ದಿ ಕಾಶ್ಮೀರ್ ಫೈಲ್ಸ್ ನಂತರ ಹಲವು ವಿವಾದಗಳಿಗೆ ಕಾರಣವಾದ ದಿ ಕೇರಳ ಸ್ಟೋರಿ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ? ಮೊದಲ ಶೋ ನೋಡಿಕೊಂಡು ಬಂದ ಪ್ರೇಕ್ಷಕರೊಬ್ಬರು ಬರೆದ ರಿವ್ಯೂ ಇದು.
ರೋಹನ್ ಶೆಟ್ಟಿ,
ದಿ ಕಾಶ್ಮೀರ್ ಫೈಲ್ಸ್ ನಂತರ ಹಲವು ವಿವಾದಗಳಿಗೆ ಕಾರಣವಾದ ದಿ ಕೇರಳ ಸ್ಟೋರಿ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ? ಮೊದಲ ಶೋ ನೋಡಿಕೊಂಡು ಬಂದ ಪ್ರೇಕ್ಷಕರೊಬ್ಬರು ಬರೆದ ರಿವ್ಯೂ ಇದು.
undefined
'ದಿ ಕೇರಳ ಸ್ಟೋರಿ'.. ಟ್ರೇಲರ್ ರಿಲೀಸ್ ಆದಾಗ್ಲೇ ಒಂದು ಸಂಚಲನ ಸೃಷ್ಟಿಸಿತ್ತು. ಈಗ ಸಿನಿಮಾ ಸಮಾಜದಲ್ಲಿ ಮಿಂಚಿನ ಸಂಚಲನ ಸೃಷ್ಟಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ. ಇದನ್ನು ಒಂದು ಸಿನಿಮಾದ ಹಾಗೆ ನೋಡಬೇಕೋ, ಕೇರಳ ಹಾಗೂ ಮಂಗಳೂರಿನ ಸುತ್ತ ನಡೀತಿರೋ ನೈಜ ಘಟನೆಗಳ ಅನಾವರಣ ಅಂತ ನೋಡಬೇಕೋ ನೀವೇ ಸಿನಿಮಾ ನೋಡಿ ನಿರ್ಧಾರ ಮಾಡಬೇಕು. ಆದ್ರೆ ಇದು ಬರಿಯ ಕಥೆಯಲ್ಲ. ಮೋಸ ಹೋದ ಹಿಂದೂ ಕ್ರಿಶ್ಚಿಯನ್ ಹೆಣ್ಣುಮಕ್ಕಳ ನೋವು ಮತ್ತು ಕಣ್ಣೀರಿನ ವ್ಯಥೆ.
ಸಿನಿಮಾದಲ್ಲಿ ಹೇಳೋ ಹಾಗೆ ಇದು ಸಾವಿರಾರು ಹೆಣ್ಣುಮಕ್ಕಳ ನಾಶವಾದ ಜೀವನದ ಅನಾವರಣ. ಆದ್ರೆ ಅವರ ಪ್ರತಿನಿಧಿಯಾಗಿ ಮೂವರು ಹೆಣ್ಣುಮಕ್ಕಳ ಕಥೆಯನ್ನು ಇಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಶಾಲಿನಿ ಉನ್ನಿಕೃಷ್ಣನ್, ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್ ಎಂಬ ಮೂವರು ಹುಡುಗೀರು ನರ್ಸಿಂಗ್ ಕಲಿಯೋಕೆಂದು ಒಂದು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಳ್ತಾರೆ. ಈ ಮೂವರು ಹುಡುಗಿಯರ ರೂಮ್ ಮೇಟ್ ಆದ ಆಸೀಫಾ ಹೇಗೆ ಅವರ ಬ್ರೇನ್ ವಾಷ್ ಮಾಡ್ತಾಳೆ. ಕೊನೆಗೆ ಅವಳದ್ದೇ ಧರ್ಮಕ್ಕೆ ಸೇರಿಸ್ತಾಳೆ. ಅವರ ಬದುಕನ್ನು ಹೇಗೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡ್ತಾಳೆ ಅನ್ನೋದೇ ಈ ಸಿನಿಮಾದ ವನ್ ಲೈನ್ ಸ್ಟೋರಿ.
ಒಂದು ಹಂತದಲ್ಲಿ ಸಿನಿಮಾ ಇಸ್ಲಾಮೋಪೋಬಿಯಾದ ಸುತ್ತ ಸಾಗ್ತಾ ಇದೆ ಅನಿಸಿದ್ರೂ ಕ್ಲೈಮ್ಯಾಕ್ಸ್ (Climax) ಹೊತ್ತಿಗೆ ಪ್ರೇಕ್ಷಕನನ್ನು ಕನ್ವಿನ್ಸ್ ಮಾಡೋದ್ರಲ್ಲಿ ಸಕ್ಸಸ್ ಆಗುತ್ತೆ. ನೈಜ ಪಾತ್ರಗಳನ್ನು ಎಂಡ್ ಕಾರ್ಡ್‌ನಲ್ಲಿ ತೋರಿಸಿವಾಗ ಕಣ್ಣಾಲಿಗಳು ಒದ್ದೆ ಆಗುತ್ತೆ.
ಕೇರಳದ ಒಂದು ಊರಲ್ಲಿ ಶುರುವಾಗುವ ಲವ್ ಸ್ಟೋರಿ ಸಿರಿಯಾದಲ್ಲೋ, ಆಫ್ಘಾನಿಸ್ತಾನಸದಲ್ಲೋ ಕೊನೆಯಾಗುತ್ತೆ ಅನ್ನೋದು ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಅನ್ಯ ಧರ್ಮದ ಹೆಣ್ಣು ಮಕ್ಕಳನ್ನು ಉಗ್ರರ ಸೆಕ್ಸ್ ಸ್ಲೇವ್ ಅಥವಾ ಸೂಸೈಡ್ ಬಾಂಬರ್ಸ್ ಮಾಡೋ ಉದ್ದೇಶ ಇಟ್ಕೊಂಡು ಅವರನ್ನು ಮರುಳು ಮಾಡಿ, ಹಂತಹಂತವಾಗಿ ಅವರು ತಮ್ಮ ಧರ್ಮಕ್ಕೆ ವಾಲುವಂತೆ ಮಾಡಿ, ಅವರ ಬದುಕಿಗೇ ಕೊಳ್ಳಿ ಇಡುವುದನ್ನು ನೋಡಿದಾಗ ನಮ್ಮ ಹೊಟ್ಟೆಗೇ ಬೆಂಕಿ ಬಿದ್ದ ಹಾಗಾಗುತ್ತೆ. ಬಣ್ಣದ ಮಾತುಗಳಿಗ ಮರುಳಾಗಿ ತಮ್ಮ ಜೀವನ ಶೈಲಿಯನ್ನೇ (Lifestyle) ಬದಲಾಯಿಸಿಕೊಂಡು, ಅನ್ಯ ಕೋಮಿನ ಯುವಕರ ತೋಳ್ತೆಕ್ಕೆಯಲ್ಲಿ ಕಳೆದ ಖುಷಿಯ ಕ್ಷಣಗಳನ್ನು ಹೇಗೆ ಹೆಣ್ಣುಮಕ್ಕಳ ಜೀವನವನ್ನು ಸರ್ವನಾಶ ಮಾಡಿ ಬಿಡುತ್ತೆ ಅನ್ನೋದು ನೋಡಿದಾಗ ರಕ್ತ ಕುದಿಯಿತ್ತೆ.
The Kerala story ಚಿತ್ರದ ಅಸಲಿಯತ್ತು ಬಿಚ್ಚಿಟ್ಟ ನಟಿ ಅದಾ ಶರ್ಮಾ
ಸಿನಿಮಾದಲ್ಲಿ ಭಾವನೆಗಳು ಹೇಗೆ ಇನ್ನೊಬ್ಬರ ಅಸ್ತ್ರವಾಗುತ್ತೆ ಅನ್ನೋದನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ತನ್ನ ದೇಶದ, ಧರ್ಮದ ಸಂಸ್ಕ್ರತಿಯ ಅರಿವು ಇಲ್ಲದೇ ಹೋದ್ರೆ ಬೇರೆಯವರು ಅದರ ಲಾಭ ಹೇಗೆ ಪಡ್ಕೋತಾರೆ ಅನ್ನೋದನ್ನೂ ತೋರಿಸಿದ್ದಾರೆ. ಅಪ್ಪ ಅಮ್ಮನ ಸಂಕಟ ಮಕ್ಕಳಿಗೆ ಅರ್ಥವಾಗದೇ ಇದ್ರೆ ಅವರ ಬದುಕು ಹೇಗೆ ಕೊನೆಯಾಗುತ್ತೆ ಎನ್ನುವುದನ್ನೂ ಅರ್ಥಮಾಡಿಸಿದ್ದಾರೆ. ಯಾರದ್ದೋ ಧಾರ್ಮಿಕ ಲಾಭಕ್ಕೆ ಮಾರುಹೋಗಿ ಪ್ರೀತಿ (Love) ಅನ್ನೋ ಮೋಸದ ಜಾಲದಲ್ಲಿ ಬಿದ್ದರೆ ಬದುಕು ಹೇಗೆ ಮೂರಾಬಟ್ಟೆ ಆಗುತ್ತೆ ಅನ್ನೋದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಒಟ್ಟಾರೆ ಇದೊಂದು ಸಿನಿಮಾ ಅನ್ನೋದಕ್ಕಿಂತ ಇಂದಿನ ಹೆಣ್ಣುಮಕ್ಕಳಿಗೆ ಜೀವನಪಾಠ.
'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೆ ಕಾಂಗ್ರೆಸ್ ವಿರೋಧ; ಇದನ್ನ ನಾನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸಾ
ನಿರ್ದೇಶಕ ಸುದಿಪ್ತೋ ಸೇನ್ ತಮ್ಮಜೀವನ ಅದ್ಭುತ ಚಿತ್ರ ತೆರೆಯ ಮೇಲೆ ತಂದಿದ್ದಾರೆ... ಕೆಲವು ಕಡೆ ಸ್ವಲ್ಪ ಸ್ಲೋ ಇದೆ ಅನಿಸಿದ್ರೂ ಮುಂದಿನ ಸೀನ್‌ಗಳು ಅದನ್ನು ಮರೆಸಿಬಿಡುತ್ತೆ.. ಅದಾ ಶರ್ಮ ಅದ್ಭುತ ಅಂದ್ರೆ ತಪ್ಪಾಗಲ್ಲ...ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಸಹ ತಮಗೆ ಸಿಕ್ಕ ಅವಕಾಶವನ್ನು ಅತ್ಯದ್ಭುತವಾಗಿ ಬಳಸಿಕೊಂಡು ಅದ್ಭುತವಾಗಿ ಆ್ಯಕ್ಟ್ ಮಾಡಿದ್ದಾರೆ.. ತುಂವಾ ಎಮೋಷನಲ್ ವ್ಯಕ್ತಿತ್ವದವರು, ಹಾರ್ಟ್ ವೀಕ್ ಇರೋರು ನೋಡಿ ಅರಗಿಸಿಕೊಳ್ಳೋದು ಕಷ್ಟವಾದ್ರೂ...ಇದು ಕುಟುಂಬ ಸಮೇತ, ಅದ್ರಲ್ಲೂ ನಿಮ್ಮನೆ ಹೆಣ್ಣು ಮಕ್ಕಳು ನೋಡಲೇಬೇಕಾದ ಸಿನಿಮಾ. ಯಾಕಂದ್ರೆ ಇದು ಬರಿಯ ಸಿನಿಮಾ ಅಲ್ಲ... ಹೆಣ್ಣುಮಕ್ಕಳ ಬದುಕು ಬದಲಿಸೋ ನೈಜಕಥೆ..