Karataka Dhamanaka Review ತಮಾಷೆಯ ದಾರಿ, ವಿಷಾದವೇ ಗುರಿ

By Kannadaprabha News  |  First Published Mar 9, 2024, 12:43 PM IST

ಪ್ರಭುದೇವ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು, ತನಿಕೆಳ್ಳ ಭರಣಿ, ರವಿಶಂಕರ್ ನಟನೆಯ ಕರಟಕ ದಮನಕ ಸಿನಿಮಾ ರಿಲೀಸ್ ಆಗಿದೆ..... 


ರಾಜೇಶ್ ಶೆಟ್ಟಿ

ಇಬ್ಬರು ಜಾಣ ನರಿಯಂಥ ಕಳ್ಳರು ಆಕಸ್ಮಿಕವಾಗಿ ಬೆಂಗಾಡಾದ ಊರಿಗೆ ಬಂದು ತಮ್ಮನ್ನು ತಾವು ಕಂಡುಕೊಳ್ಳುವ ಪ್ರಯಾಣವೇ ಕರಟಕ ದಮನಕ. ಅದನ್ನು ಭಟ್ಟರು ತಮ್ಮ ಶೈಲಿಯಲ್ಲಿ ನಿರೂಪಿಸಿದ್ದಾರೆ. ಎಂದಿನಂತೆ ಅವರ ಟ್ರೇಡ್‌ಮಾರ್ಕ್‌ ಆದ ತಮಾಷೆ ಮತ್ತು ವಿಷಾದ ಎರಡೂ ಇಲ್ಲಿ ಕತೆಯನ್ನು ಕೈ ಹಿಡಿದು ಮುನ್ನಡೆಸುತ್ತದೆ.

Tap to resize

Latest Videos

ಮೊದಲಾರ್ಧದಲ್ಲಿ ಭಟ್ಟರ ಲವಲವಿಕೆ ಕಾಣಿಸುತ್ತದೆ. ಇಬ್ಬರು ತರುಣರು ನಾನಾ ಥರದ ಟೋಪಿ ಹಾಕಿಕೊಂಡು ಸುತ್ತಾಟ ಮಾಡುವಲ್ಲಿ ತಮಾಷೆ ಗುಣ ಪ್ರಧಾನವಾಗಿದೆ. ಉತ್ತರ ಕರ್ನಾಟಕದ ಭಾಷೆ ಕಿವಿ ಇಂಪು ಮಾಡುತ್ತದೆ. ಭಾಷೆ, ಸನ್ನಿವೇಶ, ಆಕಸ್ಮಿಕತೆ ಎಲ್ಲವೂ ಸೇರಿಕೊಂಡು ಕತೆಗೊಂದು ವೇಗ ದಕ್ಕಿದೆ.

RANGANAYAKA REVIEW ಖ್ಯಾತ ನಿರ್ದೇಶಕನ ಕಥೆ ವ್ಯಥೆ ದುಃಖ ದುಮ್ಮಾನ

ನಿರ್ದೇಶನ: ಯೋಗರಾಜ ಭಟ್

ತಾರಾಗಣ: ಪ್ರಭುದೇವ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು, ತನಿಕೆಳ್ಳ ಭರಣಿ, ರವಿಶಂಕರ್

ರೇಟಿಂಗ್: 3

ದ್ವಿತೀಯಾರ್ಧವನ್ನು ಆವರಿಸಿರುವುದು ವಿಷಾದ. ಬರಗಾಲ ಆವರಿಸಿರುವ ಉತ್ತರ ಕರ್ನಾಟಕದ ಯಾವುದೋ ಒಂದು ಊರಿನ ಆತ್ಮ ಕಥನ. ಹೋಗ್ತಾ ಹೋಗ್ತಾ ಚಿತ್ರದ ಬಣ್ಣವೇ ಬದಲಾಗುತ್ತದೆ. ದಾರಿ ದೂರ ಅನ್ನಿಸುತ್ತದೆ. ಮಹೋನ್ನತ ಸಂದೇಶವೂ ದೊರೆಯುತ್ತದೆ. ಅಲ್ಲಿಗೆ ಈ ಚಿತ್ರ ಸಾರ್ಥಕತೆ ಹೊಂದುತ್ತದೆ.

ಈ ಚಿತ್ರದಲ್ಲಿ ಭಾರಿ ಮಜಾ ಕೊಡುವುದು ಪ್ರಭುದೇವ. ಅವರ ಅಸ್ಪಷ್ಟ ಕನ್ನಡವೇ ಇಲ್ಲಿ ವರವಾಗಿದೆ. ಅವರ ಟೈಮಿಂಗು, ಅದಕ್ಕೆ ಸೂಕ್ತವಾದ ನಟನೆಯ ಮೂಲಕ ಅವರು ಪ್ರೇಕ್ಷಕನಿಗೆ ಹತ್ತಿರವಾಗುತ್ತಾರೆ. ಉಳಿದಂತೆ ಎಲ್ಲಾ ಕಲಾವಿದರು ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹರಿಕೃಷ್ಣ ಎಂದಿನಂತೆ ಅವರ ಸ್ಟೈಲಿನ ಸಂಗೀತ ದಾಟಿಸಿದ್ದಾರೆ.

Blink Review ರಂಗಭೂಮಿ ಹಿನ್ನೆಲೆಯ ಟೈಮ್‌ ಟ್ರಾವೆಲಿಂಗ್‌ ಸ್ಟೋರಿ

ಇಲ್ಲಿ ವಿಶೇಷವಾಗಿ ಮನಸ್ಸಲ್ಲಿ ಉಳಿಯುವುದು ಚಿತ್ರದಲ್ಲಿರುವ ನೀರು ಕಾಣದ ಊರಿನ, ಚೆಂದ ಕಾಣದ ತೇರಿನ ಚಿತ್ರ. ನೀರು ಇದ್ದರೆ ಊರು, ಊರು ಇದ್ದರೆ ತೇರು ಎಂಬುದನ್ನು ನಿರ್ದೇಶಕರು ಈ ಸಿನಿಮಾ ಮೂಲಕ ಸಾರಿದ್ದಾರೆ.

click me!