ಈ ಸಿನಿಮಾ ಕ್ಲೈಮ್ಯಾಕ್ಸ್ ತಲುಪುವ ಹೊತ್ತಿಗೆ ಪ್ರೇಕ್ಷಕರಲ್ಲಿ ಅಚ್ಚರಿ ಮೂಡುತ್ತದೆ. ನಿರೀಕ್ಷೆಯೇ ಮಾಡಿರದ ತಿರುವೊಂದು ತೆರೆ ಮೇಲೆ ಮೂಡುವ ಮೂಲಕ ಚಿತ್ರದ ಕೊನೆಯ ಅಂಶ ಜೀವಾಳ ಅನಿಸಿಬಿಡುತ್ತದೆ.
ಆರ್ ಕೇಶವಮೂರ್ತಿ
ಉಳಿದಂತೆ ಚಿತ್ರದ ಆರಂಭದಿಂದಲೂ ನೋಡುಗರನ್ನು ಹಿಡಿದಿಟ್ಟುಕೊಳ್ಳುವುದು ಛಾಯಾಗ್ರಹಣ, ಗುರು ಕಿರಣ್ ಅವರ ಹಿನ್ನೆಲೆ ಸಂಗೀತದ ಜತೆಗೆ ಅನುಷಾ ರಂಗನಾಥ್ ಅವರು ಮುದ್ದು ಮುಖ, ನಾಯಕಿ ಹೇಳುವ ಸುಳ್ಳು ಕತೆಗಳು. ಎಲಿಯನ್, ಬ್ರಿಟಿಷ್ ದೆವ್ವಗಳು ಇಂಗ್ಲಿಷ್ ಕಲಿಸಿದ್ದು, ನಾಸಾದಿಂದ ಅಪಹರಣ ಮಾಡಕ್ಕೆ ಬಂದಿದ್ದು, ಡೈನೋಸಾರ್‌ಗಳ ಸಂಬಂಧಿಗಳೇ ಹಲ್ಲಿಗಳು, ಲಾವರಸ ತಡೆಯುವ ಕತೆ.. ಹೀಗೆ ನಾಯಕಿ ನಾಯಕನಿಗೆ ಹೇಳುವ ಸಂಗತಿಗಳು ಮನರಂಜನೆ ಕೊರತೆಯನ್ನು ನೀಗಿಸುತ್ತವೆ.
ಅಂದವಾದ ಪ್ರೇಮ ಕತೆಯ ಸಿನಿಮಾ ಇದು: ಅನುಷಾ ರಂಗನಾಥ್
ಹಚ್ಚ ಹಸಿರಿನಿಂದ ಕೂಡಿದ ಊರು. ಬಾಲ್ಯದಲ್ಲೇ ಸ್ನೇಹಿತರಾಗುವ ನಾಯಕಿ- ನಾಯಕಿ. ತನ್ನನ್ನ ಮುಟ್ಟಿದರೆ ಸಾಯುತ್ತಾರೆ. ಅಂಥದ್ದೊಂದು ಶಾಪ ಹೊತ್ತು ತಾನು ಹುಟ್ಟಿದ್ದೇನೆ ಎಂದು ಹೇಳುವ ಮೂಲಕ ಬಾಲ್ಯದಲ್ಲೇ ಎಲ್ಲರಲ್ಲೂ ಭಯ ಮೂಡಿಸುವ ನಾಯಕಿ, ಎಲ್ಲರ ಪಾಲಿಗೆ ಡೇಂಜರ್ ಆದರೆ ನಾಯಕನಿಗೆ ಇವಳೆಂದರೆ ಏನೋ ಆಕರ್ಷಣೆ. ಮುಂದೆ ನಾಯಕನ ಕುಟುಂಬ ಊರು ಬಿಟ್ಟು ನಗರ ಸೇರುತ್ತದೆ. ಹತ್ತು ವರ್ಷದ ನಂತರ ಮತ್ತೆ ಅದೇ ಹುಡುಗಿಯನ್ನು ಹುಡುಕಿ ಹೋಗುವ ನಾಯಕ.
ಅರೆರೇ...ಏನಾಯ್ತು ಶ್ರದ್ಧಾಗೆ? ಈಗ ಹೇಗಾಗಿದ್ದಾರೆ ನೋಡಿ! .
ತಾನು ಹೇಳುವ ಕತೆಗಳು ಸುಳ್ಳಾಗಿದ್ದರೂ ನಿಜವೆಂದು ನಂಬುವ ನಾಯಕಿ ಅವನಿಗಾಗಿ ಕಾಯುತ್ತಿದ್ದಾಳೆ. ಸ್ನೇಹ ಮತ್ತು ಆಕರ್ಷಣೆ ಪ್ರೀತಿಗೆ ತಿರುಗುತ್ತದೆ. ಪ್ರೀತಿ ಹೇಳಬೇಕು ಎನ್ನುವ ಹೊತ್ತಿಗೆ ಹುಡುಗಿ, ಅಮೆರಿಕಾಗೆ ಹೊರಟಿ ನಿಂತಿದ್ದಾಳೆ. ಆದರೆ, ವಿದೇಶಕ್ಕೆ ಹೊರಡುತ್ತೇನೆ ಎಂದವಳು ಆಸ್ಪತ್ರೆಯಲ್ಲಿ ಕಾಣುತ್ತಾಳೆ. ಆಗ ಕತೆಯ ಮತ್ತೊಂದು ಮುಖ ದರ್ಶನವಾಗುತ್ತದೆ.
ಅರ್ಥ ಹೆಸರಿನ ನಾಯಕಿಯ ಬಾಲ್ಯದ ಜೀವನ ತೆರೆದುಕೊಳ್ಳುತ್ತದೆ. ನಾಯಕ ನಿಂತನಲ್ಲೇ ಕುಸಿದು ಬೀಳುತ್ತಾನೆ. ಒಂದು ದೊಡ್ಡ ಮೆಡಿಕಲ್ ಮಾಫಿಯಾ ಅನಾವರಣಗೊಳ್ಳುತ್ತದೆ. ಆಗ ನಿರ್ದೇಶಕನ ಕತೆಯ ಅರಿವಿಗೆ ನೋಡುಗರು ಭೇಷ್ ಎನ್ನುತ್ತಾರೆ. ಸುಳ್ಳು ಕತೆಗಳನ್ನು ಹೇಳಿ ಎಲ್ಲರಿಂದ ದೂರ ಇರುವ ನಾಯಕಿಯ ಜೀವನದ ಹಿಂದಿನ ಗುಟ್ಟೇನು, ತಾನು ಎಲಿಯನ್ ಎಂದು ಹೇಳಿಕೊಂಡು ಓಡಾಡುವುದು ಯಾಕೆ, ಆ ಮೆಡಿಕಲ್ ಮಾಫಿಯಾ ಯಾವುದು ಎಂಬುದೇ ಚಿತ್ರದ ಅಸಲಿ ಕತೆ.
ಬಿಗ್ ಬಾಸ್ ಸ್ಟೈಲ್‌ವಾಲಿ; ರಿಯಲ್ ಲೈಫ್‌ನಲ್ಲಿ ಯಾಕಿಂಗೆ?
‘ಅಂದವಾದ’ ಪ್ರೇಮ ಕತೆಯಲ್ಲಿ ಆಕಸ್ಮಿಕ ತಿರುವೊಂದು ಆಗಮಿಸುವುದು ಹೀಗೆ. ದೊಡ್ಡ ಸ್ಟಾರ್ ನಟನ ಅಭಿನಯದಲ್ಲಿ ಮೂಡಬಹುದಾದ ಕತೆಯನ್ನು ನಿರ್ದೇಶಕರು ಸಾಧಾರಾಣವಾಗಿ ಹೇಳಿದಂತಿದೆ. ಆದರೆ, ಇದನ್ನು ಹೇಳುವುದಕ್ಕೆ ಸಿನಿಮಾ ಬಹುದೂರ ಸಾಗುತ್ತದೆ. ವಿರಾಮದ ನಂತರ ಸಂಕಲನಕಾರನ ಗೈರು ಹಾಜರಿ ಎದ್ದು ಕಾಣುತ್ತದೆ. ಬ್ಯಾಂಕಾಕ್, ಸಕಲೇಶ್ವರದಲ್ಲಿ ಚಿತ್ರೀಕರಣ ಮಾಡಿರುವ ಎರಡು ಹಾಡುಗಳು ಕೇಳಲು ಮತ್ತು ನೋಡಲು ಖುಷಿ. ಅನುಷಾ ರಂಗನಾಥ್ ತಮ್ಮ ಪಾತ್ರಕ್ಕೆ ಜೀವ ತುಂಬಿದರೆ, ಜೈ ಮತ್ತಷ್ಟುಪಳಬೇಕು ಅನಿಸುತ್ತದೆ. ಹರೀಶ್ ರೈ ಪಾತ್ರ ವಿಶೇಷವಾಗಿದೆ. ಕೆ ಎಸ್ ಶ್ರೀಧರ್ ಸಹಜ ನಟನೆಯಿಂದ ಗಮನ ಸೆಳೆಯುತ್ತಾರೆ.