ಚಿತ್ರ ವಿಮರ್ಶೆ: ಡೆಮೊಪೀಸ್‌

Kannadaprabha News   | Asianet News
Published : Feb 15, 2020, 10:40 AM ISTUpdated : Feb 15, 2020, 10:45 AM IST
ಚಿತ್ರ ವಿಮರ್ಶೆ: ಡೆಮೊಪೀಸ್‌

ಸಾರಾಂಶ

ಡೆಮೊಪೀಸ್ ಅಂದಾಕ್ಷಣ ನಮ್ಮ ಅರಿವಿಗೆ ಬರುವುದು ವಾಹನ ಇಲ್ಲವೇ ವಸ್ತು. ಆದರೆ ಇಲ್ಲಿ ಮನುಷ್ಯ ಕೂಡ ಒಂದು ಡೆಮೊಪೀಸ್. ಅದು ಹೇಗೆ, ಏನು ಎನ್ನುವುದು ಈ ಚಿತ್ರದ ಸಸ್ಪೆನ್ಸ್ ಸ್ಟೋರಿ.  

ದೇಶಾದ್ರಿ

ಅದು ಕತೆಯ ಹೃದಯ ಭಾಗವಾದರೆ, ಬೇಜವಾಬ್ದಾರಿ ಹುಡುಗನೊಬ್ಬನ ಪ್ರೀತಿ-ಪ್ರೇಮದ ಹುಚ್ಚಾಟ, ಬಹುಬೇಗ ಹಣ ಸಂಪಾದಿಸಬೇಕೆನ್ನುವ ಆಸೆಯಲ್ಲಿ ಕ್ರಿಕೆಟ್ ಬುಕ್ಕಿಂಗ್ ಜೂಜಾಟದಲ್ಲಿ ಸಿಲುಕುವುದರಿಂದ ಆಗುವ ಅಪಾಯ, ಪೋಷಕರು ಮತ್ತು ಮಕ್ಕಳ ನಡುವಿನ ಭಾವನಾತ್ಮಕ ಸಂಬಂಧದ ಮನ ಮಿಡಿಯುವ ಎಳೆಗಳ ಮೂಲಕ ತೀರಾ ಸರಳವಾದ ಕತೆಯೊಂದನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ವಿವೇಕ್ ಗೌಡ.

ಇದು ಅವರ ಚೊಚ್ಚಲ ಚಿತ್ರ. ಆದರೂ ಒಬ್ಬ ಅನುಭವಿಯ ಛಾಯೆ ಅವರ ನಿರ್ದೇಶನದಲ್ಲಿದೆ. ಚಿತ್ರ ಅದೇ ಕಾರಣಕ್ಕೆ ಆರಂಭದಿಂದ ಅಂತ್ಯದವರೆಗೆ ಬೇಸರ ಮೂಡಿಸದೆ ನೋಡಿಸಿಕೊಂಡು ಸಾಗುತ್ತದೆ. ಸಿನಿಮಾ ಶುರುವಾಗುವುದೇ ಕಥಾನಾಯಕ ಹರ್ಷನ ಆತ್ಮಹತ್ಯೆ ಪ್ರಕರಣದ ಮೂಲಕ. ಅದು ಯಾಕೆ, ಏನು ಎನ್ನುವುದನ್ನು ತೋರಿಸಲು ಪ್ಲಾಷ್‌ಬ್ಯಾಕ್ ತಂತ್ರ ಬಳಸಿಕೊಂಡಿದ್ದಾರೆ ನಿರ್ದೇಶಕರು. ಇದು ಮೊದಲಾ ರ್ಧದ ಕತೆ. ಅದರ ಮುಂದಿನದು ದ್ವಿತೀಯಾರ್ಧ. ಕೆಲವು ಸನ್ನಿವೇಶಗಳು ಇಲ್ಲಿ ಉಹೆಗೆ ನಿಲುಕುವುದಿಲ್ಲ.

ಚಿತ್ರ ವಿಮರ್ಶೆ: ಮಾಲ್ಗುಡಿ ಡೇಸ್

ಆತ್ಮಹತ್ಯೆ ಮಾಡಿಕೊಂಡ ಕಥಾ ನಾಯಕ ಯಮ ಲೋಕದ ಲ್ಲಿ ಬ್ರಹ್ಮನನ್ನು ಭೇಟಿ ಮಾಡುವುದು, ಅಲ್ಲಿ ಬ್ರಹ್ಮನ ವರ ಪಡೆದು ವಾಪಸ್ ಭೂಮಿಗೆ ಬರುವುದು, ಬ್ರಹ್ಮ ಕೊಟ್ಟ ವರದಂತೆ ಅಪಾರವಾದ ಹಣ ಸಂಪಾದಿ ಸುವುದೆಲ್ಲ ಸೋಜಿಗವೇ. ಆದರೂ ಇದು ಸಿನಿಮಾ. ಇಂತಹ ಹಲವು ದೋಷಗಳು ಇಲ್ಲಿವೆ. ಇನ್ನು ಇದು ಯುವ ಜನರನ್ನೇ ಪ್ರಧಾನವಾಗಿಸಿಕೊಂಡ ಕತೆಯಾದರೂ, ಮಕ್ಕಳ ಬೆಳವಣಿಗೆ ಬಗ್ಗೆ ಅಪಾರ ಕನಸು ಹೊತ್ತ ಪೋಷಕರ ಮನಸ್ಸಿಗೆ ನಾಟುತ್ತದೆ. ಕಲಾವಿದರ ಅಭಿನಯದ ಪೈಕಿ ಭರತ್ ಬೋಪಣ್ಣ ಇಲ್ಲಿನ ಪ್ರಮುಖ ಆಕರ್ಷಣೆ. ಕಿರುತೆರೆಯಲ್ಲಿನ ನಟನೆ ಯ ಅನುಭವವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಚಿತ್ರ ವಿಮರ್ಶೆ : ದಿಯಾ

ಕಥಾ ನಾಯಕ ಹರ್ಷ ಪಾತ್ರಕ್ಕೆ ಅಕ್ಷರಶಃ ಜೀವ ತುಂಬಿದ್ದಾರೆ. ಅವರ ಅಭಿನಯದಲ್ಲಿ ಲವಲವಿಕೆಯಿದೆ. ನಟನೆಯ ಜತೆಗೆ ಆ್ಯಕ್ಷನ್, ಡ್ಯಾನ್ಸ್‌ನಲ್ಲೂ ಇಷ್ಟವಾಗುತ್ತಾರೆ. ಆ ಮಟ್ಟಿಗೆ ಅವರು ಚಿತ್ರರಂಗಕ್ಕೆ ಭರವಸೆಯ ಬೆಳೆ. ನಾಯಕಿ ಸೋನಲ್‌ಗೆ ಕತೆಯಲ್ಲಿ ಅಷ್ಟಾಗಿ ಅವಕಾಶ ಸಿಕ್ಕಿಲ್ಲ. ಸಿಕ್ಕ ಅವಕಾಶದಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆನ್ನುವುದಷ್ಟೇ ಸಮಾ ಧಾನ. ವಿಲನ್ ಕ್ರಿಕೆಟ್ ಬುಕ್ಕಿ ಆಗಿ ಚಕ್ರವರ್ತಿ ಚಂದ್ರ ಚೂಡ್ ಅಬ್ಬರಿಸಿದ್ದಾರೆ. ಕನ್ನಡಕ್ಕೊಬ್ಬ ಖಡಕ್ ವಿಲನ್ ಸಿಕ್ಕ ಎಂದರೂ ತಪ್ಪಿಲ್ಲ. ಕಥಾ ನಾಯಕನ ತಾಯಿಯಾಗಿ ರೇಖಾ ಅವರ ಅಭಿನಯವೂ ಮನಸ್ಸಿಗೆ ನಾಟುತ್ತದೆ.

ಚಿತ್ರ ವಿಮರ್ಶೆ: ಸಾಗುತ ದೂರದೂರ

ಕತೆ ಚೆನ್ನಾಗಿದೆ, ಕಲಾವಿದರ ಅಭಿನಯ ಚೆನ್ನಾಗಿದೆ ಎನ್ನುವುದು ಬಿಟ್ಟರೆ ಅರ್ಜುನ್ ರಾಮ್ ಸಂಗೀತದಲ್ಲಾಗಲಿ, ಪ್ರಸಾದ್ ಬಾಬು ಛಾಯಾಗ್ರಹಣದಲ್ಲಾಗಲಿ ಅಷ್ಟೇನು ವಿಶೇಷತೆ ಇಲ್ಲ. ಉಳಿದ ತಾಂತ್ರಿಕ ಕೆಲಸಗಳಿಗೂ ಇಷ್ಟೇ ಮಾರ್ಕ್ಸ್ ಕೊಡಬಹುದು. ಇಷ್ಟಾಗಿ ಯೂ ಇದು ಒಮ್ಮೆ ನೋಡುವುದಕ್ಕೂ ಅಡ್ಡಿಯಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?