Gaarudiga Review: ಹೊಡಿ ಬಡಿ ದೆವ್ವ ಹಿಡಿ ಗಾರುಡಿ

By Kannadaprabha News  |  First Published Dec 2, 2023, 1:11 PM IST

ರುದ್ವಿನ್, ಮಾನಸ ಗೌಡ ನಟನೆಯ ಗಾರುಡಿಗ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?


ಪ್ರಿಯಾ ಕೆರ್ವಾಶೆ

ಹಳ್ಳಿಯ ಯುವಕ ಜಯ್‌ ಸಿಟಿಗೆ ಬಂದು ಒಂದಿಷ್ಟು ಶ್ರೀಮಂತ ಯುವಕ, ಯುವತಿಯರ ಫ್ರೆಂಡ್‌ಶಿಪ್‌ ಮಾಡುತ್ತಾನೆ. ಅವರ ಅಪಹರಣವಾದಾಗ ಧೂಳೆಬ್ಬಿಸುತ್ತಾ ಸ್ಲೋ ಮೋಶನ್‌ನಲ್ಲಿ ಬಂದು ಒಂದೇ ಏಟಿಗೆ ರೌಡಿಗಳನ್ನು ಮಕಾಡೆ ಮಲಗಿಸುತ್ತಾನೆ. ಈತ ಕೆಚ್ಚೆದೆಯ ಡೈಲಾಗ್‌ ಹೊಡೆಯುತ್ತಾ, ಕಣ್ಣು ತಿರುಗಿಸುವ ಪರಿಗೇ ರೌಡಿಗಳು ಅರೆಜೀವ ಆಗುತ್ತಾರೆ. ನೋಡುಗರ ಪಾಡನ್ನು ಬೇರೆ ಹೇಳಬೇಕೇ?

Tap to resize

Latest Videos

undefined

ತಾರಾಗಣ: ರುದ್ವಿನ್, ಮಾನಸ ಗೌಡ

ನಿರ್ದೇಶಕ: ವಿಧ ಆರ್‌

Ardhambardha Premakathe Review: ಪಯಣದಲ್ಲಿ ಅರಳಿದ ಅರೆಬರೆ ಪ್ರೇಮ

ಈ ಸ್ನೇಹಿತರೆಲ್ಲ ಮದುವೆಯ ನೆವದಲ್ಲಿ ಒಂದು ಬಂಗಲೆಗೆ ಹೋಗಿ ಉಳಿದುಕೊಳ್ಳುತ್ತಾರೆ. ಅಲ್ಲಿ ದೆವ್ವಗಳು ಮಾಡುವ ರಗಳೆ ಅಷ್ಟಿಷ್ಟಲ್ಲ. ಇದೆಲ್ಲದರಿಂದ ಪಾರಾಗಿ ಕತೆಗೊಂದು ಕೊನೆಸಿಕ್ಕುವ ಹೊತ್ತಿಗೆ ಸಿನಿಮಾ ಮುಗಿದಿರುತ್ತದೆ.

Ranchi Review: ನಿರ್ದೇಶಕನೊಬ್ಬನ ನಿಗೂಢ ಸಾಹಸ

ಸಿನಿಮಾದಲ್ಲಿ ನಟನೆ, ಕತೆಯ ಹರಿವು, ಲಾಜಿಕ್‌ಗಳೆಲ್ಲ ಮ್ಯಾಜಿಕ್ಕಿನಂತೆ ಮಾಯವಾಗುತ್ತವೆ. ಇದ್ದದ್ದರಲ್ಲಿ ಲೊಕೇಶನ್ ಚೆನ್ನಾಗಿದೆ. ಬೆಂಗಳೂರಿನ ಸುತ್ತ ಮುತ್ತ ನೋಡೋದಕ್ಕೆ ಎಷ್ಟೊಳ್ಳೆ ಜಾಗಗಳಿವೆ ಅನ್ನೋದನ್ನೂ ಈ ಸಿನಿಮಾ ಮೂಲಕ ತಿಳಿಯಬಹುದು.

click me!