ರಂಗಾಣ ರಘು, ಸಂಪತ್ ರಾಜ್, ರಾಘವೇಂದ್ರ ರಾಜ್‌ಕುಮಾರ್,ದಿವ್ಯ ಗೌಡ, ಕೆವಿಆರ್ ನಟನೆಯ ರಂಗಸಮುದ್ರ ಸಿನಿಮಾ ರಿಲೀಸ್ ಅಗಿದೆ. ಸಿನಿಮಾ ಹೇಗಿದೆ?
ಆರ್‌ಕೆ
ಉತ್ತರ ಕರ್ನಾಟಕದ ರಂಗಸಮುದ್ರ ಹೆಸರಿನ ಊರು ಈ ಚಿತ್ರದ ಕೇಂದ್ರಬಿಂದು. ಅಜ್ಜ ಮತ್ತು ಮೊಮ್ಮಗನ ಕತೆಯಾಗಿ ತೆರೆದುಕೊಂಡು ಮುಂದೆ ಜಾತಿಯ ದ್ವೇಷ, ಶ್ರೀಮಂತಿಕೆ, ಬಾಲಕಾರ್ಮಿಕರು, ಶೋಷಣೆ, ಸಂಘರ್ಷ, ವಿದ್ಯೆಯ ಮಹತ್ವ ಸಾರುವ ಅಂಶಗಳ ಸುತ್ತ ಸಿನಿಮಾ ಸಾಗುತ್ತದೆ. ಡೊಳ್ಳು ಕುಣಿತದ ಕಲೆಯನ್ನು ಹೇಳುತ್ತಲೇ ಆ ಕಲೆಗೆ ಅಂಟಿರುವ ಜಾತಿಯ ದ್ವೇಷಕ್ಕೆ ಕನ್ನಡಿ ಹಿಡಿಯ ಪ್ರಯತ್ನ ಮಾಡುತ್ತದೆ ‘ರಂಗಸಮುದ್ರ’ ಸಿನಿಮಾ.
undefined
ತಾರಾಗಣ: ರಂಗಾಣ ರಘು, ಸಂಪತ್ ರಾಜ್, ರಾಘವೇಂದ್ರ ರಾಜ್‌ಕುಮಾರ್,ದಿವ್ಯ ಗೌಡ, ಕೆವಿಆರ್
ನಿರ್ದೇಶನ: ರಾಜಕುಮಾರ್ ಅಸ್ಕಿ
Klaantha Review ನಿಗೂಢತೆ ಅಡಗಿಕೊಂಡಿರುವ ಪವಾಡ ಕಥನ
ಡೊಳ್ಳು ಬಾರಿಸುವ ತರಬೇತಿ ನೀಡುತ್ತಿರುವ ಊರಿನ ಹಿರಿಯ ಜೀವ. ಅದೇ ಊರಿನ ಜನರಿಗೆ ಕಷ್ಟಕಾಲದಲ್ಲಿ ಕೊಟ್ಟ ಸಾಲದ ನೆಪದಲ್ಲಿ ಶೋಷಣೆ ಮಾಡುತ್ತಿರುವ ಸಾಹುಕಾರ. ಶಾಲೆಗೆ ಹೋಗಬೇಕಾದ ಮಕ್ಕಳಿಂದಲೂ ಕೆಲಸ ಮಾಡಿಸುತ್ತಿರುವ ಈ ಸಾಹುಕಾರ ಊರಿಗೆ ದೊಡ್ಡ ಶತ್ರು. ತನ್ನ ಅಜ್ಜನನ್ನು ಕಾರಿನಲ್ಲಿ ಇದೇ ಊರಿನಲ್ಲಿ ತಿರುಗಾಡಿಸುತ್ತೇನೆ ಎಂದು ಸಾಹುಕಾರನಿಗೆ ಬಾಲಕನೊಬ್ಬ ಸವಾಲು ಹಾಕುತ್ತಾನೆ. ಮುಂದೆ ಕಾರಿಗಾಗಿ ಬಾಲಕರು ಊರು ಬಿಟ್ಟು ನಗರಕ್ಕೆ ಬರುತ್ತಾರೆ. ನಂತರ ಏನಾಗುತ್ತದೆ ಎಂಬುದೇ ಚಿತ್ರದ ಕತೆ. ಜಾನಪದ ಕಲೆಯ ಹಿನ್ನೆಲೆಯಲ್ಲಿ ಹಳ್ಳಿ ಕತೆ ಹೇಳಿರುವುದು ಒಳ್ಳೆಯ ಪ್ರಯತ್ನ.
ಪುರಾತನ ಕಾಲದಿಂದಲೂ ಬೇರು ಬಿಟ್ಟಿರುವ ಜಾತಿ ಪದ್ಧತಿ ವಿರುದ್ಧ ಹೋರಾಡೋ ಸಿನಿಮಾ ಕಾಟೇರ!
ಆದರೆ, ಅಗತ್ಯಕ್ಕಿಂತ ಹೆಚ್ಚಾಗಿಯೇ ಸದ್ದು ಮಾಡುವ ಹಿನ್ನೆಲೆ ಸಂಗೀತ, ಕತೆ ಮತ್ತು ದೃಶ್ಯಗಳು ನೋಡುಗನ ಮನಸ್ಸು ಮುಟ್ಟುವ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕತೆಯ ಆಳಕ್ಕಿಳಿಯದೆ ಮೇಲ್ನೋಟಕ್ಕೆ ಹೇಳುತ್ತಾ ಹೋಗುವುದರಿಂದ ಚಿತ್ರಕಥೆಯಲ್ಲಿ ಬಿಗಿತನ ಕಾಣೆಯಾಗಿದೆ. ನಟನೆ ವಿಚಾರಕ್ಕೆ ಬಂದರೆ ರಂಗಾಯಣ ರಘು, ಸಂಪತ್ ರಾಜ್ ಕತೆಗೆ ಜೀವ ತುಂಬಿದ್ದಾರೆ. ಉಗ್ರಂ ಮಂಜು ಎಂದಿನಂತೆ ತಮ್ಮ ಖದರ್ ತೋರಿದ್ದಾರೆ. ಬಾಲ ಕಲಾವಿದರ ಪಾತ್ರಗಳು ಕತೆಗೆ ಪೂರಕವಾಗಿವೆ.