Cobra Review: ನೆಗೆಟಿವ್ ಕಾಮೆಂಟ್‌ ಬರ್ತಿದೆ ಎಂದು ಚಿತ್ರದ 20 ನಿಮಿಷ ಸೀನ್ ಡಿಲೀಟ್?

Published : Sep 01, 2022, 04:35 PM IST
Cobra Review: ನೆಗೆಟಿವ್ ಕಾಮೆಂಟ್‌ ಬರ್ತಿದೆ ಎಂದು ಚಿತ್ರದ 20 ನಿಮಿಷ ಸೀನ್ ಡಿಲೀಟ್?

ಸಾರಾಂಶ

 ಕೋಬ್ರಾ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೇಗಿದೆ? ಚಿಯಾನ್ ವಿಕ್ರಮ್- ಶ್ರೀನಿಧಿ ಶೆಟ್ಟಿ ಕಾಂಬಿನೇಷನ್‌ ಬಗ್ಗೆ ನೆಟ್ಟಿಗರ ಮಾತು...

ತಮಿಳು ಚಿತ್ರರಂಗದ ಸಿಂಪಲ್ ನಟ ಚಿಯಾನ್ ವಿಕ್ರಮ್ ಮತ್ತು ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಜೋಡಿಯಾಗಿ ಅಭಿನಯಿಸಿರುವ ಕೋಬ್ರಾ ಸಿನಿಮಾ ಆಗಸ್ಟ್‌ 31ರಂದು ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಅಜಯ್ ಜ್ಞಾನಮುತ್ತು ನಿರ್ದೇಶನ ಮತ್ತು ಲಲಿತ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರವಿದು. ಕರ್ನಾಟಕದಲ್ಲಿ ಹಾರಿಜೋನ್ ಸ್ಟುಡಿಯೋ ಸಿನಿಮಾವನ್ನು ಅರ್ಪಿಸುತ್ತಿದ್ದು ಬೆಂಗಳೂರಿನಲ್ಲಿ ಪ್ರಚಾರ ಮಾಡಿದ್ದಾರೆ. 

ಸೋಷಿಯಲ್ ಮೀಡಿಯಾ ವಿಮರ್ಶೆ:

ಕೋಬ್ರಾ ಸಿನಿಮಾ ವಿಭಿನ್ನವಾಗಿ ಹೊಸ ಪ್ರಯೋಗಳನ್ನು ಮಾಡಿದೆ. ಸಿನಿಮಾ ನೋಡಿ ಥ್ರಿಲ್ ಆದವರಿಗಿಂತ ನಿರಾಶೆಯಲ್ಲಿ ಮುಳುಗಿರುವವರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಸಿನಿಮಾ 3 ಗಂಟೆ ಇರುವುದಕ್ಕೆ ಯಾವಾಗ ಮುಗಿಯುತ್ತದೆ ಅನಿಸುತ್ತದೆ ಎಂದಿದ್ದಾರೆ. ಸಮಯದ ವಿಚಾರದಲ್ಲಿ ಹೆಚ್ಚಿಗೆ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿರುವ ಕಾರಣ 20 ನಿಮಿಷಗಳ ಸೀನ್‌ನ ಕಟ್ ಮಾಡಲಾಗಿದೆ.ಮೊದಲ ದಿನ ಮಾತ್ರ ಪೂರ್ತಿ ಸಿನಿಮಾ ಪ್ರಸಾರವಾಗಿರುವುದು ಸೆಪ್ಟೆಂಬರ್ 1ರಿಂದ 2 ಗಂಟೆ 40 ಸಿನಿಮಾ ಪ್ರಸಾರವಾಗಿದೆ. 

ಮೊದಲ ದಿನವೇ 13.8 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. 12 ಕೋಟಿ ರೂಪಾಯಿ ತಮಿಳು ನಾಡಿನಲ್ಲಿ 1.5 ಕೋಟಿ ಕೇರಳದಲ್ಲಿ ಮತ್ತು ಅಂಧ್ರದಲ್ಲಿ 40 ಲಕ್ಷ ಕಲೆಕ್ಷನ್ ಮಾಡಿದೆ. ಮೇಕಿಂಗ್ ಮತ್ತು ಹಾಡುಗಳ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಹೊರ ಬಂದಿದೆ ಆದರೆ ವಿಮರ್ಶೆ ವಿಚಾರದಲ್ಲಿ ಅಷ್ಟಕ್ಕೆ ಅಷ್ಟೆ ಎನ್ನಬಹುದು. ಎರಡೂ ಸಿನಿಮಾಗಳಲ್ಲಿ ಹಿಟ್ ಕಂಡ ಶ್ರೀನಿಧಿ ಶೆಟ್ಟಿ ಮೂರನೇ ಸಿನಿಮಾ ಆಯ್ಕೆ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ನಟ ಸೂಪರ್ ಇರಬಹುದು ಆದರೆ ಕಥೆ ನಿಮಗೆ ಸೂಟ್ ಆಗೋಲ್ಲ ಅಂದಿದ್ದಾರೆ. 

ಬೆಂಗಳೂರಿನಲ್ಲಿದ್ದಾಗ ವಿಕ್ರಮ್ ಮಾತು:

'ನನ್ನ ಹಿಂದಿನ ಚಿತ್ರಗಳು ತಮಿಳಿನಲ್ಲಿ ಮಾತ್ರ ಬರುತ್ತಿದ್ದವು. ಬೇರೆ ಭಾಷೆಗೆ ಡಬ್‌ ಆಗುತ್ತಿದ್ದವು. ಈಗ ನನ್ನ ನಟನೆಯ ಚಿತ್ರಗಳು ಕೂಡ ಪ್ಯಾನ್‌ ಇಂಡಿಯಾ ಆಗುತ್ತಿವೆ. ಏಕಕಾಲದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಆ ನಿಟ್ಟಿನಲ್ಲಿ ಕೋಬ್ರಾ ಸಿನಿಮಾ ಬರುತ್ತಿದೆ.ಇದು ಆಕ್ಷನ್‌ ಥ್ರಿಲ್ಲರ್‌, ಸೈನ್ಸ್‌ ಫಿಕ್ಷನ್‌ ಚಿತ್ರ. 9 ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಹಳೆ ಸಿನಿಮಾಗಳಿಗೆ ಹೋಲಿಸಿದರೆ ಈ ಚಿತ್ರವೇ ಬೇರೆ. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ನಾನೇ ಮೊದಲ ಬಾರಿಗೆ ಕನ್ನಡದಲ್ಲಿ ಡಬ್‌ ಮಾಡಿದ್ದೇನೆ.ಕರ್ನಾಟಕ ಎಂದಾಗ ನನಗೆ ಪುನೀತ್‌ರಾಜ್‌ಕುಮಾರ್‌ ಅವರು ಮೊದಲು ನೆನಪಾಗುತ್ತಾರೆ. ನನ್ನ ನಟನೆಯ ‘ಐ’ ಚಿತ್ರದ ಮುಹೂರ್ತಕ್ಕೆ ಅವರು ಬಂದು ಲಾಂಚ್‌ ಮಾಡಿದ್ದರು. ಈಗ ಅವರು ಇಲ್ಲ ಎನ್ನುವುದು ನೋವಿನ ಸಂಗತಿ' ಎಂದು ಹೇಳಿದ್ದಾರೆ.

ಕೋಬ್ರಾ ಪ್ರಚಾರಕ್ಕೆ ಬಂದು ಅಪ್ಪು ಸ್ನೇಹ ನೆನಪಿಸಿದ ವಿಕ್ರಂ!

'ನಾನು ಮತ್ತು ಯಶ್‌ ಒಳ್ಳೆಯ ಸ್ನೇಹಿತರು. ಒಂದು ಜಾಹೀರಾತಿನಲ್ಲಿ ಕೆಲಸ ಮಾಡಿದ್ದೇವೆ. ‘ಕೆಜಿಎಫ್‌’ ಹಾಗೂ ‘ಬಾಹುಬಲಿ’ ಚಿತ್ರಗಳು ಸೂಪರ್‌ ಹಿಟ್‌ ಆಗಿವೆ. ಹೀಗಾಗಿ ಪ್ಯಾನ್‌ ಇಂಡಿಯಾ ಚಿತ್ರಗಳ ಮೇಲೆ ಎಲ್ಲರಿಗೂ ನಿರೀಕ್ಷೆಗಳು ಇವೆ. ಅದು ‘ಕೋಬ್ರಾ’ ಸಿನಿಮಾ ನಿರೀಕ್ಷೆಗಳನ್ನು ಹುಸಿ ಮಾಡಲ್ಲ. ‘ಕೆಜಿಎಫ್‌’ ಚಿತ್ರದ ನಟಿ ಶ್ರೀನಿಧಿ ಶೆಟ್ಟಿನಮ್ಮ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ಖುಷಿ ಕೊಟ್ಟಿದೆ.ಈಗ ಪ್ಯಾನ್‌ ಇಂಡಿಯಾ ಸಿನಿಮಾಗಳ ಅಬ್ಬರ. ಭಾಷೆಯ ಗಡಿ ಎಂಬುದು ಇರಲ್ಲ. ಯಾರೇ ಒಳ್ಳೆಯ ಕತೆಯೊಂದಿಗೆ ಬಂದರೆ ನಾನು ಸಿನಿಮಾ ಮಾಡುತ್ತೇನೆ. ಕನ್ನಡದಲ್ಲಿ ನಟಿಸುವಂತೆ ಈಗಾಗಲೇ ಹಲವು ನಿರ್ದೇಶಕರು ನನ್ನ ಕೇಳಿದ್ದಾರೆ. ಈ ಪೈಕಿ ಲೂಸಿಯಾ ಪವನ್‌ ಕುಮಾರ್‌ ಅವರ ಕತೆ ಕೇಳಿದ್ದೇನೆ. ಕತೆ ತುಂಬಾ ಚೆನ್ನಾಗಿದೆ. ಅವರ ಜತೆಗೆ ನಾನು ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಆ ಬಗ್ಗೆ ಹೇಳುತ್ತೇನೆ.' ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?