ವಿಘ್ನೇಶ್, ಸಂಗೀತಾ ಭಟ್, ಶೋಭರಾಜ್, ವೀಣಾ ಸುಂದರ್ ನಟನೆಯ ಕ್ಲಾಂತ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಹೇಗಿದೆ?
ರಾಜ್
ದಟ್ಟವಾದ ಕಾಡು ಎಂದರೆ ಸಾಕು ಅಲ್ಲಿ ಕುತೂಹಲ ಹುಟ್ಟುತ್ತದೆ. ಅಲ್ಲೊಂದು ನಿಗೂಢತೆ ಅಡಗಿಕೊಂಡಿರುತ್ತದೆ. ಈ ಸಿನಿಮಾ ಕೂಡ ಅಂಥದ್ದೇ ಒಂದು ನಿಗೂಢತೆ ಅಡಸಿಟ್ಟುಕೊಂಡಿರುವ ಸಿನಿಮಾ. ಹಾಗಾಗಿಯೇ ಈ ಸಿನಿಮಾ ಕೊಂಚ ಭಿನ್ನವಾಗಿ ನಿಲ್ಲುತ್ತದೆ.
undefined
ಸಿನಿಮಾ ಈ ಕಾಲದ ಕತೆಯಂತೆ ಶುರುವಾಗುತ್ತದೆ. ಒಬ್ಬ ಹುಡುಗ, ಹುಡುಗಿ ವೀಕೆಂಡಲ್ಲಿ ಮನೆಯಲ್ಲಿ ತಿಳಿಸದೆಯೇ ಅವರಿಗೆ ಅಪರಿಚಿತವಾಗಿರುವ ಜಾಗವೊಂದಕ್ಕೆ ತೆರಳುತ್ತಾರೆ. ಅಲ್ಲಿಂದ ನಂತರ ಈ ಕತೆ ಸಾರ್ವಕಾಲಿಕವಾಗುತ್ತದೆ. ಯಾರಿಗೆ ಬೇಕಾದರೂ ಸಂಭವಿಸಬಹುದಾದ ಕತೆಯಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಈ ಚಿತ್ರದ ಬರವಣಿಗೆ ಸೊಗಸಾಗಿದೆ.
Darshan Kaatera Review: ಕತೆಯೆಂಬ ಬೆಂಕಿಯಲ್ಲಿ ಕಾದು ಮಿರುಗುವ ಕಾಟೇರ
ನಿರ್ದೇಶನ: ವೈಭವ್ ಪ್ರಶಾಂತ್
ತಾರಾಗಣ: ವಿಘ್ನೇಶ್, ಸಂಗೀತಾ ಭಟ್, ಶೋಭರಾಜ್, ವೀಣಾ ಸುಂದರ್
ರೇಟಿಂಗ್: 3
ಆರಂಭದಲ್ಲಿ ಕೊಂಚ ಸಾವಧಾನದಿಂದ ಸಾಗುವ ಕತೆ ಹೋಗ್ತಾ ಹೋಗ್ತಾ ತೀವ್ರತೆ ಪಡೆದುಕೊಳ್ಳುತ್ತದೆ. ದ್ವಿತೀಯಾರ್ಧದಲ್ಲಿ ಒಳ್ಳೆಯ ಥ್ರಿಲ್ಲರ್‌ಗೆ ಇರಬಹುದಾದ ವೇಗ ಇದಕ್ಕೂ ದಕ್ಕಿದೆ. ಕತೆಯ ತೀವ್ರತೆಗೆ ತಕ್ಕಂತೆ ಕಲಾವಿದರ ನಟನೆಯೂ ಮೊನಚಾಗಿ ಇರುವುದರಿಂದ ಹೊಸತೊಂದು ಜಗತ್ತು ತೆರೆದುಕೊಳ್ಳುತ್ತದೆ. ಅದಕ್ಕಾಗಿ ಸಂಗೀತಾ ಭಟ್, ವಿಘ್ನೇಶ್ ನಟನೆಯನ್ನು ಮೆಚ್ಚಬೇಕು.
ಥ್ರಿಲ್ಲರ್ ಸಿನಿಮಾ ಎಂದರೆ ಅದೊಂದು ಹುಡುಕಾಟ. ಇಲ್ಲೂ ಹುಡುಕಾಟ ಇದೆ. ಅದಕ್ಕಿಂತ ಹೆಚ್ಚಾಗಿ ಪವಾಡ ಇದೆ. ನಿಗೂಢತೆ ಮತ್ತು ಪವಾಡ ಎರಡೂ ಸೇರಿಕೊಂಡು ಈ ಥ್ರಿಲ್ಲರ್ ಅನ್ನು ಸ್ವಲ್ಪ ಮೇಲಕ್ಕೆ ಎತ್ತಿದೆ. ಥ್ರಿಲ್ಲರ್ ಸಿನಿಮಾ ನೋಡುವವರಿಗೆ ಇಷ್ಟವಾಗುವಂತೆ ರೂಪುಗೊಂಡಿದೆ.
Salaar Review ಹಿಂಸೆ ತುಂಬಿದ ಜಗತ್ತಿನ ಸ್ನೇಹ ಬಾಂಧವ್ಯದ ಕಥನ
ಉಳಿದಂತೆ ನಟನೆ, ನಿರ್ದೇಶನ, ಬರವಣಿಗೆ ಎಲ್ಲದರಲ್ಲೂ ಅವರವರ ಪಾಲಿನ ಕೆಲಸವನ್ನು ಎಲ್ಲರೂ ಉತ್ತಮವಾಗಿ ಮಾಡಿದ್ದರಿಂದ ಈ ಸಿನಿಮಾದ ತೂಕ ಹೆಚ್ಚಾಗಿದೆ.