ವಿಜಯ್ ರಾಘವೇಂದ್ರ, ತೇಜಸ್ವಿನಿ ಶೇಖರ್, ತಿಲಕ್, ರಾಜೇಶ್ ನಟರಂಗ, ಗೋವಿಂದೇ ಗೌಡ ನಟನೆಯ ಜೋಗ್ 101 ಸಿನಿಮಾ ರಿಲೀಸ್ ಆಗಿದೆ.
ಆರ್.ಬಿ.
ಇದೊಂದು ಹುಡುಕಾಟದ ಕತೆ. ಒಬ್ಬ ಹುಡುಗಿ, ಒಬ್ಬ ಹುಡುಗ ಜೋಗ ಜಲಪಾತ ನೋಡಲೆಂದು ಮಲೆನಾಡಿಗೆ ಹೋದವರು ವಾಪಸ್ ಬರುವುದಿಲ್ಲ. ಅವರನ್ನು ಹುಡುಕಿಕೊಂಡು ಹೋಗುವ ನಾಯಕನಿಗೆ ಎದುರಾಗುವ ಅನಿರೀಕ್ಷಿತ ಘಟನೆಗಳ ಮೊತ್ತವೇ ಈ ಸಿನಿಮಾ.
ನಿರ್ದೇಶನ: ವಿಜಯ್ ಕನ್ನಡಿಗ
ತಾರಾಗಣ: ವಿಜಯ್ ರಾಘವೇಂದ್ರ, ತೇಜಸ್ವಿನಿ ಶೇಖರ್, ತಿಲಕ್, ರಾಜೇಶ್ ನಟರಂಗ, ಗೋವಿಂದೇ ಗೌಡ
ರೇಟಿಂಗ್: 3
RANGANAYAKA REVIEW ಖ್ಯಾತ ನಿರ್ದೇಶಕನ ಕಥೆ ವ್ಯಥೆ ದುಃಖ ದುಮ್ಮಾನ
ಇದು ಸಸ್ಪೆನ್ಸ್ ಜಾನರಿನ ಸಿನಿಮಾ. ಒಂದು ವಿಚಾರ ಹುಡುಕುತ್ತಾ ಹೋದಾಗ ನಾಯಕನಿಗೆ ಒಂದು ಹಂತದಲ್ಲಿ ತಾನು ಹುಡುಕುತ್ತಾ ಹೋದ ವಿಚಾರ ಅಷ್ಟು ಸರಳವಾಗಿಲ್ಲ ಎಂಬುದು ಗೊತ್ತಾಗುತ್ತದೆ. ತಿರುವುಗಳು ಸಿಕ್ಕಿ ದಾರಿ ಸಂಕೀರ್ಣವಾಗುತ್ತದೆ. ಕಡೆಗೆ ಎಲ್ಲವೂ ತಿಳಿಯಾಗಿ ಹುಡುಕಾಟಕ್ಕೆ ಅಂತ್ಯ ದೊರಕುತ್ತದೆ. ಈ ಮಧ್ಯೆ ಲವ್ ಸಾಂಗು, ಮಳೆ ಮಂಜು ಇತ್ಯಾದಿ ಬಂದು ಹೋಗುತ್ತದೆ. ಅಷ್ಟರ ಮಟ್ಟಿಗೆ ಇದೊಂದು ಪ್ರೇಮ, ನಿಗೂಢತೆ, ಸೌಂದರ್ಯ, ಮಾಧುರ್ಯ ಎಲ್ಲವೂ ಅಡಗಿರುವ ಸಿನಿಮಾ.
Blink Review ರಂಗಭೂಮಿ ಹಿನ್ನೆಲೆಯ ಟೈಮ್ ಟ್ರಾವೆಲಿಂಗ್ ಸ್ಟೋರಿ
ಚಿತ್ರದ ಬರವಣಿಗೆ ಸೊಗಸಾಗಿದೆ. ದ್ವಿತೀಯಾರ್ಧದ ತಿರುವುಗಳು ಅಚ್ಚರಿ ಹುಟ್ಟಿಸುತ್ತವೆ. ಜೋಗದ ಚೆಂದವನ್ನು ಛಾಯಾಗ್ರಾಹಕ ಸುನೀತ್ ಹಾಲ್ಗೇರಿ ಪರಿಣಾಮಕಾರಿಯಾಗಿ ಚಿತ್ರೀಕರಿಸಿದ್ದಾರೆ. ಅವರ ಕ್ಯಾಮೆರಾ ಕಣ್ಣು ಜೋಗದ ವೈಭವವನ್ನು ಕಟ್ಟಿಕೊಟ್ಟಿದ್ದೆ. ಸಂಗೀತ ನಿರ್ದೇಶಕ ಅವಿನಾಶ್ ಬಸುಟ್ಕರ್ ಸಂಗೀತ ಪ್ರತಿಭೆ ಗಮನ ಸೆಳೆಯುವಂತಿದೆ. ವಿಜಯ್ ರಾಘವೇಂದ್ರ, ರಾಜೇಶ್ ನಟರಂಗ ಪಾತ್ರಗಳ ಘನತೆ ಹೆಚ್ಚಿಸಿದ್ದಾರೆ. ಒಟ್ಟಾರೆ ಇದೊಂದು ಶ್ಲಾಘನೀಯ ಪ್ರಯತ್ನ.