೆ, ಹಾಡು, ಹಾಸ್ಯ, ಕತೆ ಮತ್ತು ಕೆಲ ಸಂಭಾಷಣೆಗಳಿಂದ ಹಾಗೂ ಕ್ರಾಂತಿ, ಗಿರೀಶ್ ಶಿವಣ್ಣ, ರಾಜು ತಾಳಿಕೋಟೆ, ಸಾಧು ಕೋಕಿಲಾ ಅವರ ಪಾತ್ರಗಳಿಂದ ಸಿನಿಮಾ ಶ್ರೀಮಂತವಾಗಿ ಕಾಣುತ್ತದೆ. ಹೀಗಾಗಿ ‘ಶ್ರೀಮಂತ’ ಸಿನಿಮಾ ಆಗಾಗ ಮಳೆಯಿಂದ ತೋಯ್ದ ಫಲವತ್ತತೆಯ ತೋಟದಂತೆ ಕಾಣುತ್ತದೆ.