Athi I Love You Review: ಉತ್ತಮ ಸಂಸಾರದ ಹತ್ತು ಸೂತ್ರಗಳು

By Kannadaprabha News  |  First Published Dec 9, 2023, 11:59 AM IST

ಲೋಕೇಂದ್ರ ಸೂರ್ಯ, ಶ್ರಾವ್ಯಾ ನಟಿಸಿರುವ ಅಥಿ ಐ ಲವ್ ಯೂ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?


ನಿಶಾಂತ್ ಕಮ್ಮರಡಿ

‘ನಮ್ ಹತ್ರೆ ಹಳೆ ಚಾಕುಗಳಿಗೆ, ಮಷೀನ್ ಕತ್ರಿಗಳಿಗೆ ಸಾಣೆ ಹಿಡಿದುಕೊಡ್ತೀವಿ ಬನ್ನಿ ಮೇಡಂ.. ಬನ್ನಿ ಸಾರ್‌.. ’

Tap to resize

Latest Videos

ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಕೆಟ್ಟ ಕನ್ನಡದಲ್ಲಿ ಕೇಳುವ ಈ ದನಿ ಜನರಿಗೆ ನಿದ್ದೆ, ಆಕಳಿಕೆಯಷ್ಟೇ ಸಾಮಾನ್ಯ. ಆದರೆ ಸಿನಿಮಾದಲ್ಲೂ ಈ ಸೌಂಡ್‌ ಕೇಳಿದಾಗ ಮುಖದಲ್ಲಿ ನಗು ಅಯಾಚಿತವಾಗಿ ಮೂಡುತ್ತದೆ. ‘ಅಥಿ ಐ ಲವ್‌ ಯೂ’ ಚಿತ್ರದಲ್ಲಿ ನಿರ್ದೇಶಕ ಲೋಕೇಂದ್ರ ಆರ್ಯ ಇಂಥ ಹಿನ್ನೆಲೆ ದನಿಗಳನ್ನು ಇಟ್ಟುಕೊಂಡು, ಕಥೆಯನ್ನೂ ಇದೇ ರೀತಿ ಕನೆಕ್ಟ್‌ ಮಾಡುವ ಪ್ರಯತ್ನ ಮಾಡಿದ್ದಾರೆ.

Ardhambardha Premakathe Review: ಪಯಣದಲ್ಲಿ ಅರಳಿದ ಅರೆಬರೆ ಪ್ರೇಮ

ತಾರಾಗಣ: ಲೋಕೇಂದ್ರ ಸೂರ್ಯ, ಶ್ರಾವ್ಯಾ

ನಿರ್ದೇಶನ: ಲೋಕೇಂದ್ರ ಸೂರ್ಯ

ನಮ್ಮ ನಿಮ್ಮ ಲೈಫಿನಷ್ಟೇ ಸಿಂಪಲ್ಲಾದ ಹಾಗೂ ಕ್ರಿಟಿಕಲ್‌ ಆದ ಸಿನಿಮಾ. ಗಂಡ ಹೆಂಡತಿ ನಡುವೆ ಜಗಳ ಹೇಗೆ ಶುರುವಾಗುತ್ತೆ, ಹೇಗೆ ಮುಂದುವರಿಯುತ್ತೆ, ಅದಕ್ಕೆ ಪರಿಹಾರ ಇದೆಯಾ ಅನ್ನೋದು ಸಿನಿಮಾದ ಒನ್‌ಲೈನ್‌.

ಒಂದು ಮನೆಯೊಳಗೆ ಇಡೀ ಸಿನಿಮಾ ನಡೆಯುತ್ತೆ. ಹೊರಗಿನ ಸೌಂಡ್‌ಗಳು, ಮನೆ ಒಳಗಿನ ಅಕ್ವೇರಿಯಂ, ಸೋಫಾ, ಚಿಲಕ ಇತ್ಯಾದಿಗಳೂ ಪಾತ್ರಗಳೇ. ಆಗಾಗ ಚಿಲಕದ ಮೇಲೆ, ಕಿಟಕಿಯ ಮೇಲೆ ಕ್ಯಾಮರಾ ಫೋಕಸ್ ಆಗಿರುತ್ತೆ, ಹಿನ್ನೆಲೆಯಲ್ಲಿ ಬರುವ ಸದ್ದುಗಳನ್ನು ಕೇಳಿ ಕತೆ ಅರ್ಥ ಮಾಡಿಕೊಳ್ಳಬೇಕು.

Bad Manners Review: ಕತ್ತಲು ಬೆಳಕು ಜಗತ್ತಲ್ಲಿ ಅನೂಹ್ಯ ಪಾತ್ರಗಳ ತಾಳಮೇಳ

ಸಿನಿಮಾದಲ್ಲಿ ಹೊರಗಿನ ಸದ್ದುಗಳನ್ನು ಕ್ಯಾಪ್ಚರ್ ಮಾಡಿದ ರೀತಿ ಚೆನ್ನಾಗಿದೆ. ಕಥೆ ಕನೆಕ್ಟ್ ಆಗುವಂಥಾದ್ದು. ನಿರ್ದೇಶಕರು ಸಾವಧಾನವಾಗಿ ಮುಂದುವರಿಯುತ್ತಾರೆ. ಪ್ರೇಕ್ಷಕರಿಗೂ ಆ ಸಮಾಧಾನ ಇರಬೇಕಾದ್ದು ಮುಖ್ಯ ಅರ್ಹತೆ. ಶ್ರಾವ್ಯಾ ನಟನೆ ಚೆನ್ನಾಗಿದೆ. ಉತ್ತಮ ಸಂಸಾರದ ಹತ್ತು ಸೂತ್ರಗಳನ್ನು ತಿಳಿಯಬಯಸುವವರು ಸಿನಿಮಾ ನೋಡಬಹುದು.

click me!