ಜಗ್ಗೇಶ್, ಗುರುಪ್ರಸಾದ್, ರಚಿತಾ ಮಹಾಲಕ್ಷ್ಮೀ, ಎಂ ಕೆ ಮಠ, ಚೈತ್ರಾ ಕೊಟ್ಟೂರು, ಯೋಗರಾಜ್ ಭಟ್, ಅವಿನಾಶ್ ಶಟಮರ್ಷಣ ನಟನೆಯ ರಂಗನಾಯಕ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?
ಆರ್.ಕೆ.
ಇದು ಮಠ ಗುರುಪ್ರಸಾದ್ ಅವರ ಸಿನಿಮಾ. ನಿರ್ದೇಶನದ ಜತೆಗೆ ನಟನೆ ಕೂಡ ಮಾಡಿದ್ದರಿಂದ ಇಡೀ ಸಿನಿಮಾ ಅವರ ಪಾತ್ರದ ಸುತ್ತವೇ ತಿರುಗುತ್ತದೆ. ಜನಪ್ರಿಯ ನಿರ್ದೇಶಕನೊಬ್ಬ ಪುನರ್ ಜನ್ಮ ಕಾರ್ಯಕ್ರಮಕ್ಕೆ ಬಂದು ಮೊಟ್ಟ ಮೊದಲ ಕನ್ನಡ ಸಿನಿಮಾ ಮಾಡಲು ಹೋದಾಗ ಏನೆಲ್ಲ ಆಯಿತು ಎಂದು ಹೇಳುವುದೇ ಚಿತ್ರದ ತಿರುಳು. ಆ ನಿರ್ದೇಶಕನ ಪಾತ್ರಧಾರಿಯೇ ಗುರುಪ್ರಸಾದ್.
undefined
ತಾರಾಗಣ: ಜಗ್ಗೇಶ್, ಗುರುಪ್ರಸಾದ್, ರಚಿತಾ ಮಹಾಲಕ್ಷ್ಮೀ, ಎಂ ಕೆ ಮಠ, ಚೈತ್ರಾ ಕೊಟ್ಟೂರು, ಯೋಗರಾಜ್ ಭಟ್, ಅವಿನಾಶ್ ಶಟಮರ್ಷಣ
BLINK REVIEW ರಂಗಭೂಮಿ ಹಿನ್ನೆಲೆಯ ಟೈಮ್ ಟ್ರಾವೆಲಿಂಗ್ ಸ್ಟೋರಿ
ನಿರ್ದೇಶನ: ಗುರುಪ್ರಸಾದ್
ರೇಟಿಂಗ್: 3
ಹಾಗಾಗಿ ನಾಯಕ ನಟ, ರಂಗನಾಯಕನ ಪಾತ್ರಧಾರಿ ಜಗ್ಗೇಶ್ ಕಡಿಮೆ ಕಾಣಿಸಿಕೊಳ್ಳುತ್ತಾರೆ. ಒಮ್ಮೊಮ್ಮೆ ಅವರದು ಸೈಡ್ ರೋಲ್ ಅನ್ನಿಸಿದರೂ ಅಚ್ಚರಿ ಇಲ್ಲ. ಆ ನಿಟ್ಟಿನಲ್ಲಿ ಚಿತ್ರದ ನಿರ್ದೇಶಕರು ತಮ್ಮ ಬಯೋಗ್ರಫಿಯನ್ನು ತಾವೇ ತೆರೆ ಮೇಲೆ ತಂದಿದ್ದಾರೆಂಬ ಗುಮಾನಿಯೂ ನೋಡುಗನಿಗೆ ವ್ಯಕ್ತವಾಗಬಹುದು.
ನಿರ್ದೇಶಕ ತನ್ನ ಪುನರ್ ಜನ್ಮದ ಕತೆ ಹೇಳುತ್ತಿದ್ದರೆ ಆಗಾಗ ರಂಗನಾಯಕನಾಗಿ ಜಗ್ಗೇಶ್ ಮತ್ತು ಅವರ ತಂಡ ಬರುತ್ತದೆ. ಅದಕ್ಕೆ ಹೊರತಾಗಿ ಅವರ ಕೆಲಸ ಅಷ್ಟೇನೂ ಇಲ್ಲ. ತನ್ನ ಗತ ಜನ್ಮದ ಕುರಿತು ನಿರ್ದೇಶಕ ಪಾತ್ರಧಾರಿ ಹೇಳುವ ಕತೆಗೂ ‘ರಂಗನಾಯಕ’ ಚಿತ್ರಕ್ಕೂ ಇರುವ ನಂಟು ಏನು ಎಂಬುದೇ ಚಿತ್ರದ ಪ್ರಮುಖ ಪ್ರಶ್ನೆ.
Kreem Review ಕುತೂಹಲಕರ ವಿಷಾದಕರ ವಿಭಿನ್ನ ಕಥನ
ಇಡೀ ಚಿತ್ರದಲ್ಲಿ ಪ್ರೇಕ್ಷಕನನ್ನು ಮೆಚ್ಚಿಸುವುದು ಅನೂಪ್ ಸೀಳಿನ್ ಅವರ ಸಂಗೀತ ಪ್ರತಿಭೆ ಮತ್ತು ಹಾಡುಗಾರಿಕೆ, ಜಗ್ಗೇಶ್ ಅವರ ಮ್ಯಾನರಿಸಂ ಮಾತ್ರ. ಅದಕ್ಕೆ ಹೊರತಾಗಿ ಭಾರ ಮಾತುಗಳು, ಉಡಾಫೆ ಬರವಣಿಗೆ ಸುಸ್ತಾಗಿಸುತ್ತವೆ. ಹತ್ತೋ ಹದಿನೈದು ನಿಮಿಷಗಳ ಸಾಕ್ಷ್ಯ ಚಿತ್ರಕ್ಕೆ ಬೇಕಾಗುವ ಸರಕು ಇಟ್ಟುಕೊಂಡು ಒಂದು ಸಿನಿಮಾ ಮಾಡಿದರೆ ಹೇಗಿರುತ್ತದೆ ಎಂಬುದಕ್ಕೆ ‘ರಂಗನಾಯಕ’ ಸಿನಿಮಾ ಸಾಕ್ಷಿ.