ಡಿಸ್ನಿ + ಹಾಟ್ ಸ್ಟಾರ್‌ನಲ್ಲಿ ನಯನತಾರಾ O2 ಸಿನಿಮಾ ರಿಲೀಸ್. ಲೇಡಿ ಸೂಪರ್ ಸ್ಟಾರ್ ನಟನೆ ಟುಸ್ ಎಂದ ನೆಟ್ಟಿಗರು...
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯಿಸಿರುವ O2 ಸಿನಿಮಾ ಡಿಸ್ನಿ + ಹಾಟ್ ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ. ಜೆಎಸ್ ವಿಕ್ನೇಶ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಮಾಸ್ಟರ್ ರುತ್ವಿಕ್, ಆರ್‌ಎನ್‌ಆರ್ ಮನೋಹರ್, ಭರತ್ ನೀಲಕಂದನ್ ಮತ್ತು ಆಡುಕಳಂ ಮುರುಗದಾಸ್ ಅಭಿನಯಿಸಿದ್ದಾರೆ. ಒಂಟಿ ತಾಯಿ ತನ್ನ ಪುಟ್ಟ ಮಗನನ್ನು ಉಳಿಸಲು ಹೆಣಗಾಡುತ್ತಾಳೆ. ಜೀವನ ಮಾಡಲು ಎಷ್ಟೆಲ್ಲಾ ಕಷ್ಟಗಳು ಎದುರಾಗುತ್ತದೆ ಏನೆಲ್ಲಾ ಮಾಡುತ್ತಾಳೆ ಎಂದು ಸಿನಿಮಾದಲ್ಲಿ ಸಿಂಪಲ್ ಆಗಿ ತೋರಿಸಲಾಗಿದೆ. ಡ್ರೀಮ್ ವಾರಿಯರ್ ಪಿಕ್ಚರ್ ಬಂಡವಾಳ ಹಾಕಿರುವ ಈ ಚಿತ್ರಕ್ಕೆ ನೆಟ್ಟಿಗರು 2 ಸ್ಟಾರ್ ಮಾತ್ರ ನೀಡುತ್ತಿದ್ದಾರೆ.
ಬೆಸ್ಟ್ ಏನು:
ತಾಯಿ ಪಾತ್ರದಲ್ಲಿ ನಯನತಾರಾ ಮತ್ತು ಮಗನ ಪಾತ್ರದಲ್ಲಿ ಮಾಸ್ಟರ್ ರಿತ್ವಿಕ್ ಅದ್ಭುತವಾಗಿ ನಟಿಸಿದ್ದಾರೆ.
ವರ್ಸ್ಟ್ ಏನು:
ಕಥೆ ಹೇಳುವುದರಲ್ಲಿ ಕನ್ವಿಕ್ಷನ್ ಕೊರತೆ. ಪ್ರಮುಖ ಪಾತ್ರ ಬಿಟ್ಟು ಇನ್ನುಳಿದ ಪಾತ್ರಧಾರಿಗಳಿಗೆ ಕೊಂಚ ಪ್ರಾಮುಖ್ಯತೆ ನೀಡಬಹುದಿತ್ತು.
ಒಂಟಿ ಮಹಿಳೆ ಪಾರ್ವತಿ ಇಡೀ ಸಂಸಾರದ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾಳೆ. ಸಿಸ್ಟಿಕ್ ಫೈಬರಾಯ್ಡ್‌ನಿಂದ (Cystic Fibaroids) ಬಳಲುತ್ತಿರುವ ವೀರ್ ಆಮ್ಲಜನಕ ಸಿಲಿಂಗರ್ ಇಲ್ಲದೆ ಉಸಿರಾಡಲು ಕಷ್ಟ ಪಡುತ್ತಿರುತ್ತಾನೆ. ಮೇಜರ್ ಆಪರೇಷನ್ ಮಾಡಿಸಿದರೆ ಮಾತ್ರ ಪುತ್ರನನ್ನು ಉಳಿಸಿಕೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ, ಹೀಗಾಗಿ ಕೊಚಿ, ಕೇರಳಾಗೆ ಪ್ರಯಾಣ ಮಾಡಿ ಆಪರೇಷನ್ ಮಾಡಿಸಲು ಮುಂದಾಗುತ್ತಾಳೆ. ಆದರೆ ಮೆಡಿಕಲ್ ಮಾಫಿಯಾದಲ್ಲಿ ಸಿಲುಕಿಕೊಂಡು ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಾಳೆ, ಇಷ್ಟೆಲ್ಲಾ ಇದ್ದರೂ ಹೇಗೆ ಮಗನನ್ನು ಆಮ್ಲಜನಕ ಸಿಲಿಂಡರ್ ಜೊತೆ ಉಳಿಸಿಕೊಳ್ಳುತ್ತಾಳೆ ಎಂಬುವುದು ಕಥೆ.
ಹೊಸ ನಿರ್ಧಾರ ತೆಗೆದುಕೊಂಡ ನಯನತಾರ: ಫ್ಯಾನ್ಸ್‌ಗೆ ಬೇಜಾರು!
O2 ಸಿನಿಮಾದಲ್ಲಿ ತಾಯಿ-ಮಗನ ಸೆಂಟಿಮೆಂಟ್‌ನ ಅದ್ಭುತವಾಗಿ ತೋರಿಸಲಾಗಿದೆ. ತಾಯಿ ತನ್ನ ಮಗನನ್ನು ಉಳಿಸಿಕೊಳ್ಳಲು ಏನೆಲ್ಲಾ ಕಷ್ಟ ಪಡಬೇಕು. ಸಮಾಜ ಒಂಟಿ ಮಹಿಳೆಯನ್ನು ಯಾವ ರೀತಿ ನೋಡುತ್ತದೆ ಎಂದು ಎಳೆ ಎಳೆಯಾಗಿ ವಿವರಿಸಿದ್ದಾರೆ. ಅನೇಕ ಸಂಗತಿಗಳು ವೀಕ್ಷಕರ ಕರುಳು ಚುರುಕು ಅನಿಸುತ್ತದೆ. ಆದರೆ ಕಥೆಯಲ್ಲಿ ಏನೋ ಕೊರತೆ ಇದೆ ಅನಿಸುವುದು ಖಂಡಿತ. ದೃಶ್ಯಗಳನ್ನು ಸರಿಯಾಗಿ ಮುಗಿಸಿಲ್ಲ ಸಂಭಾಷಣೆಯಲ್ಲಿ ಕೊಂಚ ಬದಲಾವಣೆ ಇರಬೇಕಿತ್ತು. ಮೊದಲ ಭಾಗಕ್ಕೂ ಎರಡನೇ ಭಾಗಕ್ಕೂ ವ್ಯತ್ಯಾಸವಿದೆ ಸರಿಯಾಗಿ ಲಿಂಕ್ ಮಾಡಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಪಾತ್ರಧಾರಿಗಳಲ್ಲೂ ಸಣ್ಣ ಪುಟ್ಟ ಕೊರತೆ ಇದ್ದ ಕಾರಣ ಜನರಿಗೆ ಕನೆಕ್ಟ್ ಆಗಲು ಕಷ್ಟವಾಗಿದೆ.
ವಿಘ್ನೇಶ್‌ಗಿಂತ ದೊಡ್ಡವರು ನಯನತಾರಾ; ಹಾಗಾದ್ರೆ ವಯಸ್ಸಿನ ಅಂತರವೆಷ್ಟು?
ಬೇಸರ ಸಂಗತಿ ಏನೆಂದರೆ ಅಂತ್ಯಕ್ಕೆ ಅರ್ಥವೇ ಇಲ್ಲ. ಸರಿಯಾದ ರೀತಿಯಲ್ಲಿ ಕಥೆ ಅಂತ್ಯ ಮಾಡಬೇಕಿತ್ತು, ಪುತ್ರನಿಗೆ ಆರೋಗ್ಯ ಸರಿಯಾಗಿದೆ ಅಥವಾ ಈ ರೀತಿ ಕಾಯಿಲೆಗಳಿಗೆ ಚಿಕಿತ್ಸೆ ಇದೆ ಎಂದು ಜನರಿಗೆ ಅರಿವು ಮೂಡಿಸಬೇಕಿತ್ತು ಎಂದು ಸಿನಿ ರಸಿಕರು ಹೇಳುತ್ತಿದ್ದಾರೆ.