Film Review : ಯಲ್ಲೋ ಬೋರ್ಡ್‌

Kannadaprabha News   | Asianet News
Published : Mar 06, 2022, 09:10 AM IST
Film Review : ಯಲ್ಲೋ ಬೋರ್ಡ್‌

ಸಾರಾಂಶ

ಹೆಣ್ಣು ಮಕ್ಕಳ ಪಾಲಿನ ಆಪತ್ಬಾಂಧವ. ಕ್ಯಾಬ್‌ ಚಾಲಕನನ್ನು ಹೀರೋ ಮಾಡಿರುವ ಚಿತ್ರ ‘ಯಲ್ಲೋ ಬೋರ್ಡ್‌’.

ಆರ್‌. ಕೇಶವಮೂರ್ತಿ

ಆಟೋರಾಜಾ ಆಟೋ ಡ್ರೈವರುಗಳನ್ನು ಹೀರೋ ಮಾಡಿತು. ಈಗ ಕ್ಯಾವರ ಬ್‌ ಚಾಲಕನನ್ನು ಹೀರೋ ಮಾಡಿರುವ ಚಿತ್ರ ‘ಯಲ್ಲೋ ಬೋರ್ಡ್‌’. ಪ್ರದೀಪ್‌ ನಟನೆಯ ಈ ಚಿತ್ರವನ್ನು ನಿರ್ದೇಶಕ ತ್ರಿಲೋಕ್‌ ರೆಡ್ಡಿ ಪಕ್ಕಾ ಕಮರ್ಷಿಯಲ್‌ ಹಾಗೂ ಮಾಸ್‌ ಫ್ಲೇವರ್‌ನಲ್ಲೇ ತೆರೆ ಮೇಲೆ ತಂದಿದ್ದಾರೆ. ಈ ಜರ್ನಿಯಲ್ಲಿ ರೋಚಕ ತಿರುವುಗಳಿವೆ. ಎದುರಾಗುವಮಾತು, ಸ್ನೇಹ, ಒಡನಾಟ ಕೂಡ ಉಳಿದು ಬಿಡುತ್ತದೆ.

ತಾರಾಗಣ: ಪ್ರದೀಪ್‌, ಸ್ನೇಹಾ ಖುಷಿ, ಅಹಲ್ಯ ಸುರೇಶ್‌, ಸಾಧು ಕೋಕಿಲಾ, ಅಶ್ವಿನ್‌ ಹಾಸನ್‌, ಭವಾನಿ ಪ್ರಕಾಶ್‌, ಶ್ರೀನಿವಾಸ್‌, ಅಭಿಮನ್ಯು ಪ್ರಜ್ವಲ್‌

ನಿರ್ದೇಶನ: ತ್ರಿಲೋಕ್‌ ರೆಡ್ಡಿ

ರೇಟಿಂಗ್‌- 4

ಆದರೆ, ಪ್ರಯಾಣವು ಒಂದಿಷ್ಟುಅವಾಂತರಗಳಿಗೂ ದಾರಿ ಮಾಡಿಕೊಡುತ್ತದೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಎಲ್ಲರೂ ಶಿಕ್ಷೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣ ಆದರೆ ಏನಾಗುತ್ತದೆ ಎನ್ನುವ ಸುತ್ತ ಒಬ್ಬ ಕ್ಯಾಬ್‌ ಚಾಲಕನ ಜೀವನ ತೆರೆದುಕೊಳ್ಳುತ್ತದೆ. ಪ್ರೀತಿ- ಪ್ರೇಮ, ಸ್ನೇಹಿತರು, ಸಾಮಾಜಿಕ ಕಾಳಜಿಯುಳ್ಳ ಕ್ಯಾಬ್‌ ಚಾಲಕನನ್ನು ಒಬ್ಬ ವ್ಯಕ್ತಿ, ವಿಲನ್‌ ಆಗಿಸುವ ಪ್ರಯತ್ನ ಮಾಡುತ್ತಾನೆ. ಈ ಪ್ರಯತ್ನದಲ್ಲಿ ಒಂದು ಸಾವು ಸಂಭವಿಸಿ, ಕ್ಯಾಬ್‌ ಚಾಲಕ ಜೈಲು ಸೇರುತ್ತಾನೆ. ಈ ನಡುವೆ ಟ್ಯಾಕ್ಸಿ ಡ್ರೈವರ್‌ಗಳು ಅದರಲ್ಲೂ ಯಲ್ಲೋ ಬೋರ್ಡ್‌ ಡ್ರೈವರ್‌ಗಳನ್ನು ಕಂಡರೆ ಆಗದ ಪೊಲೀಸ್‌ ಅಧಿಕಾರಿ ಬೇರೆ ಚಾಲಕನ ಮೇಲೆ ಸಮರ ಸಾರುತ್ತಾರೆ.

Film Review: ಸೋಲ್ಡ್‌

ಇಲ್ಲಿ ಚಿತ್ರದ ನಾಯಕ ಕ್ಯಾಬ್‌ ಚಾಲಕನಾಗಿ ಕಾಣಿಸಿಕೊಂಡಿದ್ದಾನೆ. ನಿರ್ದೇಶಕನ ನಿರೂಪಣೆಯ ತಂತ್ರ, ಪಾತ್ರಧಾರಿಗಳ ಸಹಜ ನಟನೆ ಹಾಗೂ ಚಿತ್ರದ ಕತೆ ಒಳಗೊಂಡಿರುವ ಸಂದೇಶ ‘ಯಲ್ಲೋ ಬೋರ್ಡ್‌’ ಪ್ರೇಕ್ಷಕರ ಪ್ರಯಾಣದ ರಾಯಭಾರಿ ಆಗುತ್ತದೆ. ಕ್ಯಾಬ್‌ ಚಾಲಕನಾಗಿ ಪ್ರದೀಪ್‌, ಫೈಟ್‌ ಹಾಗೂ ಡೈಲಾಗ್‌ ಡೆಲಿವರಿಯಲ್ಲಿ ಮಿಂಚಿದ್ದಾರೆ. ಅಹಲ್ಯಾ ಸುರೇಶ್‌ ಅವರ ಸಹಜ ನಟನೆ, ಸಾಧು ಕೋಕಿಲಾ ಕಾಮಿಡಿ ಪ್ರೇಕ್ಷಕರಿಗೆ ಕಿಕ್‌. ಸ್ನೇಹಿತರಾಗಿ ಕಾಣಿಸಿಕೊಂಡಿರುವ ಅಶ್ವಿನ್‌ ಹಾಸನ್‌ ಗಮನ ಸೆಳೆಯುತ್ತಾರೆ. ತುಂಬಾ ದಿನಗಳ ನಂತರ ಪ್ರೇಕ್ಷಕರ ಮುಂದೆ ಬಂದಿರುವ ಪ್ರದೀಪ್‌, ನೋಡುವಂತಹ ಚಿತ್ರ ಕೊಟ್ಟಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?