
ಸಿನಿಮಾ ನಾಯಕಿ ಮೀರಾ ಹೈಸ್ಕೂಲಿನಲ್ಲಿ ಓದುತ್ತಿರುತ್ತಾಳೆ. ನಾಯಕಿಗೆ ನಟ ಸಲ್ಮಾನ್ ಖಾನ್ ಎಂದರೆ ಪಂಚ ಪ್ರಾಣ. ತನ್ನ ಕ್ಲಾಸಿನಲ್ಲಿ ಓದುತ್ತಿರುವ ಮಧು ನಾಯಕ ನೋಡುವುದಕ್ಕೆ ಒಂಚೂರು ಸಲ್ಮಾನ್ ಥರಾನೇ ಇದ್ದಾನೆ ಎಂಬ ಕಾರಣಕ್ಕೆ ಆತನ ಮೇಲೆ ನಾಯಕಿಗೆ ಪ್ರೀತಿ ಹುಟ್ಟುತ್ತದೆ. ಕೆಲವೇ ಕೆಲದಿನಗಳಲ್ಲಿ ಒನ್ ವೇ ಇದ್ದ ಲವ್ ಸ್ಟೋರಿ ಟು ವೇ ಆಗುತ್ತೆ. ನಾಯಕ ಎಲ್ಲರಂತೆ ಬುದ್ದಿವಂತ ಆಗಿರುವುದಿಲ್ಲ. ಓದಿಗಿಂತ ಹರೆಯದ ಆಸೆಗಳೇ ಮಧುಗೆ ಹೆಚ್ಚು ಗಮನ ಸೆಳೆಯುತ್ತಿರುತ್ತದೆ. ಹೀಗೆ ಪ್ರಣಯ ಪಕ್ಷಿಯಂತಿದ್ದ ನಾಯಕ ನಾಯಕಿ ಮುಂದಿನ ದಿನಗಳಲ್ಲಿ ಏನಾಗುತ್ತಾರೆ? ಪರೀಕ್ಷೆಯಲ್ಲಿ ಫೇಲ್ ಆದ ನಾಯಕ , ಲವ್ ನಲ್ಲಿ ಪಾಸ್ ಆಗ್ತಾನಾ? ಅನ್ನೋದೆ ಸಿನಿಮಾ ಸ್ಟೋರಿ.
ಇಂತಹ ಸ್ಕೂಲ್ ಸ್ಟೋರಿಗಳು ಕನ್ನಡಕ್ಕೆ ಹೊಸತಲ್ಲ. ಆದ್ರೆ ಈ ಕಥೆ 90 ರ ದಶಕದಲ್ಲಿ ಸಾಗುತ್ತದೆ. ಅದನ್ನ ತೆರೆ ಮೇಲೆ ಸುಂದರವಾಗಿ ತೋರಿಸಿಕೊಟ್ಟಿದ್ದಾರೆ. ಇನ್ನು ಶಾಲೆಯಲ್ಲಿ ನಡೆಯುವ ಸಣ್ಣ ಪುಟ್ಟ ಸಂಗತಿಗಳನ್ನ ತೆರೆ ಮೇಲೆ ಕಟ್ಟಿಕೊಟ್ಟಿರೋ ರೀತಿ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ನಿರ್ದೇಶಕಿ ಆಗಿರೋ ಕಾರಣವೋ ಏನೋ ಇಡೀ ಸಿನಿಮಾ ನಾಯಕಿ ದೃಷ್ಟಿಕೋನದಲ್ಲಿ ಸಾಗುತ್ತೆ.ಇನ್ನು ಚಿತ್ರದಲ್ಲಿ ಬೇಕಾಬಿಟ್ಟಿ ಬರೋ ಮುತ್ತಿನ ದೃಶ್ಯಗಳು ಕೊಂಚ ನೋಡುಗರಿಗೆ ಕಿರಿಕಿರಿ ಮಾಡುತ್ತೆ.
ಇನ್ನು ಪಾತ್ರವರ್ಗದ ವಿಚಾರವಾಗಿ ಹೇಳುವುದಾದರೆ ನಾಯಕಿ ತೇಜು ಬೆಳವಾಡಿ ನಾಯಕ ನಿಶ್ಚಿತ್ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಸಿನಿಮಾದಲ್ಲಿ ಅಪರಾಜಿತ್ ಸ್ರಿಸ್ ಅವರ ಹಿನ್ನೆಲೆ ಸಂಗೀತ. ಸಹದೇವ್ ಕೆಲವಾಡಿ ಅವರ ಛಾಯಾಗ್ರಹಣ ಸಿನಿಮಾ ಫ್ಲಸ್ ಪಾಯಿಂಟ್ ಅಂದ್ರೆ ತಪ್ಪಿಲ್ಲ. ವಾರಾಂತ್ಯಕ್ಕೆ ಮನೋರಂಜನೆಗಾಗಿ ಗಂಟುಮೂಟೆಯನ್ನ ನೋಡಿದ್ರೆ ಲಾಸ್ ಇಲ್ಲ!
ಪವಿತ್ರ .ಬಿ, ಸುವರ್ಣ ನ್ಯೂಸ್ ಸಿನಿ ರಿಪೋರ್ಟರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.