Bang Review: ಭೂಗತ ಲೋಕದ ನೆರಳಲ್ಲಿ ತಿರುವು ಮುರುವು ಪ್ರಯಾಣ

By Kannadaprabha News  |  First Published Aug 19, 2023, 9:50 AM IST

ಶಾನ್ವಿ ಶ್ರೀವಾಸ್ತವ್, ರಘು ದೀಕ್ಷಿತ್‌, ಶ್ರಾವ್ಯ, ರಿತ್ವಿಕ್ ಮುರಳೀಧರ್, ನಾಟ್ಯ ರಂಗ, ಸುನೀಲ್ ಗುಜ್ಜರ್‌, ಜಹಾಂಗೀರ್, ನಾಗೇಂದ್ರ ಶಾ ನಟನೆಯ ಬ್ಯಾಂಗ್ ಸಿನಿಮಾ ರಿಲೀಸ್..
 


ಆರ್‌ ಕೇಶವಮೂರ್ತಿ

ಕತ್ತಲ ಜಗತ್ತಿನ ಸನ್ನಿವೇಶ ಮತ್ತು ಘಟನೆಗಳನ್ನು ಹೇಳುತ್ತಾ ಹೋಗುವ ಸಿನಿಮಾ ‘ಬ್ಯಾಂಗ್‌’. ಡ್ರಗ್‌ ಮಾಫಿಯಾ ಸುತ್ತ ಸಾಕಷ್ಟು ಸಿನಿಮಾಗಳು ಬಂದಿವೆ. ಈ ಚಿತ್ರದ ಕತೆಯ ಕೇಂದ್ರಬಿಂದು ಕೂಡ ಮಾದಕ ವಸ್ತುಗಳೇ. ಬೆಂಗಳೂರಿನಿಂದ ಶುರುವಾಗಿ ಮಂಗಳೂರಿಗೆ ಪ್ರಯಾಣ ಬೆಳೆಸುವ ಕತೆಯಲ್ಲಿ ಡ್ಯಾಡಿ ಎನ್ನುವ ಡಾನ್‌, ಡ್ಯಾಡಿ ಮಗಳು ಲಿಯೋನ ಎನ್ನುವ ಲೇಡಿ ಡಾನ್‌, ಡ್ರಗ್ಸ್‌ಗಾಗಿ ಆಗಾಗ ಟಕ್ಕರ್‌ ಒಂದಿಷ್ಟು ಪುಡಿ ರೌಡಿಗಳು, ಅಪಹರಣಕ್ಕೊಳಗಾದ ಬಾಲಕನನ್ನು ಬಿಡಿಸಿಕೊಳ್ಳುವುದಕ್ಕೆ ಹೋಗುವ ಯುವಕರ ಗ್ಯಾಂಗ್ ಸೇರಿದಂತೆ ಹತ್ತು- ಹಲವು ವಿಷಯಗಳು ಚಿತ್ರದಲ್ಲಿ ಬಂದು ಹೋಗುತ್ತವೆ.

Tap to resize

Latest Videos

undefined

ತಾರಾಗಣ: ಶಾನ್ವಿ ಶ್ರೀವಾಸ್ತವ್, ರಘು ದೀಕ್ಷಿತ್‌, ಶ್ರಾವ್ಯ, ರಿತ್ವಿಕ್ ಮುರಳೀಧರ್, ನಾಟ್ಯ ರಂಗ, ಸುನೀಲ್ ಗುಜ್ಜರ್‌, ಜಹಾಂಗೀರ್, ನಾಗೇಂದ್ರ ಶಾ

ನಿರ್ದೇಶನ: ಗಣೇಶ್‌ ಪರಶುರಾಮ್

KSHETHRAPATHI REVIW: ರೈತ ಪರ ದನಿಯಾಗುವ ಚಿತ್ರ, ನವೀನ್‌ ಮೆಚ್ಚಿದ ವೀಕ್ಷಕರು

ಡ್ರಗ್‌, ಕಿಡ್ನಾಪ್‌, ಚೇಸಿಂಗ್‌, ಡ್ಯಾಡಿ ಮತ್ತು ಲೇಡಿ ಡಾನ್‌... ಇತ್ಯಾದಿ ಅಂಶಗಳ ಸುತ್ತ ‘ಬ್ಯಾಂಗ್‌’ ಚಿತ್ರದ ಕತೆಯನ್ನು ರೂಪಿಸಲಾಗಿದೆ. ಈ ಚಿತ್ರದಲ್ಲಿ ನಟಿ ಶಾನ್ವಿ ಶ್ರೀವಾಸ್ತವ ಮೊದಲ ಬಾರಿಗೆ ವಿಶಿಷ್ಟ ರೀತಿಯ ಪಾತ್ರ ಮಾಡಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಜೇಡರ ಬಲೆ, ಮಿಂಚಿನ ಓಟ, ಆಪರೇಷನ್‌ ಡೈಮಂಡ್‌ ರಾಕೇಟ್‌... ಮುಂತಾದ ಕನ್ನಡದ ಕ್ಲಾಸಿಕ್‌ ಸಿನಿಮಾಗಳ ಟೈಟಲ್‌ ನೆರಳಿನಲ್ಲಿ ‘ಬ್ಯಾಂಗ್‌’ ಸಿನಿಮಾ ಕತೆ ಚಾಪ್ಟರ್‌ಗಳ ಮಾದರಿಯಲ್ಲಿ ತೆರೆದುಕೊಳ್ಳುವುದು.

ಮುಂಬೈಗೆ ಹಾರಿ ಹಿಂದಿ ಸಿನಿಮಾ ಗಿಟ್ಟಿಸಿಕೊಂಡ ಬಿಗ್ ಬಾಸ್ ಶ್ರುತಿ ಪ್ರಕಾಶ್; ಕನ್ನಡತಿ ಮೇಲೆ ನೆಟ್ಟಿಗರು ಗರಂ

ಭಿನ್ನ ನೆಲೆಗಟ್ಟಿನ ತಾಂತ್ರಿಕತೆ, ನಿರೂಪಣೆಯಲ್ಲಿ ಹೊಸ ಶೈಲಿಯನ್ನು ಕಂಡುಕೊಳ್ಳುವ ನಿರ್ದೇಶಕರ ಪ್ರಾಮಾಣಿಕ ಪ್ರಯತ್ನ ಇಲ್ಲಿ ಕಾಣುತ್ತದೆ. ಹೀಗಾಗಿ ‘ಬ್ಯಾಂಗ್‌’ ಸಿನಿಮಾ ತಾಂತ್ರಿಕವಾಗಿಯೂ ಉತ್ತಮವಾಗಿದೆ. ನಾಟ್ಯ ರಂಗ ಪಾತ್ರ ತುಂಬಾ ಗಮನ ಸೆಳೆಯುತ್ತದೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್ ಇಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ವಿಶೇಷತೆ.

click me!