Film Review: ಅಘೋರ

By Kannadaprabha NewsFirst Published Mar 7, 2022, 11:58 AM IST
Highlights

ದೆವ್ವ, ಪ್ರೇತ, ಆತ್ಮಗಳು ಆಗಾಗ ಸ್ಯಾಂಡಲ್‌ವುಡ್‌ ಕದ ತಟ್ಟುತ್ತಿರುತ್ತವೆ. ಕೆಲವು ದೊಡ್ಡದಾಗಿ ಸದ್ದು ಮಾಡಿದೆ, ಇನ್ನೂ ಕೆಲವು ದೆವ್ವಗಳು ಸದ್ದಿಲ್ಲದೆ ಬಂದು ಹೋಗುತ್ತವೆ. ಈಗ 'ಅಘೋರ' ಚಿತ್ರ ತೆರೆ ಮೇಲೆ ಮೂಡಿದೆ. 

ಪ್ರೇತ, ದೆವ್ವಗಳು ಇಲ್ಲ ಎನ್ನುವವರಿಗೆ ಉತ್ತರದಂತೆ ಮೂಡಿ ಬಂದಿರುವುದು ಸಿನಿಮಾ ‘ಅಘೋರ’. ಚಿತ್ರದ ನಾಯಕನಿಗೆ ಅಘೋರಿಗಳು ಹಾಗೂ ಪ್ರೇತಗಳ ಕುರಿತು ತಿಳಿಯಬೇಕೆನ್ನುವ ಕುತೂಹಲ. ಹೀಗಾಗಿ ಅಘೋರಿ ಕೊಟ್ಟ ಮಾಹಿತಿ ಮತ್ತು ಅಲ್ಲಿ ಸಿಕ್ಕ ತಾಳೆಗರಿಯನ್ನು ಇಟ್ಟುಕೊಂಡು ಸ್ಮಶಾನದಲ್ಲಿ ಪೂಜೆ ಮಾಡಿ ದೆವ್ವಗಳನ್ನು ಕರೆಸುವ ಸಾಹಸ ಮಾಡುತ್ತಾನೆ. ಇದೇ ಸಂದರ್ಭದಲ್ಲಿ ನಾಯಕಿ, ನಾಯಕನ ತಂಗಿ ಹಾಗೂ ಮತ್ತೊಬ್ಬರು ಜತೆಗಿರುತ್ತಾರೆ. 

Aghora Movie: 'ಅಘೋರಿ' ಪಾತ್ರದಲ್ಲಿ ಇನ್ಮುಂದೆ ಹಿರಿಯ ನಟ ಅವಿನಾಶ್ ನಟಿಸಲ್ಲ: ನಿರ್ದೇಶಕ ಪ್ರಮೋದ್

ಮಂತ್ರಗಳನ್ನು ಹೇಳುತ್ತಿದ್ದಾಗಲೇ ಪ್ರೇತಗಳು ಅಲ್ಲಿಗೆ ಹಾಜರಾಗುತ್ತವೆ. ಪೂಜೆಯನ್ನು ಅರ್ಧಕ್ಕೆ ನಿಲ್ಲಿಸಿ ಓಡುತ್ತಾರೆ. ಅರ್ಧಕ್ಕೆ ನಿಂತ ಪೂಜೆ, ಸ್ಮಶಾನದಲ್ಲಿ ದರ್ಶನ ಕೊಟ್ಟ ಪ್ರೇತಗಳು ಮುಂದೆ ಈ ನಾಲ್ಕು ಮಂದಿಯನ್ನು ಯಾಕೆ ಮತ್ತು ಯಾವ ರೀತಿ ಕಾಡುತ್ತವೆ ಎಂಬುದು ತೆರೆ ಮೇಲೆ ನೋಡಬಹುದು. ಕತೆಯ ಮೊದಲ ಭಾಗ ಯಾವುದೇ ಗುರಿ ಇಲ್ಲದೆ ಸಾಗುತ್ತಿರುವಾಗ ವಿರಾಮಕ್ಕೆ ದೆವ್ವಗಳು ಕೊಡುವ ಎಂಟ್ರಿಯಿಂದ ಇಡೀ ಚಿತ್ರದ ಖದರ್ ಬದಲಾಗುತ್ತದೆ. ಅಲ್ಲಿಂದ ಮನುಷ್ಯರು ವಸರ್ಸ್ ದೆವ್ವಗಳ ನಡುವೆ ಕಿತ್ತಾಟ ಶುರುವಾಗತ್ತದೆ. 

Latest Videos

ತಾರಾಗಣ: ಅವಿನಾಶ್, ಪುನೀತ್‌ಗೌಡ, ಅಶೋಕ್, ರಚನಾ ದಶರತ್, ದ್ರವ್ಯ ಶೆಟ್ಟಿ

ನಿರ್ದೇಶನ: ಪ್ರಮೋದ್ ರಾಜ್

ರೇಟಿಂಗ್: ***  

ಒಂದೇ ಮನೆಯಲ್ಲಿ ನಡೆಯುವ ಕಿತ್ತಾಟವನ್ನು ನೋಡುವಾಗ ಪ್ರೇಕ್ಷಕರಿಗೆ ಬೋರಾಗದಂತೆ ಎಚ್ಚರ ವಹಿಸುವ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಿರುವುದು ಶರತ್ ಜಿ ಕುಮಾರ್ ಛಾಯಾಗ್ರಾಹಣ ಹಾಗೂ ಮುರಳೀಧರನ್ ಅವರ ಹಿನ್ನೆಲೆ ಸಂಗೀತ. ಉಳಿದಂತೆ ಅಶೋಕ್, ಅವಿನಾಶ್ ಪಾತ್ರಗಳು ಚಿತ್ರಕ್ಕೆ ಕಿಕ್ ಕೊಡುತ್ತವೆ. ನಿರ್ದೇಶಕ ಪ್ರಮೋದ್ ರಾಜ್ ಉಳಿದ ಪಾತ್ರಗಳನ್ನು ಕತೆಗೆ ಪೂರಕವಾಗಿ ಬಳಸಿಕೊಂಡಿದ್ದಾರೆ.  

ಅಘೋರಿ ಪಾತ್ರ ಪ್ರತಿಯೊಬ್ಬ ನಟನಿಗೂ ಸವಾಲಾಗಿದ್ದು, ಇಂತಹ ಪಾತ್ರ ಮಾಡುವಾಗ ಕೆಲವರಿಗೆ ವಿಶಿಷ್ಟ ಅನುಭವ ಆಗುತ್ತೆ. ಆದರೆ, ಅವಿನಾಶ್ ಅಘೋರಿಯಾಗಿ ಮತ್ತೆ ನಟಿಸುವುದಿಲ್ಲ ಎಂದಿದ್ದಕ್ಕೆ ಬೇರೆಯದ್ದೇ ಕಾರಣವಿದೆ. ಅವಿನಾಶ್ ಅವರು ಅಘೋರಿ ವೇಷ ಧರಿಸಿಕೊಂಡೆ ಈ ಪಾತ್ರ ಮಾಡಬೇಕಿತ್ತು. ಗಡ್ಡ, ಗೆಟಪ್ ಎಲ್ಲವೂ ಪ್ರತಿ ಬಾರಿ ಹಾಕಬೇಕಿತ್ತು. ಆಗ ಅವಿನಾಶ್ ಅವರು ಹೇಳಿದ್ದರು. ಇನ್ಮುಂದೆ ಈ ಪಾತ್ರವನ್ನು ಮತ್ತೆಂದು ಮಾಡುವುದಿಲ್ಲ. ಮಾತ್ರವಲ್ಲದೇ ಇಂತಹ ಪಾತ್ರ ಮುಂದೆ ಮಾಡಲು ಸಾಧ್ಯವೂ ಇಲ್ಲ. ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ. ಈ ಪಾತ್ರ ಅವರಿಗೆ ತುಂಬಾನೇ ಇಷ್ಟ ಆಗಿತ್ತು. ಹಾಗಾಗಿ ಇದನ್ನು ಯಾವತ್ತೂ ಕಳೆದುಕೊಳ್ಳಲು ಇಷ್ಟವಿಲ್ಲವೆಂದು ಡಬ್ಬಿಂಗ್ ಮಾಡುವಾಗ ಅವಿನಾಶ್ ಅವರು ಹೇಳಿದ್ದರು ಎಂದು ನಿರ್ದೇಶಕ ಪ್ರಮೋದ್ ತಿಳಿಸಿದರು.

ಅಘೋರಿ ಪಾತ್ರ ನೋಡಿದಷ್ಟು ಸುಲಭವಲ್ಲ. ಅಘೋರಿಗಳ ಹಾವ-ಭಾವವನ್ನೇ ಅನುಸರಿಬೇಕು. ಅವರನ್ನು ಅನುಸರಿಸಿ, ತೆರೆಮೇಲೆ ನಟಿಸಬೇಕು. ಇಂತಹ ಪಾತ್ರಕ್ಕೆ ಅವಿನಾಶ್ ಅವರೇ ಸೂಕ್ತ. ಅಘೋರಿ ಪಾತ್ರಕ್ಕೆ ಅವಿನಾಶ್ ಅವರನ್ನೇ ಆಯ್ಕೆ ಮಾಡಿದ್ದಕ್ಕೆ ಒಂದು ಕಾರಣವಿದೆ. ಈ ಪಾತ್ರಕ್ಕೆ ಶೇ.100ರಷ್ಟು ನ್ಯಾಯ ಕೊಡಲು ಅವರಿಂದ ಮಾತ್ರ ಸಾಧ್ಯ. ಮನಪೂರ್ವಕವಾಗಿ ಈ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವು ಪ್ರಕೃತಿಯ ಬಗ್ಗೆ ವಿವರಣೆ ನೀಡುವಾಗ, ಅದನ್ನು ಒಬ್ಬ ದೊಡ್ಡ ನಟನಿಂದಲೇ ಹೇಳಿಸಬೇಕಿತ್ತು. ಹೀಗಾಗಿ 600ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿರುವ ನಟನಿಂದ ಈ ಮಾತು ಬಂದಾಗ, ಅದು ಅರ್ಥ ಪೂರ್ವಕವಾಗಿ ಇರುತ್ತದೆ ಎಂದು ನಿರ್ದೇಶಕ ಪ್ರಮೋದ್ ಹೇಳಿದರು.

'ಅಘೋರ' ಚಿತ್ರವನ್ನು ನಾವು ಕೋವಿಡ್‌ಗೂ ಮುನ್ನವೇ ಚಿತ್ರೀಕರಿಸಿದ್ದೇವು. ಸಣ್ಣ-ಪುಟ್ಟ ಪ್ಯಾಚ್ ವರ್ಕ್ ಉಳಿದುಕೊಂಡಿಂತು. ಇನ್ನೇನು ಶುರು ಮಾಡಬೇಕು ಅನ್ನುವಷ್ಟರಲ್ಲಿ ಕೋವಿಡ್ ಬಂದುಬಿಟ್ಟಿತ್ತು. ಅನಂತರ ಮತ್ತೆ ಶೂಟಿಂಗ್ ಕಂಪ್ಲಿಟ್ ಮಾಡಿದೇವು. ಎರಡನೇ ಲಾಕ್‌ಡೌನ್ ವೇಳೆ ಸುಮ್ಮನೆ ಕೂರುವುದು ಬೇಡಾ ಅಂತ ಸುಮಾರು 16 ರಾಷ್ಟ್ರಗಳಿಗೆ 'ಅಘೋರ' ಚಿತ್ರವನ್ನು ಕಳುಹಿಸಿದ್ದೇವು. ಎಲ್ಲಾ ಚಲನಚಿತ್ರೋತ್ಸವದಲ್ಲಿ 35 ಪ್ರಶಸ್ತಿಗಳನ್ನು ಗೆದ್ದಿತ್ತು. ಮೇಕಪ್‌ನಿಂದ ಹಿಡಿದು ಪ್ರತಿಯೊಂದು ಕ್ಯಾಟಗರಿಯಲ್ಲೂ ಗೆದ್ದಿದ್ದೇವೆ ಎಂಬ ಮಾಹಿತಿಯನ್ನು ಪ್ರಮೋದ್ ಹಂಚಿಕೊಂಡರು.

click me!