ವಿಶ್ವದಾದ್ಯಂತ ತೆರೆಕಂಡ ಅನಿಮಲ್: ಹೇಗಿದೆ ರಣಬೀರ್ -ರಶ್ಮಿಕಾ ಸಿನಿಮಾ?

By Govindaraj S  |  First Published Dec 2, 2023, 12:33 PM IST

ರಣ್ಬೀರ್ ಕಪೂರ್ ರಶ್ಮಿಕಾ ಅಭಿನಯದ ಅನಿಮಲ್ ಸಿನಿಮಾ ವಿಶ್ವದಾಧ್ಯಂತ ತೆರೆಕಂಡಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿರುವ ‘ಅನಿಮಲ್’ ಸಿನಿಮಾ ಡಿ.1ರಂದು ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. 


ರಣ್ಬೀರ್ ಕಪೂರ್ ರಶ್ಮಿಕಾ ಅಭಿನಯದ ಅನಿಮಲ್ ಸಿನಿಮಾ ವಿಶ್ವದಾಧ್ಯಂತ ತೆರೆಕಂಡಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿರುವ ‘ಅನಿಮಲ್’ ಸಿನಿಮಾ ಡಿ.1ರಂದು ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. ಬಾಬಿ ಡಿಯೋಲ್, ಅನಿಲ್ ಕಪೂರ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅದ್ದೂರಿಯಾಗಿ ಮೂಡಿಬಂದಿರುವ ಈ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. 

ಅನಿಮಲ್’ ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ 21 ನಿಮಿಷ. ಸಾಮಾನ್ಯವಾಗಿ ಇಷ್ಟು ದೀರ್ಘವಾದ ಸಿನಿಮಾಗಳನ್ನು ನೋಡಲು ತಾಳ್ಮೆ ಬೇಕು. ಹಾಗಿದ್ದರೂ ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಸಿನಿಮಾದ ಅವಧಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  ಅನಿಮಲ್ ರಶ್ಮಿಕಾ ಅವರ ಮೂರನೇ ಬಾಲಿವುಡ್ ಮೂವಿ. ಇದಕ್ಕೂ ಮುನ್ನ ಗುಡ್ಬೈ ಹಾಗೂ ಮಿಷನ್ ಮಜ್ನು ಮೂವಿ ಮಾಡಿದ್ದರು. ಗುಡ್ ಬೈ ಹಿಟ್ ಆಗಲಿಲ್ಲ. ಮಿಷನ್ ಮಜ್ನು ಸಕ್ಸಸ್ ಆಯಿತು. ಈಗ ನಟಿ ಮೂರನೇ ಸಿನಿಮಾದಲ್ಲಿಯೇ ರಣಬೀರ್ಗೆ ಜೋಡಿಯಾಗಿದ್ದಾರೆ. 

Tap to resize

Latest Videos

ಗೀತಾಂಜಲಿಯಾಗಿ ರಶ್ಮಿಕಾ ಅವರು ಅನಿಮಲ್ ಸಿನಿಮಾದಲ್ಲಿ ನಟಿಸಿದ್ದಾರೆ. ರಣಬೀರ್ ಕಪೂರ್ ಪತ್ನಿಯಾಗಿ ರಶ್ಮಿಕಾ ಅವರ ಪಾತ್ರದ ಹಲವಾರು ಝಲಕ್ ವೈರಲ್ ಆಗಿದೆ. ಸಿನಿಮಾ ನೋಡಿದ ಮಂದಿ ಪಾಸಿಟಿವ್ ರಿವ್ಯೂ ಕೊಟ್ಟಿದ್ದಾರೆ. ಆದರೆ ರಶ್ಮಿಕಾ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ. ರಶ್ಮಿಕಾಗೆ ಹೆಚ್ಚು ಸ್ಕೋಪ್ ಇಲ್ಲ ಅನ್ನೋದೆ ಅದಕ್ಕೆ ಕಾರಣ. ಬಾಲಿವುಡ್ ಹೀರೋಗಳೆಲ್ಲ ಸೌತ್ ಹೀರೋಗಳಂತೆ ಉದ್ದದ ಕೂದಲು ಬಿಟ್ಟು ಮಚ್ಚು ಲಾಂಗು ಹಿಡಿದು  ರೌಡಿಗಳನ್ನಕೊಚ್ಚೋ ಸೀನ್ ನೋಡಿ ಸೌತ್ ಪ್ರೇಕ್ಷಕರು ನಮ್ ಟ್ರ್ಯಾಕ್ ಗೆ ಬಾಳಿವುಡ್ ಬಂತೂ ಎನ್ನುತ್ತಿದ್ದಾರೆ. ಸೌತ್ ನಿರ್ದೇಸಕರಿಗೆ ಬಾಲಿವುಡ್ ಸ್ಟಾರ್ಸ್ ಮಣೆ ಹಾಕುತ್ತಿರೋದ ಅದಕ್ಕೆ ಅಲ್ವೇ ಎಂದೂ ಮತ್ತೊಬ್ಬರು ವಿಮರ್ಷೆ ಮಾಡಿದ್ದಾರೆ, ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ.

ವೈರಲ್ ಆಗಿತ್ತು ರಣಬೀರ್ ಕಪೂರ್ ಜೊತೆಗಿನ ರಶ್ಮಿಕಾ ಕಿಸ್ಸಿಂಗ್ ಸೀನ್‌: ಟಾಲಿವುಡ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅತ್ಯಂತ ಆಸಕ್ತಿದಾಯಕ ಚಿತ್ರ ಅನಿಮಲ್. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಉತ್ತಮ ಕ್ರೇಜ್ ಪಡೆಯುತ್ತಿದೆ. ಸೌತ್‌ನಲ್ಲಿ ಸದ್ದು ಮಾಡಿದ್ದ 'ಅರ್ಜುನ್ ರೆಡ್ಡಿ' ಸಿನಿಮಾವನ್ನು ಸಂದೀಪ್ ರೆಡ್ಡಿ ನಿರ್ದೇಶಿಸಿದ್ದರು. 'ಅನಿಮಲ್‌' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.  ಹಾಡಿನ ಮೊದಲ ಲಿರಿಕಲ್ ವೀಡಿಯೊದಲ್ಲಿ, ರಣಬೀರ್ ಕಪೂರ್ ಜೊತೆಗಿನ ರಶ್ಮಿಕಾ ಕಿಸ್ಸಿಂಗ್ ಸೀನ್‌ಗಳು ಹೆಚ್ಚು ವೈರಲ್ ಆಗಿತ್ತು. 

'ಬ್ಲೌಸ್‌ ಹಾಕೋಕೆ ಮರೆತ್ರಾ...' ಸ್ವಾತಿ ಮುತ್ತಿನ ಮಳೆ ಹನಿಯೇ ಹೀರೋಯಿನ್‌ ಫೋಟೋಶೂಟ್‌ಗೆ ಬಂತು ವೈರಲ್‌ ಕಾಮೆಂಟ್‌!

ತೆಲುಗಿನ ಕೆಲವೊಂದು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಖತ್‌ ಬೋಲ್ಡ್ ಆಗಿ ನಟಿಸಿದ್ದಾರೆ. ಆದರೆ ಅನಿಮಲ್‌ ಚಿತ್ರದಲ್ಲಿ ಇವೆಲ್ಲಕ್ಕಿಂತಲೂ ಸಖತ್ ಬೋಲ್ಡ್ ಆಗಿ ಲಿಪ್‌ಲಾಕ್ ಮಾಡಿದ್ದಾರೆ. ಸದ್ಯ ಆಕೆಗೂ ಬಾಲಿವುಡ್‌ನ ಗಾಳಿ ಬೀಸಿದಂತಿದೆ ಎಂದು ನೆಟ್ಟಿಗರು ಪಿಸುಗುಟ್ಟುತ್ತಿದ್ದಾರೆ. ಇನ್ನು ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಜೊತೆಗೆ ಅನಿಲ್ ಕಪೂರ್, ಬಾಬಿ ಡಿಯೋಲ್‌ ಮೊದಲಾದವರು ನಟಿಸಿದ್ದಾರೆ. ರಣಬೀರ್ ಕಪೂರ್ ಹೆಚ್ಚಾಗಿ ಲವರ್ ಬಾಯ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.  ಇದೀಗ ಸಖತ್ ಮಾಸ್ ಆಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ರಣಬೀರ್ ಕಪೂರ್ ನಟನೆಯ ಎನಿಮಲ್ ಸಿನಿಮಾದ ಫಸ್ಟ್ ಲುಕ್ ವರ್ಷದ ಆರಂಭದಲ್ಲಿ ರಿವೀಲ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಕ್ತಸಿಕ್ತವಾಗಿದ್ದ ಲುಕ್‌ನಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದರು. ಸಿಗರೇಟ್ ಹಚ್ಚುತ್ತಾ ಬಗಲಲ್ಲಿ ರಕ್ತ ಮೆತ್ತಿದ ಕೊಡಲಿ ಹಿಡಿದು ನಿಂತಿದ್ದಾರೆ. ಭಯ ಹುಟ್ಟಿಸುವ ರಣಬೀರ್ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು.

click me!