ಅರವಿಂದ್ ಕೆಪಿ, ದಿವ್ಯಾ ಉರುಡುಗ, ಅಲೋಕ್, ಅಭಿಲಾಶ್ ದ್ವಾರಕೀಶ್ ನಟಿಸಿರುವ ಅರ್ದಂಬರ್ಧ ಪ್ರೇಮಕಥೆ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?
ಪ್ರೀತಿಯೇ ಇಲ್ಲದ ಪ್ರೇಮ ಕತೆಯನ್ನು ಹೇಳುವುದಕ್ಕೆ ಸಾಧ್ಯವೇ ಎನ್ನುವ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಪ್ರಯೋಗವೇ ‘ಅರ್ದಂಬರ್ಧ ಪ್ರೇಮಕಥೆ’. ಹುಡುಗ- ಹುಡುಗಿ ಮಾತು, ಕತೆ ಮತ್ತು ಜಗಳ ಇತ್ಯಾದಿಗಳನ್ನು ಸೆರೆ ಹಿಡಿಯುತ್ತಲೇ ಪ್ರೀತಿಯೇ ಇಲ್ಲದ ಲವ್ ಸ್ಟೋರಿಗೆ ನಿರ್ದೇಶಕರು ಮುನ್ನುಡಿ ಬರೆಯುತ್ತಾರೆ. ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುವ ನಾಯಕಿ, ಆಕಸ್ಮಿಕವಾಗಿ ನಾಯಕನನ್ನು ಡ್ರಾಪ್ ಕೇಳುತ್ತಾಳೆ. ಅಲ್ಲಿಂದ ಇಬ್ಬರ ಜರ್ನಿ ಶುರುವಾಗುತ್ತದೆ.
ತಾರಾಗಣ: ಅರವಿಂದ್ ಕೆಪಿ, ದಿವ್ಯಾ ಉರುಡುಗ, ಅಲೋಕ್, ಅಭಿಲಾಶ್ ದ್ವಾರಕೀಶ್
undefined
ನಿರ್ದೇಶನ: ಅರವಿಂದ್ ಕೌಶಿಕ್
RANCHI REVIEW: ನಿರ್ದೇಶಕನೊಬ್ಬನ ನಿಗೂಢ ಸಾಹಸ
ಗೊತ್ತುಗುರಿ ಇಲ್ಲದೆ ಜತೆಯಾಗಿ ಪ್ರಯಾಣಿಸುವ ನಾಯಕ, ನಾಯಕಿ ಪಾತ್ರಗಳ ಮೂಲಕ ಅಪರಿಚಿತ ಪ್ರೇಮ ಕತೆಯೊಂದು ತೆರೆದುಕೊಳ್ಳುತ್ತದೆ. ಪ್ರೀತಿನೇ ಬೇಡ, ನಮ್ಮಿಬ್ಬರ ಪ್ರಯಾಣ, ಸ್ನೇಹಕ್ಕೆ ಹೆಸರು ಬೇಡ, ನಾನು ನಾನಾಗಿಯೇ ಇರುತ್ತೇನೆ, ನೀನು ನೀನಾಗಿಯೇ ಇರು ಎನ್ನುವ ಇವರಿಬ್ಬರು ಮುಂದೆ ಒಂದಾಗುತ್ತಾರೆಯೇ ಎಂಬುದು ಚಿತ್ರದ ಕತೆ. ‘ಅಪರಿಚಿತರಾಗಿ ಬಂದು ಪರಿಚಿತರಾಗಿ ಹೋಗುವುದೇ ಸ್ನೇಹ’ ಎನ್ನುವ ಹೈಸ್ಕೂಲಿನ ದಿನಗಳಲ್ಲಿ ಗ್ರೀಟಿಂಗ್ ಕಾರ್ಡ್‌ಗಳ ಮೇಲೆ ಬರೆಯುತ್ತಿದ್ದ ಸಾಲುಗಳು ಚಿತ್ರದ ಕೊನೆಯಲ್ಲಿ ನೆನಪಾಗುತ್ತವೆ.
Swathi Mutthina Male Haniye Review: ಮುಟ್ಟಿದರೆ ಕರಗುವ ಮಂಜು ಹನಿ ಮತ್ತು ನಶ್ವರತೆ
ಅರವಿಂದ್ ಕೆ ಪಿ ತಮ್ಮ ನಟನೆಯಲ್ಲಿ ಕೆಲವು ಕಡೆ ಸಫಲರಾಗಿದ್ದಾರೆ. ದಿವ್ಯಾ ಉರುಡುಗ ನೋಡಲು ಚೆಂದ. ಅಭಿಲಾಶ್ ದ್ವಾರಕೀಶ್ ನಗಿಸುತ್ತಾರೆ. ಸಂಭಾಷಣೆ, ನಿರೂಪಣೆ ಹಾಗೂ ಒಂದು ಹಾಡು ಚಿತ್ರದ ಪ್ಲಸ್ ಪಾಯಿಂಟ್. ಸೂರ್ಯ ಕ್ಯಾಮೆರಾ, ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಕತೆಗೆ ಪೂರಕವಾಗಿದೆ. ಪ್ರೇಮದಂತೆಯೇ ಚಿತ್ರವೂ ಆಸಕ್ತಿ ಮತ್ತು ನಿರಾಸೆಗಳ ಸಂಗಮ.