ಎಂ.ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಆರ್ ಜೆ ವಿಕ್ಕಿ, ಹೊನ್ನವಳ್ಳಿ ಕೃಷ್ಣ, ಸ್ವಾತಿ ಶೆಟ್ಟಿಗಾರ್ ನಟನೆಯ ಮತ್ತೆ ಮತ್ತೆ ಸಿನಿಮಾ ರಿಲೀಸ್ ಆಗಿದೆ. ಹೇಗಿದೆ?
ಆರ್.ಬಿ.ಕೆಲವು ತಾರುಣ್ಯದ ಹುಡುಗರ ಹುಮ್ಮಸ್ಸಿನ ಮೂಲಕ ಕತೆ ಆರಂಭವಾಗುತ್ತದೆ. ಪದವಿ ಮುಗಿಸಿ ಟಿವಿ ಚಾನಲ್ ಮಾಡಬೇಕು ಅಂತ ಹೊರಟು ಅದು ಸಾಧ್ಯವಾಗದೇ ಇದ್ದಾಗ ಸಿನಿಮಾ ಮಾಡಬೇಕು ಅಂದುಕೊಳ್ಳುತ್ತಾರೆ. ಅಲ್ಲಿಗೆ ಕತೆಗೆ ಹೊಸತೊಂದು ತಿರುವು ಸಿಗುತ್ತದೆ. ಆ ತಿರುವಿನ ನಂತರದ್ದೆಲ್ಲಾ ತಿರುವು ಮುರುವು ರಸ್ತೆಗಳೇ. ಈ ಪ್ರಯಾಣದಲ್ಲಿ ಮುದ ಕೊಡುವುದು ಹುಡುಗರ ಪ್ರಯತ್ನದ ಪಡಿಪಾಟಲಿನಲ್ಲಿನ ಹಾಸ್ಯ ಮತ್ತು ಹಿರಿಯ ಕಲಾವಿದರ ನಟನೆ.
ನಿರ್ದೇಶನ: ಡಾ. ಅರುಣ್ ಹೊಸಕೊಪ್ಪ
ತಾರಾಗಣ: ಎಂ.ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಆರ್ ಜೆ ವಿಕ್ಕಿ, ಹೊನ್ನವಳ್ಳಿ ಕೃಷ್ಣ, ಸ್ವಾತಿ ಶೆಟ್ಟಿಗಾರ್
Rangasamudra Review ಜಾತಿ, ದ್ವೇಷ, ವಿದ್ಯೆ ಮತ್ತು ಸಂಘರ್ಷ
ಈ ಸಿನಿಮಾದಲ್ಲಿ ಹಿರಿಯರು ಕಿರಿಯರ ಸೊಗಸಾದ ತಾಳಮೇಳವಿದೆ. ಅನೇಕ ಹಿರಿಯ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಹೊಸ ತಲೆಮಾರು ಸೇರಿಕೊಂಡಿದೆ. ಹಾಗಾಗಿ ಈ ಸಿನಿಮಾ ವಿಶಿಷ್ಟವಾಗಿ ಕಾಣುತ್ತದೆ.
ಹೊಸ ಸಾಹಸಕ್ಕೆ ಸಿದ್ಧವಾಗ ಸವಾಲುಗಳು ಎದುರಾಗುವುದು ನಿಶ್ಚಿತ. ಆ ಸವಾಲುಗಳೇ ಈ ಸಿನಿಮಾದ ಚಿತ್ರಕತೆಯಾಗಿದೆ. ಸನ್ನಿವೇಶಗಳೇ ಹಾಸ್ಯವನ್ನು ಕಟ್ಟಿಕೊಟ್ಟಿವೆ. ಕೊಂಚ ವೇಗದ ನಿರೂಪಣೆ ಇದ್ದಿದ್ದರೆ ಮತ್ತಷ್ಟು ಚಿತ್ರಕತೆ ಕಳೆಗಟ್ಟುತ್ತಿತ್ತು. ಅದರ ಹೊರತಾಗಿಯೂ ಇದೊಂದು ಹೊಸ ತಂಡದ ಹೊಸ ಪ್ರಯತ್ನವಾಗಿ ಗಮನ ಸೆಳೆಯಲು ಪ್ರಯತ್ನಿಸುತ್ತದೆ.
Klaantha Review ನಿಗೂಢತೆ ಅಡಗಿಕೊಂಡಿರುವ ಪವಾಡ ಕಥನ
ಸಂಜನಾ ಗಲ್ರಾನಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ ಜೆ ಮಿಕ್ಕಿ ನಟನೆ ಶ್ಲಾಘನೀಯ. ಉಮೇಶ್ ತಮ್ಮ ಲವಲವಿಕೆಯ ಅಭಿನಯದಿಂದ ಮನಸ್ಸು ಗೆಲ್ಲುತ್ತಾರೆ.