ಚಿತ್ರ ವಿಮರ್ಶೆ: ಮೂರ್ಕಲ್ ಎಸ್ಟೇಟ್

By Kannadaprabha News  |  First Published Oct 26, 2019, 9:05 AM IST

ಈ ವರ್ಷದ ಅಂತ್ಯದ ವೇಳೆಗೆ ಕನ್ನಡಕ್ಕೆ ಮತ್ತೊಂದು ಹಾರರ್‌ ಸಿನಿಮಾ ಸೇರ್ಪಡೆಯಾಗಿದೆ. ಅದು ‘ಮೂರ್ಕಲ್‌ ಎಸ್ಟೇಟ್‌’. ಕಾಲೇಜು ಮುಗಿಸಿದ ಏಳು ಮಂದಿ ಗೆಳೆಯರು (ನಾಲ್ಕು ಹುಡುಗಿಯರು, ಮೂವರು ಹುಡುಗರು) ಎಲ್ಲಾದರೂ ಸುತ್ತಾಡಿ ಬರೋಣ ಎಂದುಕೊಂಡು ಔಟಿಂಗ್‌ಗೆ ಮೂರ್ಕಲ್‌ ಎಸ್ಟೇಟ್‌ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿಗೆ ಹೋಗುವುದಕ್ಕೆ ಮೊದಲು ನಾಯಕ ಮಾಡಿದ ಸಣ್ಣ ಯಡವಟ್ಟು ಇಡೀ ಚಿತ್ರವನ್ನು ಮುನ್ನಡೆಸುತ್ತದೆ. 


ಕೆಂಡಪ್ರದಿ

ಆ ಯಡವಟ್ಟು ಏನು ಎಂದು ಹೇಳುವುದಕ್ಕೆ ಪದಗಳು ಸಾಲವು. ಕಣ್ಣಾರೆ ಚಿತ್ರವನ್ನೇ ನೋಡಬೇಕು. ಅಷ್ಟುಧಾರಾಳ ನಿರ್ದೇಶಕ ಪ್ರಮೋದ್‌ ಕುಮಾರ್‌. ಒಂದು ಶಾಟ್‌ ಅನ್ನು ಎಷ್ಟುಸಾಧ್ಯವೋ ಅಷ್ಟುಎಳೆಯುವುದು, ಲಾಜಿಕ್‌ ಇಲ್ಲದೇ ಕತೆಯನ್ನು ಎಳೆದುಕೊಂಡು ಹೋಗುವುದು ಅವರಿಂದ ಸಾಧ್ಯವಾಗಿದೆ.

Tap to resize

Latest Videos

ಹಾರರ್‌ ಸಿನಿಮಾಗಳಿಗೆ ಲಾಜಿಕ್‌ ಚೆನ್ನಾಗಿ ಇರಬೇಕು. ದೃಶ್ಯಗಳು ಸರಿಯಾಗಿ ಕೊಂಡಿಯಂತೆ ಬೆಸೆದುಕೊಂಡು ಚಿತ್ರಕತೆಯನ್ನು ಗಟ್ಟಿಮಾಡಬೇಕು. ಅದನ್ನು ಬಿಟ್ಟು ಅರ್ಥವಿಲ್ಲದೇ ಎಲ್ಲೆಲ್ಲೋ ಓಡಿದರೆ ಏನಾಗುತ್ತದೆ ಎನ್ನುವ ಸ್ಪಷ್ಟನಿದರ್ಶನಕ್ಕೆ ‘ಮೂರ್ಕಲ್‌ ಎಸ್ಟೇಟ್‌’ ಮಸ್‌್ತ ಉದಾಹರಣೆ.

ಚಿತ್ರ ವಿಮರ್ಶೆ: ಗಂಟುಮೂಟೆ

ಮೂರ್ಕಲ್‌ ಎಸ್ಟೇಟ್‌ ಒಳಗೆ ಸೇರಿಕೊಳ್ಳುವ ಏಳು ಮಂದಿ ಗೆಳೆಯರು ಏನೆಲ್ಲಾ ತೊಂದರೆ ಅನುಭವಿಸುತ್ತಾರೆ. ದೆವ್ವದ ಕಾಟ ಅವರನ್ನು ಹೇಗೆ ಬಾಧಿಸುತ್ತದೆ ಎನ್ನುವುದು ಚಿತ್ರದ ಮೇನ್‌ ಥೀಮ್‌ ಆದರೂ ಮಧ್ಯೆ ಮಧ್ಯೆದಲ್ಲಿ ಪ್ರೀತಿ, ತಮಾಷೆಯನ್ನು ತಂದಿದ್ದಾರೆ. ಇದೂ ಕೂಡ ಪ್ರೇಕ್ಷಕರನ್ನು ರಂಚಿಸುವಲ್ಲಿ ವರ್ಕ್ಔಟ್‌ ಆದಂತೆ ಕಾಣುವುದಿಲ್ಲ. ಛಾಯಾಗ್ರಹಣ, ಸಂಗೀತ, ಹಿನ್ನೆಲೆ ಸಂಗೀತವೂ ಸಪ್ಪೆ. ಡೈಲಾಗ್‌ಗಳಲ್ಲಿ ಹೊಸತನವಿದೆ ಎಂದು ಅನ್ನಿಸಿದರೂ ಅದು ಡಬ್ಬಲ್‌ ಮೀನಿಂಗ್‌ಗೆ ಹೆಚ್ಚಿನ ಒತ್ತು ಕೊಡುವತ್ತ ಚಿತ್ತ ನೆಟ್ಟಿದೆ.

ಚಿತ್ರ ವಿಮರ್ಶೆ: ಭರಾಟೆ

ನಟನೆಯಲ್ಲಿಯೂ ಹೇಳಿಕೊಳ್ಳುವಂತಹ ಗಟ್ಟಿನತವಿಲ್ಲ. ಹಾರರ್‌ ದೃಶ್ಯಗಳು, ಬಿಜಿಎಂಗಳು ಹೆದರಿಸುವುದಕ್ಕಾಗಿಯೇ ಏನೇನೋ ಸರ್ಕಸ್‌ ಮಾಡಿದಂತಿವೆ. ಯಾವುದೋ ಆಟವಾಡಿ ಭೂತವನ್ನು ಆಹ್ವಾನಿಸುವುದು, ಅದನ್ನು ವಾಪಸ್‌ ಕಳಿಸುವುದಕ್ಕೆ ಆಗದೇ ಇರುವುದು, ಇಷ್ಟೆಲ್ಲಾ ಇದ್ದರೂ ಯಾವುದೇ ಮಂತ್ರವಾದಿ ಎಂಟ್ರಿಯಾಗದೇ ಇರುವುದು ಹೊಸತನ ಎನಿಸಿದರೂ ಅದನ್ನು ಪ್ರಸೆಂಟ್‌ ಮಾಡುವುದರಲ್ಲಿ ನಿರ್ದೇಶಕರು ಒಂದಷ್ಟುಹಿಂದೆ ಬಿದ್ದಿರುವುದು ಎಲ್ಲಾ ಕಡೆಯಲ್ಲೂ ಎದ್ದು ಕಾಣುತ್ತದೆ.

click me!